ಬೆಳ್ತಂಗಡಿ ಸೆಪ್ಟೆಂಬರ್ 09: ಧರ್ಮಸ್ಥಳ ಪ್ರಕರಣದ ತನಿಖೆ ನಡೆಸುತ್ತಿರುವ ಎಸ್ ಐಟಿ ಎದುರು ಯೂಟ್ಯೂಬರ್ ಗಳಾದ ಕೇರಳದ ಮನಾಫ್, ಅಭಿಷೇಕ್ ಮತ್ತು ಜಯಂತ್ ಟಿ, ಗಿರೀಶ್ ಮಟ್ಟಣ್ಣವರ್, ವಿಠಲ್ ಗೌಡ ಹಾಗೂ ಪ್ರದೀಪ್ ಹಾಜರಾಗಿದ್ದಾರೆ.

ಈಗಾಗಲೇ ಧರ್ಮಸ್ಥಳದ ಪ್ರಕರಣ ಕುರಿತಂತೆ ಎಸ್ ಐಟಿ ತೀವ್ರ ವಿಚಾರಣೆ ನಡೆಸುತ್ತಿದೆ. ಬಹುತೇಕ ಧರ್ಮಸ್ಥಳ ಪ್ರಕರಣದ ಹಿಂದೆ ಇರುವ ಎಲ್ಲರನ್ನೂ ಎಸ್ ಐಟಿ ತನಿಖೆ ನಡೆಸುತ್ತಿದ್ದು, ಪ್ರತಿಯೊಬ್ಬರನ್ನು ನೊಟೀಸ್ ಕೊಟ್ಟು ಕರೆಸಿ ವಿಚಾರಣೆ ನಡೆಸುತ್ತಿದೆ. ಇಂದು ಮತ್ತೆ ಯೂಟ್ಯೂಬರ್ ಗಳಾದ ಕೇರಳದ ಮನಾಫ್, ಅಭಿಷೇಕ್ ಮತ್ತು ಜಯಂತ್ ಟಿ, ಗಿರೀಶ್ ಮಟ್ಟಣ್ಣವರ್, ವಿಠಲ್ ಗೌಡ ಹಾಗೂ ಪ್ರದೀಪ್ ವಿಚಾರಣೆಗೆ ಹಾಜರಾಗಿದ್ದಾರೆ.

ಸೋಮವಾರ ಹಿಂಬದಿ ದಾರಿ ಹಿಡಿದಿದ್ದ ಜಯಂತ್ ಇಂದು ಮುಂಭಾಗದ ಹಾದಿಯಿಂದಲೇ ಬಂದಿದ್ದಾರೆ. ಆದರೆ ಮಾಧ್ಯಮದೆದುರು ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ. ಇನ್ನೂ ಕೇರಳದ ಯೂಟ್ಯೂಬರ್ ಮನಾಫ್ ಹಾಗೂ ಯೂಟ್ಯೂಬರ್ ಅಭಿಷೇಕ್ ಕೂಡ ವಿಚಾರಣೆ ಹಾಜರಾಗಿದ್ದಾರೆ. ಮನಾಫ್ ತಮ್ಮ ರಕ್ಷಣೆಗಾಗಿ ಕೇರಳದಿಂದ ಜನ ಕರೆದುಕೊಂಡು ಬಂದಿರುವುದಾಗಿ ಕೆಲ ಮಾಧ್ಯಮಗಳು ಪ್ರಸಾರ ಮಾಡಿವೆ ಎಂಬ ವಿಚಾರವಾಗಿ ಅವರು ಆಕ್ರೋಶ ವ್ಯಕ್ತಪಡಿಸಿದರು. “ನಾನು ಯಾರನ್ನೂ ಕರೆತಂದಿಲ್ಲ, ನನಗೆ ಯಾವ ಭಯವಿಲ್ಲ, ನಾನು ಸತ್ಯದ ಪರವಾಗಿ ಹೋರಾಡುತ್ತಿದ್ದೇನೆ. ಎಸ್ಐಟಿ ಎಲ್ಲ ವಿಚಾರಣೆಗೂ ನಾನು ಸ್ಪಂದಿಸುತ್ತೇನೆ” ಎಂದು ಹೇಳಿದ್ದಾರೆ.



