ಮಂಗಳೂರು ಜನವರಿ 01: ಮಂಗಳೂರು ಕಂಬಳದಲ್ಲಿ ತೀರ್ಪುಗಾರರಾದ ಗುಣಪಾಲ ಕಡಂಬರಿಗೆ ಅವಮಾನವಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಕಂಬಳ ರಾಜ್ಯ ಅಸೋಸಿಯೇಶನ್ ಅಧ್ಯಕ್ಷ ಬೆಳಪು ಡಾ.ದೇವಿಪ್ರಸಾದ್ ಶೆಟ್ಟಿ ಮದ್ಯಪ್ರವೇಶಿಸಿದ್ದು, ಈ ಗೊಂದಲದ ಬಗ್ಗೆ ಕಂಬಳ ಶಿಸ್ತು ಸಮಿತಿ ಅಧ್ಯಕ್ಷ ಭಾಸ್ಕರ ಕೋಟ್ಯಾನ್ ಅವರಿಗೆ ಮಾಹಿತಿ ರವಾನೆಯಾಗಿದೆ. ಎರಡು ದಿನದ ಒಳಗೆ ಸಂಸದ ಕ್ಯಾ.ಬ್ರಿಜೇಶ್ ಚೌಟ, ಗುಣಪಾಲ ಕಡಂಬ, ರಾಜೇಶ್ ಶೆಟ್ಟಿ, ಲೋಕೇಶ್ ಶೆಟ್ಟಿ ಮುಚೂರು ಅವರ ಜೊತೆಗೂಡಿ ಮಾತುಕತೆ ನಡೆಸಿ ಸೌಹಾರ್ದ ಯುತವಾಗಿ ಪರಿಹರಿಸುವುದಾಗಿ ತಿಳಿಸಿದ್ದಾರೆ.


ಐಕಳದಲ್ಲಿ ಐಕಳ ಕಂಬಳ ಕುರಿತು ಸಭೆಯ ಸಂದರ್ಭಜರಗಿದ ಮಾಧ್ಯಮದವರೊಂದ ಮದವರೊಂದಿಗೆ ಮಾತನಾಡಿದ ಅವರು, ಕಂಬಳವು ರಾಷ್ಟ್ರಮಟ್ಟದಲ್ಲಿ ಮನ್ನಣೆ ಪಡೆದಿದ್ದು ಹೆಚ್ಚು ಮಂದಿ ಕಂಬಳದತ್ತ ಆಕರ್ಷಿತರಾಗುತ್ತಿದ್ದಾರೆ. ಕಂಬಳ ಸೇರಿದಂತೆ ಕ್ರೀಡೆಯಲ್ಲಿ ವಾದ, ವಿವಾದ ಸಾಮಾನ್ಯವಾಗಿದ್ದು ಅತಿರೇಕಕ್ಕೆ ಸಾಗಬಾರದು. ವ್ಯಕ್ತಿಯ, ಯ, ಸಮಿತಿಯ ವಿರುದ್ಧ ವೈಯಕ್ತಿಕ ತೇಜೋವಧೆ ಮಾಡುವುದು ಸರಿಯಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.


ಕಡಂಬರು ಕಂಬಳ ಸಮಿತಿಯ ಹಿರಿಯರು, ಮಾರ್ಗದರ್ಶಕರು, ತೀರ್ಪುಗಾರರಾಗಿದ್ದು ಕಂಬಳದ ಕುಟುಂಬದಲ್ಲಿ ಸಣ್ಣ ಪುಟ್ಟ ವ್ಯತ್ಯಸವಾಗಿದೆ. ಈ ಬಗ್ಗೆ ಕಂಬಳ ಶಿಸ್ತು ಸಮಿತಿಯ ಅಧ್ಯಕ್ಷ ಭಾಸ್ಕರ ಕೋಟ್ಯಾನ್, ಮಂಗಳೂರು ಕಂಬಳದ ವ್ಯವಸ್ತಾಪಕ, ಸಂಸದ ಕ್ಯಾ..ಬ್ರಿಜೇಶ್ ಚೌಟರ ಜೊತೆ ಮಾತನಾಡಲಾಗಿದೆ. ಮುಂದಿನ ಎರಡು ದಿನಗಳಲ್ಲಿ ಸಂಸದ ಕ್ಯಾ.ಬ್ರಿಜೇಶ್ ಗುಣಪಾಲ ಕಡಂಬ,ರಾಜೇಶ್ ಶೆಟ್ಟಿ, ಲೋಕೇಶ್ ಶೆಟ್ಟಿ ಮುಳ್ಳೂರು ಮಾತುಕತೆ ಜೊತೆಗೂಡಿ ನಡೆಸಿ ಸೌಹಾರ್ದಯುತ’ವಾಗಿ ಬಗೆಹರಿಸುತ್ತೇವೆ ಅವರು ತಿಳಿಸಿದ್ದಾರೆ. ಕಂಬಳ ದಲ್ಲಿ ಗೊಂದಲವಿರಬಾರದು, ಶಿಸ್ತುಬದ್ಧ ಕ್ರೀಡೆ, ಪೇಟಾದವರ ಕಣ್ಣಿದ್ದು ಅಧಿಕಾರಿಗಳು ಸೇರಿದಂತೆ ಹೆಚ್ಚಿನವರು ಕಂಬಳ ವೀಕ್ಷಿಸುತ್ತಿದ್ದು ಮೋಜು, ಮಸ್ತಿ ವಾಟ್ಸಾಪ್ ಸಂದೇಶಗಳಿಗೆ ಸೀಮಿತವಾಗಬಾರದು.ಕಂಬಳದಲ್ಲಿ ತೀರ್ಪುಗಾರರಿಗೆ ಟೀಕೆ, ಟಿಪ್ಪಣೆ ಅನೇಕ ಬಾರಿಯಾಗಿದೆ. ಇದು ಹೊಸದಲ್ಲ. ರಾಜೇಶ್ ಶೆಟ್ಟಿ ಅವರಿಗೆ ಕೂಡ ಅವಮಾನವಾಗಿದೆ. ಘಟನೆ ಕುರಿತು ಕಂಬಳದ ವ್ಯವಸ್ಥಾಪಕರು, ಸಮಿತಿ ಹಾಗೂ ಅಭಿಮಾನಿಗಳ ಕ್ಷಮೆಯಾಚಿಸುತ್ತೇನೆ ಎಂದಿದ್ದಾರೆ.

ಸದ್ಯ ಇರುವ ಗೊಂದಲಗಳನ್ನು ಎರಡು ದಿನದಲ್ಲಿ ಸಮಸ್ಯೆ ಬಗೆಹರಿಸುತ್ತೇವೆ. ಕಡಂಬರು ಹಿರಿಯರಾಗಿದ್ದು ಅವರು ಸೇವೆ ಮುಂದೆಯು ಆಗತ್ಯವಿದೆ ಎಂದರು.

Share Information