ಉಡುಪಿ ಜೂನ್ 16: ಶ್ರೀ ಕ್ಷೇತ್ರ ಧರ್ಮಸ್ಥಳದ ವಿರುದ್ಧ ಷಡ್ಯಂತ್ರ ನಡೆಸಲಾಗುತ್ತಿದೆ ಎಂಬ ಆರೋಪಗಳು ಆತಂಕಕಾರಿ ಬೆಳವಣಿಗೆಯಾಗಿದ್ದು, ಈ ಕುರಿತು ಸಮಗ್ರ ತನಿಖೆ ನಡೆಸಿ ಸತ್ಯಾಂಶವನ್ನು ಬಹಿರಂಗಪಡಿಸಬೇಕು ಎಂದು ಪರ್ಯಾಯ ಪೀಠಾಧಿಪತಿ ಶೀರೂರು ಮಠದ ಶ್ರೀ ವೇದವರ್ಧನತೀರ್ಥ ಶ್ರೀಪಾದರು ಅಭಿಪ್ರಾಯಪಟ್ಟಿದ್ದಾರೆ.

ಧರ್ಮಸ್ಥಳ ಕ್ಷೇತ್ರದ ಬಗ್ಗೆ ಬಹಳಷ್ಟು ಅಪಪ್ರಚಾರಗಳು ನಡೆದಿದೆ ಆ ಅಪಪ್ರಚಾರಗಳ ಹಿಂದೆ ನೂರಾರು ಕೋಟಿ ರೂಪಾಯಿಗಳ ಅವ್ಯವಹಾರವು ನಡೆದಿದೆ ಅಂತ ಸುದ್ದಿಯಲ್ಲ ಉಂಟು ಈ ರೀತಿ ಧರ್ಮ ಕ್ಷೇತ್ರದ ಬಗ್ಗೆ ಅಥವಾ ಪರಮಾತ್ಮನ ಒಂದು ಕ್ಷೇತ್ರದ ಬಗ್ಗೆ ಇಷ್ಟೆಲ್ಲ ಅಪಪ್ರಚಾರ ಮಾಡುವಂತಹ ಆ ವ್ಯಕ್ತಿಗಳನ್ನು ಕಾನೂನುಬದ್ಧವಾಗಿ ಅವರನ್ನು ಹಿಡಿದು ಅವರಿಗೆ ಶಿಕ್ಷೆಯನ್ನು ಕೊಡಬೇಕು ನಾವೆಲ್ಲ ಎಲ್ಲ ಹಿಂದೂ ಬಾಂಧವರು ಒಗ್ಗಟ್ಟಾಗಿ ಇಂತಹ ಅಪರಾಧಗಳನ್ನು ಅಧರ್ಮವನ್ನು ನಾವು ಖಂಡಿಸಬೇಕು ವಿರೋಧಿಸಬೇಕು. ಈ ರೀತಿಯಾಗಿ ಮಾಡಿ ಆ ಧರ್ಮದ ರಕ್ಷಣೆ ಮಾಡಬೇಕು ಎಂದು ಶೀರೂರು ಮಠದ ಶ್ರೀ ವೇದವರ್ಧನತೀರ್ಥ ಶ್ರೀಪಾದರು ಅಭಿಪ್ರಾಯಪಟ್ಟಿದ್ದಾರೆ.