Connect with us

KARNATAKA

ಮುಸ್ಲಿಂ ವ್ಯಾಪಾರಿ ಕಲ್ಲಂಗಡಿ ನಾಶ – ಭಯೋತ್ಪಾದಕರಿಗೂ ಇವರಿಗೂ ವ್ಯತ್ಯಾಸವಿಲ್ಲ- ಕುಮಾರಸ್ವಾಮಿ

ಬೆಂಗಳೂರು: ಧರ್ಮದಂಗಲ್ ರಾಜ್ಯದಲ್ಲಿ ದಿನದಿಂದ ದಿನಕ್ಕೆ ಬಿಗಡಾಯಿಸುತ್ತಿದ್ದು, ಧಾರವಾಡದ ನುಗ್ಗಿಕೇರಿಯ ಶ್ರೀ ಆಂಜನೇಯ ದೇವಸ್ಥಾನದಲ್ಲಿ ಮುಸ್ಲಿಂ ಅಂಗಡಿಗಳನ್ನುಶ್ರೀರಾಮ ಸೇನೆ ಕಾರ್ಯಕರ್ತರು ಬಲವಂತವಾಗಿ ತೆರವು ಮಾಡಿದ್ದಾರೆ.

ಇಂದು ದೇವಸ್ಥಾನ ಬಳಸಿ ಆಗಮಿಸಿದ ಶ್ರೀರಾಮ ಸೇನೆಯ ಕಾರ್ಯಕರ್ತರು ಮುಸ್ಲಿಂ ಸಮುದಾಯಕ್ಕೆ ಸೇರಿದ ವ್ಯಾಪರಸ್ಥರೊಬ್ಬರ ಕಲ್ಲಂಗಡಿ ಹಣ್ಣುಗಳನ್ನು ಒಡೆಯುವ ಮೂಲಕ ಅಂಗಡಿ ಖಾಲಿ ಮಾಡಿಸಿದ್ದಾರೆ. ಐವರು ಮುಸ್ಲಿಂ ವ್ಯಾಪಾರಿಗಳ ಕಲ್ಲಂಗಡಿಗಳನ್ನು ನಾಶ ಮಾಡಲಾಗಿದ್ದು, ಇದರ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಹಿಂದೂಪರ ಸಂಘಟನೆ ಕಾರ್ಯರ್ತರಿಂದ ಮುಸ್ಲಿಂ ವ್ಯಾಪಾರಿಗಳ ಕಲ್ಲಂಗಡಿ ನಾಶ ಮಾಡಿದ ವಿಚಾರಕ್ಕೆ ಸಂಬಂಧಿಸಿದಂತೆ ತೀವ್ರ ಕಿಡಿಕಾರಿರುವ ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಅವರು, ಭಯೋತ್ಪಾದಕರಿಗೂ, ಇವರಿಗೂ ವ್ಯತ್ಯಾಸವಿಲ್ಲ ಎಂದು ಹೇಳಿದ್ದಾರೆ.

Advertisement
Click to comment

You must be logged in to post a comment Login

Leave a Reply