ಬೆಳ್ತಂಗಡಿ ನವೆಂಬರ್ 22: ಧರ್ಮಸ್ಥಳದಲ್ಲಿ ಶವಹೂತ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರುದಾರನಾಗಿ ಬಂದು ಇದೀಗ ಜೈಲು ಪಾಲಾಗಿರುವ ಮಾಸ್ಕ್ ಮ್ಯಾನ್ ಚಿನ್ನಯ್ಯ ಜಾಮೀನು ಕೋರಿ ಕಾನೂನು ಸೇವಾ ಪ್ರಾಧಿಕಾರ ಒದಗಿಸಿದ ವಕೀಲರ ಮೂಲಕ ಬೆಳ್ತಂಗಡಿಯ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಶುಕ್ರವಾರ ಅರ್ಜಿ ಸಲ್ಲಿಸಿದ್ದಾನೆ.

ಈ ಪ್ರಕರಣದ ತನಿಖೆ ನಡೆಸುತ್ತಿರುವವಿಶೇಷ ತನಿಖಾ ತಂಡವು ಸಾಕ್ಷಿದೂರು ದಾರನನ್ನು ನ್ಯಾಯಾಲಯಕ್ಕೆ ಸುಳ್ಳು ಮಾಹಿತಿ ನೀಡಿದ ಆರೋಪದ ಮೇರೆಗೆ ಬಂಧಿಸಿತ್ತು. ಆತ ಶಿವಮೊಗ್ಗ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾನೆ. ಈ ಪ್ರಕರಣದ ಸಾಕ್ಷಿ ದೂರುದಾರ ಸೇರಿ ಆರು ಮಂದಿ ಯಾವ ರೀತಿ ಕೋರ್ಟ್ ದಾರಿ ತಪ್ಪಿಸಿದ್ದಾರೆ ಎಂಬ ಕುರಿತುಎಸ್‌ಐಟಿ ಬೆಳ್ತಂಗಡಿಯ ಜೆಎಂಎಫ್‌ಸಿ ಕೋರ್ಟ್‌ಗೆ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ ಸೆಕ್ಷನ್ 215 ಅಡಿ ಗುರುವಾರ ವರದಿ ಸಲ್ಲಿಸಿದೆ.
ReadThis – ಕೇರಳ – ಮದುವೆಗೆ ಕೆಲವೆ ಗಂಟೆಗಳ ಮೊದಲು ವಧುವಿಗೆ ಅಪಘಾತ -ಐಸಿಯುನಲ್ಲೆ ತಾಳಿ ಕಟ್ಟಿದ ವರ
ವರದಿಯಲ್ಲಿ ಉಲ್ಲೇಖೀಸಲ್ಪಟ್ಟ ಅಂಶ ಗಳ ಚರ್ಚೆಗೂ ಮುನ್ನಾ ಚಿನ್ನಯ್ಯನ ಪರ ವಕೀಲರು ವಾದ ಮಂಡಿಸಿದ್ದು, ಇನ್ನೂ ಕೂಡ ದೋಷಾರೋಪಣ ಪಟ್ಟಿ ಸಲ್ಲಿಕೆ ಮಾಡದೇ ಇರುವ ವಿಚಾರವನ್ನು ಪ್ರಸ್ತಾವಿಸಿದರು. ಜತೆಗೆ ಚಿನ್ನಯ್ಯ ಜಾಮೀನಿನ ಅರ್ಜಿ ವಿಚಾರವೂ ಪ್ರಸ್ತಾವಕ್ಕೆ ಬಂದು ವಾದ-ಪ್ರತಿವಾದಗಳು ನಡೆದು ಕೊನೆಗೆ ಕಲಾಪ ಮುಂದೂಡಲ್ಪಟ್ಟಿತ್ತು. ಸಾಕ್ಷಿ ದೂರುದಾರ ಹೊರತುಪಡಿಸಿ ಉಳಿದವರುವಿಚಾರಣೆಗೆ ಸಹಕರಿಸುತ್ತಿಲ್ಲ ಎಂದು ಎಸ್‌ಐಟಿ ಪರ ವಕೀಲರು ವಾದ ಮಂಡಿಸಿದರು ಎಂದು ಮೂಲಗಳು ತಿಳಿಸಿವೆ.



