Connect with us

    LATEST NEWS

    ಮಾಧ್ಯಮ ವರದಿಯ ಬಳಿಕ ಎಚ್ಚೆತ್ತುಕೊಂಡ ಕಡಬ ತಹಶೀಲ್ದಾರ್, ಬೇರೊಂದು ಖಾತೆಗೆ ಜಮೆಯಾಗುತ್ತಿದ್ದ ಅಂಗವಿಕಲ ವೇತನ ಫಲಾನುಭವಿ ಖಾತೆಗೆ ಜಮೆ…..

    ಪುತ್ತೂರು ಸೆಪ್ಟೆಂಬರ್ 21: ಕಡಬ ತಾಲೂಕು ಪಂಚಾಯತ್ ನ ಸಿಬ್ಬಂದಿಗಳ ಎಡವಟ್ಟಿನಿಂದಾಗಿ ಇನ್ನೊಂದು ಬ್ಯಾಂಕ್ ಖಾತೆಗೆ ಜಮೆಯಾಗುತ್ತಿದ್ದ ಚಾರ್ವಾಕ ಗ್ರಾಮದ ಬೊಮ್ಮಳಿಕೆ ಲಕ್ಷ್ಮಣ ಗೌಡ ಎಂಬುವವರ ಕಳೆದ ಹತ್ತು ತಿಂಗಳ ಅಂಗವಿಕಲ ವೇತನ ಶನಿವಾರ ಫಲಾನಿಭವಿಯ ಖಾತೆಗೆ ಜಮೆಯಾಗಿದೆ.


    ಅರ್ಜಿಯ ಜೊತೆ ನೀಡಲಾದ ವಿಜಯ ಬ್ಯಾಂಕ್ ಕಾಣಿಯೂರು ಶಾಖೆಯ ತನ್ನ ಖಾತೆಯ ವಿವರವನ್ನು ( ಖಾತೆ ಸಂಖ್ಯೆ 130901011001087) ಸಿಬ್ಬಂದಿ ಕಂಪ್ಯೂಟರ್‍ಗೆ ದಾಖಲಿಸುವ ಸಂದರ್ಭ ಕೊನೆಯ ಸಂಖ್ಯೆ 7 ರ ಬದಲಾಗಿ 1 ಎಂದು ನಮೂದಿಸಿದ ಪರಿಣಾಮ ಲಕ್ಷ್ಮಣ ಗೌಡರಿಗೆ ಜಮೆಯಾಗಬೇಕಾದ ಪ್ರತಿ ತಿಂಗಳ ರೂಪಾಯಿ 600 ವೇತನ ಹಣ ಅದೇ ಬ್ಯಾಂಕಿನಲ್ಲಿ ಖಾತೆ ಹೊಂದಿದ್ದ ಕಾಣಿಯೂರು ಗ್ರಾಮದ ಬೀರ್ನೆಲು ನಿವಾಸಿ ಕುಸುಮಾಧರ ಗೌಡ ಎಂಬುವವರ ಖಾತೆಗೆ ಜಮೆಯಾಗಿತ್ತು. ಈ ಬಗ್ಗೆ ಕಡಬ ತಹಶೀಲ್ದಾರ ಜಾನ್ ಪ್ರಕಾಶ್ ರೋಡ್ರಿಗಸ್ ಅವರು ಬ್ಯಾಂಕಿಗೆ ನೀಡಿದ ಪತ್ರದ ಹಿನ್ನೆಲೆಯಲ್ಲಿ ಬ್ಯಾಂಕ್ ಮುಖ್ಯಸ್ಥರ ಸಮ್ಮುಖದಲ್ಲಿ ಕುಸುಮಾಧರ ಗೌಡರು ಚೆಕ್ಕು ಮುಖಾಂತರ ಫಲಾನುಭವಿಯ ಖಾತೆಗೆ 6000 ರೂಪಾಯಿಯನ್ನು ಜಮೆ ಮಾಡಿದ್ದಾರೆ.


    ವೇತನ ಜಮೆಯಾಗುತ್ತಿದ್ದ ಖಾತೆದಾರರ ವಿಳಾಸವನ್ನು ಬ್ಯಾಂಕಿನಿಂದ ಪಡೆದು ಲಕ್ಷ್ಮಣ ಗೌಡರು ಖಾತೆದಾರ ಕುಸುಮಾಧರ ಗೌಡರನ್ನು ಸಂಪರ್ಕಿಸಿದ್ದರು. ಅಲ್ಲದೆ ಅವರ ಸಂಪರ್ಕ ಸಂಖ್ಯೆಯನ್ನು ಕಡಬ ತಾಲೂಕು ಕಛೇರಿಗೂ ನೀಡಿದ್ದರು. ಆದರೂ ಕಛೇರಿಯಿಂದ ಯಾವೂದೆ ಸ್ಪಂದನೆ ದೊರೆಯಲಿಲ್ಲ. ಈ ಬಗ್ಗೆ ಮಾಧ್ಯಮಗಳು ವರದಿ ಮಾಡಿದ ಬಳಿಕ ಎಚ್ಚೆತ್ತ ಅಧಿಕಾರಿಗಳು ಬ್ಯಾಂಕಿಗೆ ಪತ್ರ ಬರೆದು ಜಮೆಯಾದ ಹಣ ವಾಪಸ್ಸು ನೀಡುವ ಸಂಬಂದ ಕ್ರಮಕೈಗೊಳ್ಳುವಂತೆ ಬ್ಯಾಂಕು ಅಧಿಕಾರಿಗಳಿಗೆ ತಿಳಿಸಿತ್ತು. ಅಂತೆಯೇ ಫಲಾನುಭವಿಯ ಖಾತೆಗೆ ವೇತನ ಹಣ ವಾಪಸ್ಸಾಗಿದೆ.

    ಅಂಗವಿಕಲ ವೇತನಕ್ಕೆ ಅರ್ಜಿ ಹಾಕಿದ ಬಳಿಕ ಜುಲೈ.1-2019 ರಂದು ವೇತನಕ್ಕೆ ಅರ್ಹರೆಂದು ಮಂಜೂರಾತಿ ಪತ್ರ ದೊರಕಿತ್ತಾದರೂ ಖಾತೆಗೆ ಹಣ ಜಮಯಾಗದಿರುವುದರಿಂದ ಕಡಬ ತಾಲೂಕು ಕಛೇರಿಯಲ್ಲಿ ಪರಿಶೀಲಿಸಿದಾಗ ಕಂಪ್ಯೂಟರಿನಲ್ಲಿ ದಾಖಲಿಸಿರುವ ತನ್ನ ಖಾತೆ ನಂಬ್ರ ಅಲ್ಲ ‌‌ ಎಂದು ಖಾತರಿಯಾಗಿತ್ತು. ಇದೀಗ ಖಾತೆಯ ಸಮಸ್ಯೆಯನ್ನು ಬಗೆಹರಿಸಲಾಗಿದ್ದು, ಫಲಾನುಭವಿ ಲಕ್ಷ್ಮಣ ಗೌಡರು ನಿಟ್ಟುಸಿರು ಬಿಟ್ಟಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply