ಇಂದು ಮತ್ತೆ ಕಾರ್ ಸ್ಟ್ರೀಟ್ ನಲ್ಲಿ ದಾಖಲೆಗಳಿಲ್ಲದ 24 ಲಕ್ಷ ಅಕ್ರಮ ಹಣ ವಶ

ಮಂಗಳೂರು ಮೇ 18: ಮಂಗಳೂರಿನ ಕಾರ್ ಸ್ಟ್ರೀಟ್ ನಲ್ಲಿ ಇಂದು ಮತ್ತೆ ಅಕ್ರಮ ಹಣವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಇಂದು ಬೆಳಿಗ್ಗೆ ನಗರದ ಕಾರ್ ಸ್ಟ್ರೀಟ್ ನಲ್ಲಿ ದಾಖಲೆಗಳಿಲ್ಲದ 24 ಲಕ್ಷ ರೂಪಾಯಿ ಹಣವನ್ನು ಬಂದರು ಪೊಲೀಸರು ಕಾರ್ಯಾಚರಣೆ ನಡೆಸಿ ವಶಕ್ಕೆ ಪಡೆದಿದ್ದಾರೆ. ಈ ಸಂಬಂಧ ಮಂಜುನಾಥ್ ಎಂಬತನನ್ನು ಬಂದರು ಪೊಲೀಸರು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ.

ನಿನ್ನೆ ಮಂಗಳೂರಿನ ಕಾರ್ ಸ್ಟ್ರೀಟ್ ನಲ್ಲಿ ದಾಖಲೆಗಳಿಲ್ಲದೆ ಬೆಂಗಳೂರಿನಿಂದ ಮಂಗಳೂರಿಗೆ ಅಕ್ರಮವಾಗಿ 1 ಕೋಟಿ ರೂಪಾಯಿ ನಗದು ಸಾಗಿಸುತ್ತಿದ್ದ ವ್ಯಕ್ತಿಯೊಬ್ಬರನ್ನು ಪೊಲೀಸರು ಬಂಧಿಸಿದ್ದರು.

ನಗರದಲ್ಲಿ ಅಕ್ರಮ ಹಣ ರವಾನೆಯಾಗುತ್ತಿರುವ ಮಾಹಿತಿ ಹಿನ್ನಲೆಯಲ್ಲಿ ಮಂಗಳೂರು ಪೊಲೀಸರು ನಗರದಾದ್ಯಂತ ಬಿಗು ತಪಾಸಣೆ ನಡೆಸುತ್ತಿದ್ದಾರೆ.