ಅಯ್ಯಪ್ಪನ ನೋಡಲು ಶಬರಿಮಲೆಗೆ ಪಾದಯಾತ್ರೆಯ ಮೂಲಕ ತೆರಳುತ್ತಿದೆ ಈ ಶ್ವಾನ

ಮಂಗಳೂರು ನವೆಂಬರ್ 17: ವಾರ್ಷಿಕ ಶಬರಿಮಲೆ ಯಾತ್ರೆ ಆರಂಭವಾಗಿದ್ದು, ಈಗಾಗಲೇ ಭಕ್ತರು ಮಾಲೆ ಧರಿಸಿ ವೃತ ಆರಂಭಿಸಿದ್ದಾರೆ. ಈ ನಡುವೆ ಪಾದಯಾತ್ರೆಯ ಮೂಲಕ ಶಬರಿಮಲೆ ತೆರಳು ಭಕ್ತರು ತಮ್ಮ ಯಾತ್ರೆಯನ್ನು ಆರಂಭಿಸಿದ್ದು, ಈಗಾಗಲೇ ರಸ್ತೆಯ ಬದಿಯಲ್ಲಿ ಸ್ವಾಮಿಗಳು ಕಾಣ ಸಿಗುತ್ತಿದ್ದಾರೆ.

ಪಾದ ಯಾತ್ರೆ ಮೂಲಕ ಶಬರಿಮಲೆಗೆ ಹೊರಟ ಮೂಡಬಿದಿರೆಯ ತಂಡದ ಜೊತೆ ನಾಯಿ ಕೂಡ ಸೇರಿಕೊಂಡಿದ್ದು ಈಗ ಅಚ್ಚರಿಗೆ ಕಾರಣವಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದರೆಯ ತೋಡಾರು ಗ್ರಾಮದ 6 ಮಂದಿ ಮಾಲಾಧಾರಿಗಳು ತಿರುಪತಿಯಿಂದ ಅಕ್ಟೋಬರ್​ 31ರಂದು ಪಾದಯಾತ್ರೆ ಆರಂಭಿಸಿದ್ದಾರೆ.

ತಿರುಪತಿಯಿಂದ ಶಬರಿಮಲೆಗೆ ಪಾದಯಾತ್ರೆ ಮೂಲಕ ಹೊರಟ ಇವರ ಜೊತೆ ನಾಯಿಯೊಂದು ಸೇರಿಕೊಂಡಿದ್ದು, ತಾನು ಪಾದಯಾತ್ರೆ ಆರಂಭಿಸಿದ್ದು, ಮಾಲಾಧಾರಿಗಳ ಜೊತೆ ಈಗಾಗಲೇ 16 ದಿನ ಸುಮಾರು 522 ಕಿಲೋ ಮೀಟರ್ ದೂರ ಹೆಜ್ಜೆ ಹಾಕಿದೆ. ಈ ಮಧ್ಯೆ 2 ಬಾರಿ ನಾಯಿಯ ಕಾಲುಗಳಿಗೆ ಚಿಕಿತ್ಸೆಯನ್ನು ಕೂಡ ನೀಡಲಾಗಿದ್ದು, ಆದರೂ ಕೂಡ ಶಬರಿ ಮಲೆ ಮಾಲಾಧಾರಿಗಳನ್ನು ಹಿಂಬಾಲಿಸಿ ಶಬರಿಮಲೆಯತ್ತ ಹೊರಟಿದೆ. ಡಿಸೆಂಬರ್31 ಅಯ್ಯಪ್ಪ ಮಾಲಾಧಾರಿಗಳು ಶಬರಿಮಲೆ ತಲುಪಲಿದ್ದಾರೆ. ಶ್ವಾನವು ಕೂಡ ಶಬರಿಮಲೆಯಾತ್ರೆ ಕೈಗೊಂಡಿದ್ದು ಅಚ್ಚರಿ ಮೂಡಿಸಿದೆ.

Facebook Comments

comments