Connect with us

    LATEST NEWS

    ದಿನಕ್ಕೊಂದು ಕಥೆ- ಮುಗ್ದ ಛಲ

    ಮುಗ್ದ ಛಲ

    ಅವನು ಹುಡುಕುತ್ತಿದ್ದಾನೆ.., ಹಲವು ವರ್ಷಗಳು ಕಳೆದಿವೆ . ತನ್ನವರನ್ನು ಕಳೆದುಕೊಂಡ ಮೇಲೆ ಅವರೊಂದಿಗೆ ಮತ್ತೆ ಜೊತೆಗೂಡಬೇಕು ಅನ್ನುವ ಕಾರಣಕ್ಕೆ ಹುಡುಕಾಡುತ್ತಿದ್ದಾನೆ. ಬಿಡಿಗಾಸೂ ಇಲ್ಲದ ಬದುಕು ಅವನದು. ಇದ್ದವರೆಲ್ಲ “ಅವರು ನಿನಗೆ ಸಿಗುವುದಿಲ್ಲ ಯಾಕೆ ಹುಡುಕಾಟ ನಡೆಸುತ್ತಿದ್ದೀಯ ಅಂದರೂ ನಿಲ್ಲಿಸಿಲ್ಲ.

    ಅವನ ಬಗ್ಗೆ ಇರುವ ಹೆಚ್ಚಿನ ಮಾಹಿತಿ ಎಂದರೆ ಆತನಿಗೆ ಮುಗ್ಧ ಮನಸ್ಸಿನ ಛಲವಿದೆ ,ಒಳ್ಳೆಯ ಮಾತಿದೆ .ಇದು ಬಿಟ್ಟು ಇನ್ನೇನು ಗೊತ್ತಿಲ್ಲ. ನಿಮಗೆ ಎಲ್ಲಾದರೂ ಕಂಡುಬಂದರೆ ಮಾಹಿತಿ ನೀಡಿ ಯಾಕೆಂದರೆ ಅಂತಹ ಮುಗ್ದತೆಯು ಮಗುವಿನಿಂದಲೇ ಮಾಯವಾಗುವ ಸ್ಥಿತಿಯಲ್ಲಿ ನಾವಿರುವಾಗ ಇಂಥವರೊಂದಿಗೆ ಮಾತನಾಡಿ ವ್ಯವಹರಿಸಲು ಒಂದಷ್ಟು ಸಮಯವಾದರೂ ಸಿಗಲಿ ಅಂತ .

    ವಿಶ್ವದ ಅದ್ಭುತಗಳನ್ನು ನೋಡಲು ಬೇರೆ ಊರಿಗೆ ತೆರಳುತ್ತೇವೆ. ನನಗೆ ಯಾಕೋ ಅವನು ಕೂಡ ಒಂದು ಅದ್ಭುತ ಅನ್ನಿಸಿತು. ಅದಕ್ಕೆ ಹುಡುಕುತ್ತಿದ್ದೇನೆ.

    ಧೀರಜ್ ಬೆಳ್ಳಾರೆ

    Share Information
    Advertisement
    Click to comment

    You must be logged in to post a comment Login

    Leave a Reply