Connect with us

LATEST NEWS

ಕೊರೊನಾ ಹೆಣದ ಮೇಲೆ ಹಣ ಮಾಡುತ್ತಿದೆ ಬಿಜೆಪಿ – ಡಿ.ಕೆ.ಶಿವಕುಮಾರ್

ಮಂಗಳೂರು ಜುಲೈ 31: ಸಾಂಕ್ರಾಮಿಕ ಕೊರೊನಾ ಸಂದರ್ಭದಲ್ಲೂ ಭ್ರಷ್ಟಾಚಾರ ನಡೆಸಿರುವವ ಬಿಜೆಪಿಯವರನ್ನು ಜನರೇ ಒಂದು ದಿನ ಹಳೆ ಪೊರಕೆಯಲ್ಲಿ ಕ್ಲೀನ್ ಮಾಡಲಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. ಕೊರೊನಾ ಹೆಣದ ಮೇಲೂ ಬಿಜೆಪಿಯವರು ಹಣ ಮಾಡಲು ಹೊರಟಿದ್ದಾರೆ ಎಂದು ಆರೋಪಿಸಿದ್ದಾರೆ.

ದಕ್ಷಿಣಕನ್ನಡ ಜಿಲ್ಲಾ ಪ್ರವಾಸದಲ್ಲಿರುವ ಡಿ.ಕೆ.ಶಿವಕುಮಾರ್ ಮಂಗಳೂರಿನ ಕಾಂಗ್ರೆಸ್‌ ಪಕ್ಷದ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಕೊರೊನಾ ವಿಚಾರದಲ್ಲಿ ರಾಜ್ಯ ಸರ್ಕಾರ 40000 ಕೋಟಿ ರೂಪಾಯಿ ಖರ್ಚು ಮಾಡಿ 2000 ಕೋಟಿ ರೂಪಾಯಿ ಹಣವನ್ನು ಲೂಟಿ ಮಾಡಿದೆ ಎಂದು ಆರೋಪಿಸಿದ ಡಿಕೆಶಿ, ಈ ಬಗ್ಗೆ ಸರ್ಕಾರದ ದಾಖಲೆಯೇ ಹೇಳುತ್ತಿದೆ. ನಾನೇನಾದರೂ ಸುಳ್ಳು ಹೇಳುತ್ತಿದ್ದರೆ ನನ್ನ ಮೇಲೆ ಮಾನನಷ್ಟ ಮೊಕದ್ದಮೆ ಹಾಕಿ ಅಥವಾ ಕೇಸ್ ಹಾಕಿ ಜೈಲಿಗೆ ಹಾಕಿ ಎಂದು ಸವಾಲೆಸೆದರು.


ಕೊರೊನಾ ರೋಗಿಗಳಿಗೆ ಮತ್ತು ವೈದ್ಯಕೀಯ ಸಿಬ್ಬಂದಿಗೆ ಧೈರ್ಯ ತುಂಬಲು ಒಬ್ಬ ಮಂತ್ರಿಯೂ ಆಸ್ಪತ್ರೆಗೆ ಹೋಗಲಿಲ್ಲ ಎಂದ ಡಿಕೆಶಿ, ತುಳುನಾಡಿನ ಜನರು ಬಾಂಬೆ, ವಿದೇಶಗಳಿಗೆ ಹೋಗಿ ಈ ಜಿಲ್ಲೆಯನ್ನು ಅಭಿವೃದ್ಧಿ ಮಾಡಿದ್ದಾರೆ. ನೀವು ನೋಡಿದರೆ ಅವರು ಬಾಂಬೆಯಿಂದ ಬಂದರೆ ಬೀಗ ಹಾಕುತ್ತಿದ್ದೀರಿ, ಇದೇನಾ ತುಳುನಾಡಿನ ಜನರನ್ನು ನೋಡುವ ರೀತಿ? ಇದೇನಾ ಬಿಜೆಪಿ ಸಂಸ್ಕೃತಿ? ಇದೇನಾ ಆರೆಸ್ಸೆಸ್ ಸಂಸ್ಕೃತಿ ಎಂದು ಪ್ರಶ್ನಿಸಿದರು.

Facebook Comments

comments