ದಕ್ಷಿಣಕನ್ನಡ ಜಿಲ್ಲೆಯಲ್ಲಿ ತಂಪೆರೆದ ಮಳೆ; ಜನ ಪುಳಕ

ಮಂಗಳೂರು ಎಪ್ರಿಲ್ 2: ಮಂಗಳೂರು ಬಿಸಿಲಿನಿಂದ ಕಂಗೆಟ್ಟಿದ್ದ ದಕ್ಷಿಣಕನ್ನಡ ಜಿಲ್ಲೆಗೆ ಮಳೆರಾಯ ತಂಪೆರೆದಿದ್ದಾನೆ. ಸಂಜೆಯಿಂದ ದಕ್ಷಿಣಕನ್ನಡದ ಹಲವು ಪ್ರದೇಶಗಳಲ್ಲಿ ಭಾರಿ ಮಳೆ ಸುರಿದಿದ್ದು, ಬಿಸಿಲಿನಿಂದ ಕಂಗೆಟ್ಟಿದ್ದ ಜನರು ಮಳೆರಾಯನ ಆಗಮನದಿಂದ ತುಸು ತಂಪಿನ ಅನುಭವ ಪಡೆದರು.

ಕಳೆದ ತಿಂಗಳಿಂದ ಬಿಸಿಲಿನ ಧಗೆಯಿಂದ ತತ್ತರಿಸಿದ್ದ ದಕ್ಷಿಣಕನ್ನಡದಲ್ಲಿ ಸಂಜೆ ಮಳೆ ಸುರಿದು ವಾತಾವರಣ ತಂಪಾಯಿತು. ಇದ್ದಕ್ಕಿದ್ದಂತೆ ದಟ್ಟವಾದ ಮೋಡ ಕವಿದು ಮಳೆ ಸುರಿಯಲಾರಂಭಿಸಿದ್ದರಿಂದ ನಗರದ ಜನರು ಕೆಲ ಕಾಲ ತಂಪಾದ ವಾತಾವರಣ ಅನುಭವಿಸುವಂತಾಯಿತು.

ಬೆಳ್ತಂಗಡಿ ತಾಲೂಕಿನ ಗುರುವಾಯನಕೆರೆ,ಕನ್ಯಾಡಿ ಸೇರಿದಂತೆ ಹಲವೆಡೆ ಸುಮಾರು ಅರ್ಧಗಂಟೆ ಮಳೆಯಾದ ಬಗ್ಗೆ ವರದಿಯಾಗಿದ್ದು, ಪುತ್ತೂರು, ಸುಳ್ಯ ತಾಲೂಕುಗಳಲ್ಲೂ ಮಳೆಯಾಗಿದೆ. ಮಂಗಳೂರು ನಗರದಲ್ಲಿ ಮೋಡ ಮುಸುಕಿದ ವಾತವರಣ ಕಂಡು ಬಂದು ಕೆಲವು ಪ್ರದೇಶಗಳಲ್ಲಿ ಸ್ವಲ್ಪ ಹನಿ ಮಳೆ ಬಿದ್ದಿದೆ.

VIDEO