Connect with us

LATEST NEWS

ದಕ್ಷಿಣಕನ್ನಡ ಜಿಲ್ಲೆ 297 ; ಉಡುಪಿ 209 ಕೊರೊನಾ ಪಾಸಿಟಿವ್ ಪ್ರಕರಣ

ಮಂಗಳೂರು ಅಗಸ್ಟ್ 27: ದಕ್ಷಿಣಕನ್ನಡ ಜಿಲ್ಲೆಯಲ್ಲಿ ಇಂದು 297 ಕೊರೊನಾ ಪಾಸಿಟಿವ್ ಪ್ರಕರಣ ದಾಖಲಾಗಿದೆ. ಇಂದು 7 ಮಂದಿ ಕೊರೊನಾದಿಂದ ಸಾವನಪ್ಪಿದ್ದಾರೆ. ಇಂದಿನ 297 ಪ್ರಕರಣಗಳೊಂದಿಗೆ ದಕ್ಷಿಣಕನ್ನಡದಲ್ಲಿ ಒಟ್ಟು ಸೊಂಕಿತರ ಸಂಖ್ಯೆ 11389 ಕ್ಕೆ ಏರಿಕೆಯಾಗಿದೆ. ಇಂದು ಜಿಲ್ಲೆಯಲ್ಲಿ 257 ಮಂದಿ ಕೊರೊನಾದಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಸದ್ಯ ಜಿಲ್ಲೆಯಲ್ಲಿ 2372 ಸಕ್ರಿಯ ಕೊರೊನಾ ಪ್ರಕರಣಗಳಿದ್ದು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.


ಇಂದು ಕೂಡ ಜಿಲ್ಲೆಯಲ್ಲಿ 7 ಮಂದಿ ಕೊರೊನಾದಿಂದ ಸಾವನಪ್ಪಿದ್ದಾರೆ. ಇದರೊಂದಿಗೆ ಜಿಲ್ಲೆಯಲ್ಲಿ ಕೊರೊನಾದಿಂದ ಮೃತಪಟ್ಟವರ ಸಂಖ್ಯೆ 337 ಕ್ಕೆ ಏರಿಕೆಯಾಗಿದೆ. ಇಂದು ದಾಖಲಾದ ಪ್ರಕರಣಗಳಲ್ಲಿ ಮಂಗಳೂರು -160, ಬಂಟ್ವಾಳ – 36, ಸುಳ್ಯ -42, ಬೆಳ್ತಂಗಡಿ – 21, ಪುತ್ತೂರು – 14, ಹೊರ ಜಿಲ್ಲೆಯವರು – 24 ಪ್ರಕರಣಗಳಿವೆ.

ಉಡುಪಿ ಕೊರೊನಾ ಪ್ರಕರಣ

ಉಡುಪಿ ಜಿಲ್ಲೆಯಲ್ಲಿ ಇಂದು 209 ಕೊರೊನಾ ಪ್ರಕರಣ ದಾಖಲಾಗಿದೆ. ಇದರೊಂದಿಗೆ ಜಿಲ್ಲೆಯಲ್ಲಿ ಒಟ್ಟು ಕೊರೊನಾ ಸೊಂಕಿತರ ಸಂಖ್ಯೆ 10913 ಕ್ಕೆ ಏರಿಕೆಯಾಗಿದೆ. ಉಡುಪಿಯಲ್ಲಿ ಇಂದು ಕೊರೊನಾದಿಂದಾಗಿ ಒಬ್ಬರು ಸಾವನಪ್ಪಿದ್ದಾರೆ.

ಉಡುಪಿ ಜಿಲ್ಲೆಯಲ್ಲಿ ಇದುವರೆಗೆ ಒಟ್ಟು 8197 ಮಂದಿ ಆಸ್ಪತ್ರೆಯಿಂದ ಗುಣಮುಖರಾಗಿ ಬಿಡುಗಡೆ ಹೊಂದಿದ್ದಾರೆ. ಸದ್ಯ ಜಿಲ್ಲೆಯಲ್ಲಿ 2623 ಸಕ್ರಿಯ ಪ್ರಕರಣಗಳಿದ್ದು ಅದರಲ್ಲಿ 1103 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ 1520 ಮಂದಿ ಹೋಂ ಐಸೋಲೇಶನ್ ನಲ್ಲಿದ್ದಾರೆ. ಇಂದು ಉಡುಪಿಯಲ್ಲಿ ಕೊರೊನಾದಿಂದಾಗಿ ಒಬ್ಬರು ಸಾವನಪ್ಪಿದ್ದಾರೆ. ಉಡುಪಿ ಜಿಲ್ಲೆಯಲ್ಲಿ ಇದುವರೆಗೆ 93 ಮಂದಿ ಕೊರೊನಾ ಸೋಂಕಿತರು ಸಾವನ್ನಪ್ಪಿದ್ದಾರೆ. ಇಂದು ದಾಖಲಾದ ಪ್ರಕರಣಗಳಲ್ಲಿ ಉಡುಪಿ – 106, ಕುಂದಾಪುರ -50 , ಕಾರ್ಕಳ -45, ಜಿಲ್ಲೆಯ ಹೊರಗಿನ – 8 ಪ್ರಕರಣಗಳಿವೆ.

Facebook Comments

comments