Connect with us

LATEST NEWS

ದಕ್ಷಿಣಕನ್ನಡ ಲೋಕಸಭಾ ಬಿಜೆಪಿ ಅಭ್ಯರ್ಥಿ ನಳಿನ್ ಕಟೀಲ್ ಕದ್ರಿ ಪಾರ್ಕ್ ನಲ್ಲಿ ಮತಯಾಚನೆ

ದಕ್ಷಿಣಕನ್ನಡ ಲೋಕಸಭಾ ಬಿಜೆಪಿ ಅಭ್ಯರ್ಥಿ ನಳಿನ್ ಕಟೀಲ್ ಕದ್ರಿ ಪಾರ್ಕ್ ನಲ್ಲಿ ಮತಯಾಚನೆ

ಮಂಗಳೂರು ಎಪ್ರಿಲ್ 7: ದಕ್ಷಿಣಕನ್ನಡ ಲೋಕಸಭಾ ಕ್ಷೇತ್ರ ಚುನಾವಣಾ ಪ್ರಚಾರ ಕಾರ್ಯ ಭರದಿಂದ ಸಾಗುತ್ತಿದ್ದು, ಎರಡು ಪಕ್ಷಗಳ ಅಭ್ಯರ್ಥಿಗಳು ಬೆಳಿಗ್ಗೆಯಿಂದ ರಾತ್ರಿಯವರೆಗೆ ಮತಯಾಚನೆಯಲ್ಲಿ ತೊಡಗಿದ್ದಾರೆ.

ಇಂದು ಮುಂಜಾನೆ ಮಂಗಳೂರಿನ ಕದ್ರಿ ಪಾರ್ಕ್ ಬಳಿ ದಕ್ಷಿಣ ಕನ್ನಡ ಬಿಜೆಪಿ ಲೋಕಸಭಾ ಅಭ್ಯರ್ಥಿ ಸಂಸದ ನಳಿನ್ ಕುಮಾರ್ ಕಟೀಲ್ ಅವರು ಮತಯಾಚಿಸಿದರು. ಮುಂಜಾನೆ ಕರ್ದಿ ಪಾರ್ಕ್ ಗೆ ವಾಕಿಂಗ್ ಗೆ ಬರುವ ಸಾರ್ವಜನಿಕರಲ್ಲಿ ಮತಯಾಚನೆ ನಡೆಸಿದರು.

ಈ ಸಂದರ್ಭದಲ್ಲಿ ಮಾಜಿ ಸಚಿವರಾದ ಶ್ರೀ ಕೃಷ್ಣ ಜೆ ಪಾಲೆಮಾರ್, ಶ್ರೀ ನಾಗರಾಜ ಶೆಟ್ಟಿ, ಮಾಜೀ ಶಾಸಕ ಯೋಗೀಶ್ ಭಟ್, ಮಾಜಿ ವಿಧಾನ ಪರಿಷತ್ ಸದಸ್ಯರಾದ ಮೋನಪ್ಪ ಭಂಡಾರಿ, ಮಾ.ನ.ಪಾ ಸದಸ್ಯರಾದ ಸುಧೀರ್ ಶೆಟ್ಟಿ, ಪ್ರೇಮಾನಂದ್ ಶೆಟ್ಟಿ, ರೂಪ ಬಂಗೇರ, ಪಕ್ಷದ ಮುಖಂಡರಾದ ರಾಜ್ ಗೋಪಾಲ್ ರೈ, ಸಂಧ್ಯಾ ವೆಂಕಟೇಶ್ ಹಾಗೂ ಮೊದಲಾದ ನಾಯಕರು ಜೊತೆಗಿದ್ದರು.

Facebook Comments

comments