ಬೆಳ್ತಂಗಡಿ ಸೆಪ್ಟೆಂಬರ್ 18: ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ಐಟಿ ತಂಡ ಮತ್ತೆ ಶವಶೋಧ ಕಾರ್ಯ ಮುಂದುವರೆಸಿದೆ. ಇಂದು ನಡೆಸಿಗ ಶೋಧ ಕಾರ್ಯದಲ್ಲಿ ಎರಡು ಬುರುಡೆ ಮತ್ತು ಅವಶೇಷಗಳು ಪತ್ತೆಯಾಗಿದೆ.

ಧರ್ಮಸ್ಥಳ ಗ್ರಾಮದಲ್ಲಿ ನಡೆದಿದೆ ಎನ್ನಲಾದ ಅಪರಾಧಗಳಲ್ಲಿನ ಮೃತದೇಹಗಳನ್ನು ಹೂತು ಹಾಕಲಾಗಿದೆ ಎಂದು ಆರೋಪಿಸಲಾದ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ) ಧರ್ಮಸ್ಥಳದ ನೇತ್ರಾವತಿ ಸ್ನಾನಘಟ್ಟದ ಪಕ್ಕದ ಬಂಗ್ಲೆಗುಡ್ಡೆಯ ಕಾಡಿನಲ್ಲಿ ಶೋಧ ಕಾರ್ಯ ಹಾಗೂ ಮಹಜರು ಕಾರ್ಯವನ್ನು ಗುರುವಾರವೂ ಮುಂದುವರಿಸಿದೆ.

ಬುಧವಾರ ಶೋಧ ಕಾರ್ಯ ನಡೆಸಿದ ಸಂದರ್ಭದಲ್ಲಿ ಹಲವೆಡೆ ನೆಲದ ಮೇಲೆಯೇ ಮೃತದೇಹಗಳ ಅವಶೇಷಗಳು ಸಿಕ್ಕಿವೆ. ಅವುಗಳ ಮಹಜರು ಕಾರ್ಯ ಪೂರ್ಣಗೊಂಡಿರಲಿಲ್ಲ. ರಾತ್ರಿ ಸುಮಾರು 7 ಗಂಟೆವರೆಗೂ ಎಸ್‌ಐಟಿ ತಂಡ ಕಾಡಿನಲ್ಲೇ ಇತ್ತು. ಬುಧವಾರ ಗುರುತಿಸಿದ ಜಾಗದಲ್ಲಿ ಇಂದು(ಗುರುವಾರ) ಪರಿಶೀಲನೆ ನಡೆಸಲಾಗಿದ್ದು, ಅಲ್ಲಿ ಇನ್ನೆರಡು ಬುರುಡೆಗಳನ್ನು ಹಾಗೂ ಅವಶೇಷಗಳನ್ನು ಸಂಗ್ರಹಿಸುವ ಕಾರ್ಯವನ್ನು ಅಧಿಕಾರಿಗಳು ಮಾಡಿದ್ದಾರೆ ಎಂದು ಗೊತ್ತಾಗಿದೆ.
ಇದನ್ನೂ ಓದಿ…….. ಧರ್ಮಸ್ಥಳ – ಬಕೆಟ್ ನಲ್ಲಿ ಮೂಳೆ, ತಲೆಬುರುಡೆ ತುಂಬಿಕೊಂಡು ಬಂದ ಎಸ್‌ಐಟಿ ತಂಡ
ಗುಡ್ಡದಮೇಲೆ ಚದುರಿಕೊಂಡ ರೀತಿಯಲ್ಲಿ ಎಲಿಬುಗಳು ಪತ್ತೆಯಾಗಿರುವುದಾಗಿ ತಿಳಿದು ಬಂದಿದ್ದು, ಅಲ್ಲಿ ಲಭಿಸಿದ ಎಲ್ಲ ವಸ್ತುಗಳನ್ನು ಸಂಗ್ರಹಿಸುವ ಕಾರ್ಯವನ್ನು ಎಸ್.ಐ.ಟಿ ತಂಡ ಮಾಡಿದೆ.
ಇದೀಗ ಗುರುತಿಸಿದ ಸ್ಥಳಗಳಿಂದ ಒಟ್ಟು 7 ತಲೆಬುರುಡೆಗಳು ಪತ್ತೆಯಾಗಿದ್ದು, ಸಾಕಷ್ಟು ಎಲುಬಿನ ಭಾಗಗಳು ಲಭಿಸಿದೆ.



