ಧರ್ಮಸ್ಥಳ ಸೆಪ್ಟೆಂಬರ್ 03: ಧರ್ಮಸ್ಥಳ ಕ್ಷೇತ್ರದ ವಿರುದ್ದ ನಡೆಯುತ್ತಿರುವ ಅಪಪ್ರಚಾರದ ವಿರುದ್ದ ಬಿಜೆಪಿ ಕೈಗೊಂಡಿದ್ದ ಧರ್ಮಸ್ಥಳ ಚಲೋ ಯಾತ್ರೆ ಇದೀಗ ಬಿಜೆಪಿ ಪಕ್ಷದೊಳಗಿನ ಭಿನ್ನಮತ ಬಹಿರಂಗಕ್ಕೆ ಕಾರಣವಾಗಿದೆ.

ಸೋಮವಾರ ಬಿಜೆಪಿ ವತಿಯಿಂದ ನಡೆದ ಧರ್ಮಸ್ಥಳ ಚಲೋ, ನಮ್ಮ ನಡಿಗೆ ಧರ್ಮದೆಡೆಗೆ ಸಮಾವೇಶ ಕಾರ್ಯಕ್ರ ಮದಲ್ಲಿ ಧರ್ಮಸ್ಥಳದ ಬಗ್ಗೆ ಗಟ್ಟಿಧ್ವನಿಯಲ್ಲಿ ಮೊದಲಿನಿಂದಲೂ ಮಾತ ನಾಡಿಕೊಂಡು ಬಂದವರಿಗೆ ವೇದಿಕೆಯಲ್ಲಿ ಭಾಷಣ ಮಾಡಲು ಅವಕಾಶ ಸಿಗಲಿಲ್ಲ. ಇದಕ್ಕಾಗಿ ಕೆಲ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು.

ಕಾರ್ಯಕ್ರಮ ಮುಗಿಯುವ ಮೊದಲೇ ಆರ್.ಅಶೋಕ್ ಭಾಷಣ ಮುಗಿಸಿ ಹೊರ ಟರು. ಸದನದಲ್ಲಿ ಗಟ್ಟಿಯಾಗಿ ಮಾತ್ರ ನಾಡಿದ್ದ ಸುನೀಲ್ ಕುಮಾರ್‌ಗೆ ವೇದಿಕೆ ಯಲ್ಲಿ ಭಾಷಣ ಇರಲಿಲ್ಲ. ಹಾಗಾಗಿ ವೇದಿಕೆಯಿಂದ ಹೊರಟರು. ಇ,ಡಿ. ತನಿಖೆ ಒತ್ತಾಯಿಸಿದ್ದ ಕೋಟ ಶ್ರೀನಿವಾಸ್ ಪೂಜಾ ರಿಗೂ ಅವಕಾಶ ಇರಲಿಲ್ಲ, ಅವರೂ ಅರ್ಧಕ್ಕೆ ಬಿಟ್ಟು ತೆರಳಿದರು. ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಕಾರ್ಯಕ್ರಮದಿಂದ ಅರ್ಧಕ್ಕೆ ತೆರಳಿದರು. ಶಾಸಕ ಹರೀಶ್ ಪೂಂಜಾ ಧರ್ಮಸ್ಥಳದ ಪರ ಒಂದೇ ಒಂದು ಶಬ್ದ ಹೇಳದೆ ಅಂತರ ಕಾಯ್ದುಕೊಂಡರು. ಕೊನೆಗೆ ಸಂಸದ ಬ್ರಿಜೇಶ್ ಚೌಟ ಭಾಷಣ ಮಾಡಿದರು. ಒಟ್ಟಿನಲ್ಲಿ ಯಾರು ಧರ್ಮಸ್ಥಳ ಪರ ಜೋ ರಾಗಿ ಮಾತನಾಡಿದ್ದರೋ ಅವರಿಗೆ ವೇದಿಕೆ ಯಲ್ಲಿ ಮಾತನಾಡಲು ಅವಕಾಶ ಸಿಗಲಿಲ್ಲ. ಇದರೊಂದಿಗೆ ಕಾರ್ಯ ಕ್ರಮದಲ್ಲಿ ಬಿಜೆಪಿ ಬಣ ರಾಜಕೀಯ ಪ್ರದರ್ಶನಕ್ಕೆ ವೇದಿಕೆ ಸಾಕ್ಷಿಯಾಯಿತು.



