Connect with us

BANTWAL

ಮಾಜಿ ಕೇಂದ್ರ ಸಚಿವ ಜನಾರ್ಧನ ಪೂಜಾರಿ ಆಶೀರ್ವಾದ ಪಡೆದ ಡಿಕೆಶಿ

ಬಂಟ್ವಾಳ ಜು 31: ದಕ್ಷಿಣಕನ್ನಡ ಪ್ರವಾಸದಲ್ಲಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಮಾಜಿ ಕೇಂದ್ರ ಸಚಿವ ಹಿರಿಯ ಕಾಂಗ್ರೇಸ್ ಮುಖಂಡ ಜನಾರ್ಧನ ಪೂಜಾರಿ ಅವರನ್ನು ಬಂಟ್ವಾಳದ ಮನೆಯಲ್ಲಿ ಭೇಟಿಯಾಗಿ ಆರೋಗ್ಯ ವಿಚಾರಿಸಿದರು.
ಕಾಂಗ್ರೇಸ್ ನ ಹಿರಿಯ ಮುಖಂಡರಾಗಿರುವ ಜನಾರ್ಧನ ಪೂಜಾರಿ ಇತ್ತೀಚೆಗಷ್ಟೇ ಕೊರೊನಾದಿಂದ ಸಂಪೂರ್ಣ ಗುಣಮುಖರಾಗಿ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ.


ಕೆಪಿಸಿಸಿ ಅಧ್ಯಕ್ಷರಾದ ಬಳಿಕದ ಜಿಲ್ಲೆಗೆ ಮೊದಲ ಭೇಟಿ ಇದಾಗಿದ್ದು, ಜಿಲ್ಲೆಯ ಹಿರಿಯ ನಾಯಕರುಗಳಾದ ಆಸ್ಕರ್ ಹಾಗೂ ಪೂಜಾರಿಯವರನ್ನು ಭೇಟಿಯಾಗಿ ರಾಜ್ಯದ ರಾಜಕೀಯ ವಿಚಾರಗಳ ಕುರಿತಾಗಿ ಚರ್ಚೆ ನಡೆಸಿದ್ದಾರೆ.
ಕೆಪಿಸಿಸಿ ಕಾರ್ಯದರ್ಶಿ ಸಲೀಂ ಆಹಮ್ಮದ್ ಮಾಜಿ ಸಂಸದ ವಿನಯಕುಮಾರ್ ಸೊರಕೆ, ಜನಾರ್ಧನ ಪೂಜಾರಿಯವರ ಪುತ್ರ ದೀಪಕ್ ಪೂಜಾರಿ ಈ ಸಂದರ್ಭ ಉಪಸ್ಥಿತರಿದ್ದರು.

Facebook Comments

comments