Connect with us

    LATEST NEWS

    ಸೆಲ್ಫೀ ಯಲ್ಲಿ ಕೈ ಬೆರಳು ತೋರಿಸಿದರೆ ನಿಮ್ಮ ಬ್ಯಾಂಕ್ ಖಾತೆ ಹ್ಯಾಕ್

    ಸೆಲ್ಫೀ ಯಲ್ಲಿ ಕೈ ಬೆರಳು ತೋರಿಸಿದರೆ ನಿಮ್ಮ ಬ್ಯಾಂಕ್ ಖಾತೆ ಹ್ಯಾಕ್

    ಬೆಂಗಳೂರು ಜುಲೈ 4: ಜಗತ್ತಿನಲ್ಲಿ ಮೊಬೈಲ್ ನಲ್ಲಿ ಸೆಲ್ಪಿ ತೆಗೆದುಕೊಳ್ಳದೇ ಇರುವವರು ಬಹಳ ವಿರಳ, ಮೊಬೈಲ್ ನಲ್ಲಿ ಸೆಲ್ಪಿ ಕ್ಲಿಕ್ಕಿಸುವುದು ಈಗ ಒಂದು ಫ್ಯಾಷನ್ ಆಗಿ ಬಿಟ್ಚಿದೆ. ದೇಶದ ಪ್ರಧಾನಮಂತ್ರಿಯವರಿಂದ ಹಿಡಿದು ಸೆಲ್ಪಿ ತೆಗೆಯದೇ ಇರುವುವರು ಬಹಳ ಕಡಿಮೆ. ಆದರೆ ಅದೇ ಸೆಲ್ಪಿ ಪೋಟೋದಿಂದಾಗಿ ನಿನ್ನ ಬ್ಯಾಂಕ್ ಖಾತೆ ಹ್ಯಾಕ್ ಆಗುವ ಸಾಧ್ಯತೆ ಹೆಚ್ಚಾಗಿದೆ.

    ಸಾಮಾನ್ಯವಾಗಿ ಸೆಲ್ಪೀ ಪೋಟೋ ತೆಗೆಯುವಾಗ ವಿಕ್ಟರಿ ಚಿಹ್ನೆ ರೀತಿಯಲ್ಲಿ ಕೈಬೆರಳುಗಳನ್ನು ತೋರಿಸುವುದು ರೂಢಿ, ಇದೇ ಪೋಟೋ ಸೈಬರ್ ಖದೀಮರ ಕೈಗೆ ಸಿಕ್ಕರೆ ನಿಮ್ಮ ಕೈ ಬೆರಳಿನ ಗರುತನ್ನು ಪೋಟೋ ದಿಂದ ತೆಗೆದು ನಿಮ್ಮ ಬ್ಯಾಂಕ್‌ ಖಾತೆಗೆ ಕನ್ನ ಹಾಕುವ ಸಾಧ್ಯತೆಯೂ ಇದೆ.

    ಸೈಬರ್‌ ಖದೀಮರಿಂದ ಮೋಸಕ್ಕೊಳಗಾಗದಂತೆ ಜಾಗೃತಿ ಮೂಡಿಸುವ ಮತ್ತು ಎಚ್ಚರಿಸುವ ವೀಡಿಯೋವನ್ನು ಐಪಿಎಸ್‌ ಅಧಿಕಾರಿ ಐಜಿಪಿ ರೂಪಾ ಅವರು ಸಾಮಾಜಿಕ ಜಾಲತಾಣ ಟ್ವಿಟ್ಟರ್‌ನಲ್ಲಿ ಶೇರ್‌ ಮಾಡಿದ್ದಾರೆ. ಸೆಲ್ಫೀ ಫೋಟೋ ತೆಗೆಯುವಾಗ ವಿಕ್ಟರಿ ಮಾರ್ಕ್‌ಗಾಗಿ ಎರಡು ತೋರು ಬೆರಳುಗಳನ್ನು ಇಂಗ್ಲಿಷ್‌ನ ಅಕ್ಷರ ‘ವಿ’ ಆಕಾರದಲ್ಲಿ ತೋರಿಸುವುದು, ಡನ್‌ ಎಂದು ಹೇಳಲು ಹೆಬ್ಬೆಟ್ಟುಗಳನ್ನು ತೋರಿಸಿರುವ ಫೋಟೋಗಳನ್ನು ಸಾಮಾಜಿಕ ಜಾಲ ತಾಣಗಳಲ್ಲಿ ಹಂಚಿಕೊಂಡರೆ ಅಪಾಯ ಕಟ್ಟಿಟ್ಟ ಬುತ್ತಿ ಎನ್ನುವುದನ್ನು ಈ ವೀಡಿಯೋ ಹೇಳುತ್ತಿದೆ.

    ಸದ್ಯ ಲಭ್ಯವಿರುವ ಆಧುನಿಕ ತಂತ್ರಜ್ಞಾನದ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ನಾವು ಅಪ್‌ಲೋಡ್‌ ಮಾಡಿದ ಬೆರಳುಗಳ ಮೂಲಕ ಬೆರಳೀನ ಗುರುತುಗಳನ್ನು (ಬೆರಳಚ್ಚು) ಪತ್ತೆಹಚ್ಚಿ ತಂತ್ರಜ್ಞಾನದ ನೆರವಿನಿಂದಲೇ ಅದೇ ರೀತಿಯ ಬೆರಳಚ್ಚನ್ನು ಮರು ಸೃಷ್ಟಿಸಿ ಖಾತೆಗಳಿಗೆ ಕನ್ನ ಹಾಕಬಹುದು ಎನ್ನುವುದು ವಿಡಿಯೋದಲ್ಲಿ ತೋರಿಸಲಾಗಿದೆ.

    ಇನ್ನು ಮುಂದೆ ಸೆಲ್ಪಿ ತೆಗೆಯುವಾಗಿ ಕೈ ಬೆರಳುಗಳು ಪೋಟೋದಲ್ಲಿ ಬರದಂತೆ ನೋಡಿಕೊಳ್ಳುವುದು ಉತ್ತಮ.

    VIDEO

    Share Information
    Advertisement
    Click to comment

    You must be logged in to post a comment Login

    Leave a Reply