ಮಂಗಳೂರು ನವೆಂಬರ್ 27: ಸಾರ್ವಜನಿಕ ಸ್ಥಳಗಳಲ್ಲಿ ಬೀದಿ ನಾಯಿಗಳ ನಿಯಂತ್ರಣಕ್ಕೆಎಲ್ಲಾ ಸ್ಥಳಿಯಾಡಳಿತ ಸಂಸ್ಥೆಗಳು ತಕ್ಷಣದಿಂದಲೇ ಕಾರ್ಯಾಚರಣೆ ನಡೆಸಬೇಕು ಎನ್ನುವ ಸುಪ್ರೀಕೋರ್ಟ್ ಅದೇಶದ ಹಿನ್ನಲೆಯಲ್ಲಿ ಇತ್ತೀಚಿನ ದಿನಗಳಲ್ಲಿ ಬೀದಿ ನಾಯಿಗಳನ್ನು ಸುರಕ್ಷಿಣ ಆಶ್ರಯತಾಣಗಳಿಗೆ ಬಿಡುವ, ನಾಯಿಗಳಿಗೆ ಸಂತಾನಹರಣ ಚಿಕಿತ್ಸೆ ನಡೆಸುವ ಪ್ರಕ್ರಿಯೆ ಆರಂಭಗೊಂಡಿದೆ.


ನಾಯಿಗಳನ್ನು ಸೆರೆಹಿಡಿಯಲು ಬರುವ ಗ್ರಾಮಪಂಚಾಯತ್ ಗಳ ಸಿಬ್ಬಂದಿ ಸೇರಿದಂತೆ ಪ್ರಾಣಿದಯಾ ಸಂಘವೂ ಈ ಪ್ರಕ್ರಿಯೆಯಲ್ಲಿ ನಿರತವಾಗಿದೆ. ನಾಯಿಗಳನ್ನು ಹಿಡಿಯಲೆಂದೇ ತಜ್ಞ ಸಿಬ್ಬಂದಿಗಳನ್ನು ಪ್ರತಿಯೊಂದು ತಂಡದಲ್ಲೂ ಆಯ್ಕೆ ಮಾಡಲಾಗಿದೆ. ಈ ತಂಡ ದೊಡ್ಡದಾದ ಬಲೆಯನ್ನು ಹಿಡಿದುಕೊಂಡು ಬೀದಿಯೆಲ್ಲಾ ಸುತ್ತಿ ನಾಯಿಗಳನ್ನು ಹಿಡಿಯಲು ಆರಂಭಿಸಿದ್ದಾರೆ. ಈ ಹುಡುಕಾಟದ ನಡುವೆ ಕೆಲವೊಂದು ಸ್ವಾರಸ್ಯಕರ ಘಟನೆಗೂ ನಡೆದು ಹೋಗುತ್ತವೆ. ಇಂತಹುದೇ‌ ಒಂದು ಘಟನೆ ದಕ್ಷಿಣಕನ್ನಡ ಜಿಲ್ಲೆಯ ಕೋಟೆಕಾರು ಪಟ್ಟಣ ಪಂಚಾಯತ್ ವ್ಯಾಪ್ತಿಯ ಮಡ್ಯಾರು ಎಂಬಲ್ಲಿ ನಡೆದಿದೆ. ಕೋಟೆಕಾರು ಪಟ್ಟಣ ಪಂಚಾಯತ್ ನ ಸಿಬ್ಬಂದಿಗಳು ಮತ್ತು ಎನಿಮಲ್‌ ಕೇರ್ ಸಂಸ್ಥೆಯ ಸಿಬ್ಬಂದಿಗಳು ನಾಯಿಗಾಗಿ‌ ಹುಡುಕಾಟ ನಡೆಯುವ ಸಂದರ್ಭದಲ್ಲಿ ಹೆಣ್ಣು ಬೀದಿ ನಾಯೊಂದು ಅವರ ಕಣ್ಣಿಗೆ ಬಿದ್ದಿದೆ. ತಕ್ಷಣವೇ ತಮ್ಮ ವಾಹನವನ್ನು ನಿಲ್ಲಿಸಿ ಅದರಲ್ಲಿ ಇದ್ದ ನಾಯನ್ನು ಹಿಡಿಯುವ ಬಲೆಯನ್ನು ಹಿಡಿದು ನಾಯಿಯ‌ ಬಳಿ ಧಾವಿಸಿ‌ ಬಂದಿದ್ದಾರೆ. ಈ ಸಂದರ್ಭದಲ್ಲಿ ನಾಯಿಗೆ ಒಮ್ಮೆಗೇ ಶಾಕ್ ಆಗಿದ್ದು, ತಮ್ಮನ್ನು ಹಿಡಿಯುವವರಿಂದ ಅದು ತಪ್ಪಿಸಿಕೊಳ್ಳಲು ಪ್ರಯತ್ನಿಸಿದೆ. ರಸ್ತೆಯ ಒಂದು ಪಕ್ಕದಲ್ಲಿ ನಾಯಿ ಮತ್ತು ನಾಯಿಯನ್ನು ಹಿಡಿಯಲು ಸಿದ್ಧವಾದ ತಂಡವಿತ್ತು. ರಸ್ತೆಯ ಮಧ್ಯೆ‌ ವಾಹನಗಳು ಸಂಚರಿಸುತ್ತಲೇ ಇದ್ದವು. ತನ್ನನ್ನು ಹಿಡಿಯಲು ಬರುವವರಿಂದ ತಪ್ಪಿಸಿಕೊಳ್ಳಲು ನಾಯಿಯಿದ್ದ ಒಂದೇ ದಾರಿ ರಸ್ತೆ ದಾಟಿ ಆ ಕಡೆಗೆ ಹೋಗೋದಾಗಿತ್ತು.

ಇದನ್ನೂ ಓದಿ- ಪುತ್ತಿಲ ಪರಿವಾರದ ಮೂವರಿಗೆ ಬಿಜೆಪಿಯಿಂದ ಕೋಕ್ – ಬಿಜೆಪಿ ಮತ್ತು ಪುತ್ತಿಲ ಪರಿವಾರದ ನಡುವಿನ ಬಿರುಕು ಬಹಿರಂಗ

ರಸ್ತೆ ದಾಟಲು ಮನುಷ್ಯರನ್ನೇ ಬಿಡದ ವಾಹನ ಸವಾರರು ಇನ್ನು ನಾಯನ್ನು ಬಿಡುವುದಿದೆಯೇ? . ಹೇಗಾದರೂ ಮಾಡಿ ರಸ್ತೆ ದಾಟಲು ಮುಂದಾಗಿ ರಸ್ತೆಯ ಮಧ್ಯೆ ಬಂದಾಗ ಆ ಕಡೆ ಈ ಕಡೆ ಎಲ್ಲಾ ಕಡೆಗಳಿಂದ ವಾಹನಗಳು ಬಂದಿವೆ. ಅರ್ಧ ರಸ್ತೆಯನ್ನು ನಡೆದುಕೊಂಡೇ ದಾಟಿದ್ದ ನಾಯಿ ವಾಹನ ದಟ್ಟಣೆ ಜಾಸ್ತಿಯಾದಂತೆ ಏಕಾಏಕಿ ಹಿಂಬದಿ ಕಾಲಿನಲ್ಲಿ ಬಲವಿಲ್ಲದಂತೆ ರಸ್ತೆಯಲ್ಲಿ ಜಾರಲು ಆರಂಭಿಸಿದೆ. ನಾಯಿಯ ಸ್ಥಿತಿ ಕಂಡ ವಾಹನ ಸವಾರರು ತಮ್ಮ ವಾಹನಗಳನ್ನು ನಿಲ್ಲಿಸಿ ಬಡಪಾಯಿ ನಾಯಿ ರಸ್ತೆ ದಾಟಲು ಅನುವು ಮಾಡಿಕೊಟ್ಟಿದ್ದಾರೆ. ನಾಯಿ ಹಿಡಿಯಲು ಬಂದ ಸಿಬ್ಬಂದಿಗಳು ತಮ್ಮ ಕಣ್ಣಿನಿಂದ ದೂರ ಆಗೋವರೆಗೂ ಆ ನಾಯಿ ಜಾರಿಕೊಂಡೇ ಬಲುದೂರ ಸಾಗಿದೆ.

ಇದನ್ನೂ ಓದಿ- ಪ್ರಧಾನಿ ನರೇಂದ್ರ ಮೋದಿ ನಾಳೆ ಕೃಷ್ಣ ನಗರಿಗೆ, ಎಲ್ಲೆಡೆ ಕಟ್ಟೆಚ್ಚರ ಉಡುಪಿ ಫುಲ್ ಕೇಸರಿಮಯ..!

ಇತ್ತಕಡೆ ನಾಯಿಯನ್ನು  ಕಂಡ ಎನಿಮಲ್ ಕೇರ್ ತಂಡಕ್ಕೆ ತಪ್ಪಿಸಿಕೊಂಡ ನಾಯಿಗೆ ಈ ಮೊದಲು ಶಸ್ತ್ರಚಿಕಿತ್ಸೆ ಮಾಡಿರುವ ವಿಚಾರ ತಿಳಿದು ನಾಯಿಯನ್ನು ಬಿಟ್ಟು ಇನ್ನೊಂದು ನಾಯಿಯ ಬೇಟೆಗೆ ತೆರಳಿದ್ದಾರೆ‌‌. ಅಂದಹಾಗೆ ರಸ್ತೆಯನ್ನು ಮಧ್ಯಭಾಗದವರೆಗೂ ಸರಿಯಾಗಿಯೇ ದಾಟಿದ್ದ ನಾಯಿ, ಬಳಿಕ ಜಾರಿಕೊಂಡು ದಾಟಲು ಕಾರಣವೇನು ಅನ್ನೋದು ಮಾತ್ರ ಪ್ರಶ್ನೆಯಾಗಿಯೇ ಉಳಿದಿದೆ.

Share Information