ಬೆಳ್ತಂಗಡಿ ಸೆಪ್ಟೆಂಬರ್ 03: ಧರ್ಮಸ್ಥಳ ಪ್ರಕರಣದ ದೂರುದಾರ ಮಾಸ್ಕ್ ಮ್ಯಾನ್ ಚಿನ್ನಯ್ಯ ನನ್ನು ಬೆಳ್ತಂಗಡಿ ನ್ಯಾಯಾಲಯ ಮತ್ತೆ 3 ದಿನ ಎಸ್ ಐಟಿ ವಶಕ್ಕೆ ನೀಡಿದೆ. ಧರ್ಮಸ್ಥಳ ಪ್ರಕರಣದ ಸಾಕ್ಷಿ ದೂರುದಾರನಾಗಿ ಬಂದು ಎಸ್.ಐ.ಟಿ ವಶದಲ್ಲಿರುವ ಆರೋಪಿ ಚಿನ್ನಯ್ಯನನ್ನು ಬೆಳ್ತಂಗಡಿ ನ್ಯಾಯಾಲಯಕ್ಕೆ ಬುಧವಾರ ಮಧ್ಯಾಹ್ನದ ವೇಳೆ ಹಾಜರುಪಡಿಸಲಾಗಿದೆ.

ಈ ವೇಳೆ ವಿಚಾರಣೆಗಾಗಿ ಎಸ್ ಐಟಿ ಮತ್ತೆ ಕಸ್ಟಡಿಗೆ ನ್ಯಾಯಾಲಯಕ್ಕೆ ಮನವಿ ಮಾಡಿದೆ ಈ ಹಿನ್ನಲೆ 3 ದಿನಗಳ ಕಾಲ ಎಸ್‌ಐಟಿ ಕಸ್ಟಡಿಗೆ ನೀಡಿ ಕೋರ್ಟ್ ಆದೇಶಿಸಿದೆ. ಸೆಪ್ಟೆಂಬರ್ 6ರಂದು ಚಿನ್ನಯ್ಯನನ್ನ ಕೋರ್ಟ್‌ಗೆ ಹಾಜರುಪಡಿಸುವಂತೆ ಬೆಳ್ತಂಗಡಿ ನ್ಯಾಯಾಲಯ ಆದೇಶಿಸಿದೆ. ಅಗಸ್ಟ್ 23 ರಂದು ಆರೋಪಿ ಚಿನ್ನಯ್ಯನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಎಸ್.ಐ.ಟಿ ತಂಡದವರು ತನಿಖೆಗಾಗಿ ವಶಕ್ಕೆ ಪಡೆದಿದ್ದರು. ಆತನಿಂದ ಲಭಿಸಿದ ಮಾಹಿತಿಗಳ ಹಿನ್ನಲೆಯಲ್ಲಿ ಮಹೇಶ್ ಶೆಟ್ಟಿ ತಿಮರೋಡಿ ಮನೆ ಜಯಂತ್ ಟಿ ಮನೆ ಸೇರಿದಂತೆ ಹಲವೆಡೆ ಮಹಜರು ನಡೆಸಲಾಗಿತ್ತು.

ಆರೋಪಿ ಚಿನ್ನಯ್ಯ ತನಗೆ ವಕೀಲರನ್ನು ಒದಗಿಸುವಂತೆ ನ್ಯಾಯಾಲಯದಲ್ಲಿ ಕೇಳಿಕೊಂಡಿದ್ದು, ಅದರಂತೆ ಮಂಗಳೂರು ಕಾನೂನು ಸೇವೆಗಳ ಪ್ರಾಧಿಕಾರದ ವಕೀಲರು ಚಿನ್ನಯ್ಯ ಪರವಾಗಿ ಹಾಜರಾಗಿದ್ದಾರೆ.



