Connect with us

    LATEST NEWS

    ರಸ್ತೆ ಅಪಘಾತದಲ್ಲಿ ಡಿಎಂಕೆ ಸಂಸದ ಎನ್‌ಆರ್‌ ಇಳಂಗೋವನ್‌ ಪುತ್ರ ದುರ್ಮರಣ

    ಚೆನ್ನೈ: ತಮಿಳುನಾಡಿನ ಡಿಎಂಕೆ ರಾಜ್ಯಸಭಾ ಸಂಸದ ಎನ್‍ಆರ್ ಇಳಂಗೋವನ್ ಅವರ ಪುತ್ರ ರಾಕೇಶ್(22) ಭೀಕರ ರಸ್ತ ಅಪಘಾತದಲ್ಲಿ ಸಾವನಪ್ಪಿದ್ದಾರೆ.


    ಪುದುಚೇರಿಯಿಂದ ಚೆನ್ನೈಗೆ ರಾಕೇಶ್ ಪ್ರಯಾಣಿಸುತ್ತಿದ್ದ ವೇಳೆ ಈ ಘಟನೆ ಸಂಭವಿಸಿದೆ. ಕಾರು ವಾಹನವು ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದ ಪಲ್ಟಿಯಾಗಿದ್ದು, ಪರಿಣಾಮ ರಾಕೇಶ್ ಸ್ಥಳದಲ್ಲಿಯೇ ಸಾವನ್ನಪ್ಪಿದಾರೆ ಮತ್ತು ಮತ್ತೋರ್ವ ಪ್ರಯಾಣಿಕ ತೀವ್ರವಾಗಿ ಗಾಯಗೊಂಡಿದ್ದಾರೆ.


    ಸದ್ಯ ಈ ಘಟನೆ ಕುರಿತಂತೆ ಇನ್ನೂ ಹೆಚ್ಚಿನ ಮಾಹಿತಿ ಕಲೆಹಾಕಲಾಗುತ್ತಿದೆ. ಸ್ಥಳಕ್ಕೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ. ಇದೀಗ ಗಾಯಾಳು ಪ್ರಯಾಣಿಕನನ್ನು ಸಮೀಪದಲ್ಲಿರುವ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
    ಮಾಜಿ ಹಿರಿಯ ವಕೀಲರಾದ ಎನ್‍ಆರ್ ಇಳಂಗೋವನ್ ಅವರು 2020ರಲ್ಲಿ ತಮಿಳುನಾಡಿನಿಂದ ರಾಜ್ಯಸಭಾ ಸದಸ್ಯರಾದರು. ಇದೇ ಮೊದಲ ಅವರ ಮೊದಲ ಅವಧಿಯಾಗಿದೆ.

    Share Information
    Advertisement
    Click to comment

    You must be logged in to post a comment Login

    Leave a Reply