Connect with us

    LATEST NEWS

    ಕಸ್ಟಮ್ಸ್ ಅಧಿಕಾರಿಗಳ ಭರ್ಜರಿ ಭೇಟೆ ಕೋಟಿ ಮೌಲ್ಯದ ಅಕ್ರಮ ಚಿನ್ನ ವಶ

    ಕಸ್ಟಮ್ಸ್ ಅಧಿಕಾರಿಗಳ ಭರ್ಜರಿ ಭೇಟೆ ಕೋಟಿ ಮೌಲ್ಯದ ಅಕ್ರಮ ಚಿನ್ನ ವಶ

    ಮಂಗಳೂರು ಫೆಬ್ರವರಿ 11: ಮಂಗಳೂರಿನ ಕಸ್ಟಮ್ಸ್ ವಿಭಾಗದ ಡಿ ಆರ್ ಐ ಅಧಿಕಾರಿಗಳು ಭಾರೀ ಚಿನ್ನದ ಬೇಟೆಯಾಡಿದ್ದಾರೆ. ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಹಾಗೂ ಮಂಗಳೂರು ಸೆಂಟ್ರಲ್ ರೈಲ್ವೆ ನಿಲ್ದಾಣದಲ್ಲಿ ಕಾರ್ಯಾಚರಣೆ ನಡೆಸಿದ ಡಿ ಆರ್ ಐ ಅಧಿಕಾರಿಗಳು ಅಕ್ರಮ ಚಿನ್ನ ಸಾಗಾಟದ ಯತ್ನ ವಿಫಲಗೊಳಿಸಿತ್ತು ನಾಲ್ಕು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರಿಂದ ಬರೋಬ್ಬರಿ 1 ಕೋಟಿ ರೂಪಾಯಿ ಮೌಲ್ಯದ ಅಕ್ರಮ  ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ .

    ವಿಮಾನದ ಮೂಲಕ ಭಾರೀ ಚಿನ್ನದ ಸ್ಮಗ್ಲಿಂಗ್ ಕುರಿತು ಗುಪ್ತಚರ ಮಾಹಿತಿ ಕಲೆ ಹಾಕಿದ್ದ ಕಸ್ಟಮ್ಸ್ ವಿಭಾಗದ ಡಿ ಆರ್ ಐ ಅಧಿಕಾರಿಗಳು ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿಳಿಯುವ ಪ್ರಯಾಣಿಕರ ಮೇಲೆ ಹದ್ದಿನ ಕಣ್ಣಿಟ್ಟಿದ್ದರು .

    ಈ ನಡುವೆ ದುಬೈಯಿಂದ ಮಂಗಳೂರಿಗೆ ಸ್ಪೈಸ್ ಜೆಟ್ ವಿಮಾನದ ಮೂಲಕ ಬಂದಿಳಿದ ಕಾಸರಗೋಡು ಮೂಲದ ಹಸನ್ ಹಾಗೂ ಸಮೀರಾ  ದಂಪತಿಯ ಚಲನವಲನದ ಬಗ್ಗೆ ಸಂದೇಹ ವ್ಯಕ್ತಪಡಿಸಿದ ಡಿ ಆರ್ ಐ ಅಧಿಕಾರಿಗಳು ಅವರನ್ನು ತನಿಖೆಗೆ ಒಳಪಡಿಸಿದ್ದರು .
    ಈ ಸಂದರ್ಭದಲ್ಲಿ ಹಸನ್ ಹಾಗೂ ಸಮೀರಾ ಇಬ್ಬರು ಸೊಂಟದಲ್ಲಿ ಬೆಲ್ಟ್ ತರಹದ ವಸ್ತುವನ್ನು ಸುತ್ತಿಕೊಂಡಿರುವುದು ಅಧಿಕಾರಿಗಳಿಗೆ ಗೋಚರಿಸಿದೆ.

    ಆ ಬೆಲ್ಟನ್ನು ತೆಗೆದು ಪರಿಶೀಲನೆ ನಡೆಸಿದಾಗ ಬೆಲ್ಟ್ ನಲ್ಲಿ ಕಂದು ಬಣ್ಣದ ರಬ್ಬರ್ ನಂತಹ ವಸ್ತು ಇರುವುದು ಕಂಡು ಬಂದಿದೆ .ಈ ಕುರಿತು ಅನುಮಾನ ವ್ಯಕ್ತಪಡಿಸಿದ ಅಧಿಕಾರಿಗಳು ಆ ಕಂದು ಬಣ್ಣದ ವಸ್ತುವನ್ನು ಪರೀಕ್ಷೆಗೆ ಒಳಪಡಿಸಿದಾಗ ಅದರಲ್ಲಿ ಚಿನ್ನವನ್ನು ಮಿಶ್ರಣ ಮಾಡಿರುವುದು ಪತ್ತೆಯಾಗಿದೆ .ಈ ಹಿನ್ನೆಲೆಯಲ್ಲಿ ಹಸನ್ ಹಾಗೂ ಸಮೀರಾ ಅವರನ್ನು ಬಂಧಿಸಲಾಗಿದ್ದು ಅವರಿಂದ 2 ಕೆ ಜಿ ಚಿನ್ನವನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ .

    ಇನ್ನೊಂದು ಪ್ರಕರಣದಲ್ಲಿ ರೈಲ್ವೆ ಮೂಲಕ ಅಕ್ರಮ ಚಿನ್ನ ಸಾಗಾಟ ಮಾಡುತ್ತಿರುವ ಬಗ್ಗೆ ಮಾಹಿತಿ ಪಡೆದ ಡಿಆರ್ ಐ  ಅಧಿಕಾರಿಗಳು ಮಂಗಳೂರು ಮೂಲಕ ಹಾದು ಹೋಗುವ ಮರುಸಾಗರ್ ರೈಲನ್ನು ತಡೆದು ಪ್ರಯಾಣಿಕರನ್ನು ಪರಿಶೀಲನೆಗೆ ಒಳಪಡಿಸಿದ್ದಾರೆ ಈ ಸಂದರ್ಭದಲ್ಲಿ ಕೇರಳದ ಕೋಝಿಕೋಡ್ ಗೆ ಪ್ರಯಾಣಿಸುತ್ತಿದ್ದ ಮೊಯುದ್ದೀನ್ ಹಾಗೂ ಶಂಶುದ್ದೀನ್ ಎಂಬವರಿಂದ ಹದಿನಾರು ಚಿನ್ನದ ಬಿಸ್ಕೆಟ್ ಗಳನ್ನು ವಶಪಡಿಸಿಕೊಂಡಿದ್ದಾರೆ . ಈ ಚಿನ್ನದ ಬಿಸ್ಕೆಟ್ ಗಳನ್ನು ಈ ಇಬ್ಬರು ನೇಪಾಳದ ಮೂಲಕ ಭಾರತಕ್ಕೆ ತಂದು ಕೇರಳಕ್ಕೆ ಅಕ್ರಮವಾಗಿ ಸಾಗಿಸುತ್ತಿದ್ದರು ಎಂದು ಹೇಳಲಾಗಿದೆ .

    ಈ ಎರಡೂ ಪ್ರಕರಣದಲ್ಲಿ ನಾಲ್ಕು ಮಂದಿ ಆರೋಪಿಗಳನ್ನು ಡಿ ಆರ್ ಐ ಅಧಿಕಾರಿಗಳು ಬಂಧಿಸಿ 1 ಕೋಟಿ ರೂಪಾಯಿ ಮೌಲ್ಯದ ಅಕ್ರಮ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ .

    Share Information
    Advertisement
    Click to comment

    You must be logged in to post a comment Login

    Leave a Reply