ದೇವನಹಳ್ಳಿ, ಸೆಪ್ಟೆಂಬರ್​​ 14: ಸಾಲದ ಹೊರೆಗೆ ಇಬ್ಬರು ಮಕ್ಕಳನ್ನು ಬಕೆಟ್​ನಲ್ಲಿ ಮುಳುಗಿಸಿ ಕೊಂದು ಬಳಿಕ ತಂದೆ ಕೂಡ ಆತ್ಮಹತ್ಯೆ ಮಾಡಿಕೊಂಡಿರುವಂತಹ ಘಟನೆಯೊಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ಗೊಣಕನಹಳ್ಳಿ ಗ್ರಾಮದಲ್ಲಿ ನಡೆದಿದೆ.


ಹೊರಗಡೆ ಹೋಗಿದ್ದ ಪತ್ನಿ ಮನೆಗೆ ಬಂದು ನೋಡಿದಾಗ ಆಘಾತಗೊಂಡಿದ್ದಾರೆ. ಬಳಿಕ ತಾನೂ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಮುಂದಾಗುತ್ತಿದ್ದಂತೆ ಸ್ಥಳಿಯರು ರಕ್ಷಣೆ ಮಾಡಿದ್ದಾರೆ. ಗಂಡ ಶಿವು ( 32 ) ಮಗಳು ಚಂದ್ರಕಲಾ ( 11 ) ಮಗ ಉದಯ್ ಸೂರ್ಯ ( 07 ) ಮೃತ ದುರ್ದೈವಿಗಳಾಗಿದ್ದಾರೆ. ತಾಯಿ ಮಂಜುಳಾ ಪ್ರಾಣಾಪಾಯದಿಂದ ಪಾರಾಗಿದ್ದಾಳೆ. ಗಂಡ ಅಪಘಾತದಲ್ಲಿ ಗಾಯಗೊಂಡಿದ್ದ ಕಾರಣ ಚಿಕಿತ್ಸೆಗಾಗಿ ಈ ಕುಟುಂಬ ಸಾಲ ಮಾಡಿಕೊಂಡಿದ್ರು.

ಶಿವು ಮತ್ತು ಮಂಜುಳಾ ಪ್ರೀತಿಸಿ ಮದುವೆಯಾಗಿದ್ದರು. ಕೆಲಸಕ್ಕೆ ಹೋಗುತ್ತಿದ್ದ ವೇಳೆ ಪ್ರೀತಿ ಮಾಡಿದ್ದು, ಅನ್ಯ ಜಾತಿಯಾಗಿದ್ದ ಕಾರಣ ಪೋಷಕರ ವಿರೋಧದ ನಡುವೆ ಮದುವೆ ಮಾಡಿಕೊಂಡಿದ್ದರು. ಮದುವೆ ನಂತರ ಚೆನ್ನಾಗಿದ್ದ ಕುಟುಂಬಕ್ಕೆ ಅಪಘಾತದ ಬರೆ ಬಿದ್ದಿತ್ತು. ರಸ್ತೆ ಅಪಘಾತದಲ್ಲಿ ಶಿವು ಕಾಲು ಮುರಿದುಕೊಂಡು ಆಸ್ವತ್ರೆ ಪಾಲಾಗಿದ್ದ. ಎರಡು ಮನೆಯವರ ಸಹಕಾರವಿಲ್ಲದ ಕುಟುಂಬ ಕಾರಣ ಆರ್ಥಿಕ ಸಂಕಷ್ಟಕ್ಕೆ ಸಿಲುಕಿತ್ತು. ಮನೆ ನಿರ್ವಹಣೆಗೆ ಮಹಿಳೆ ಕೆಲಸಕ್ಕೆ ಹೋಗ್ತಿದ್ರೆ, ಗಂಡ ಮನೆಯಲ್ಲೆ ಇರ್ತಿದ್ದ. ಇತ್ತೀಚೆಗೆ ಪತ್ನಿ ಶೀಲದ ಮೇಲೂ ಶಿವು ಅನುಮಾನ ಪಡುತ್ತಿದ್ದ. ಜೊತೆಗೆ ಸಾಲ ಹೆಚ್ಚಾಗಿ ಹಣವಿಲ್ಲದ ಕಾರಣ ಎರಡು ಮೂರು ತಿಂಗಳಿಂದೆಯೇ ದಂಪತಿ ಸಾಯುವ ನಿರ್ಧಾರ ಮಾಡಿದ್ದರು. ತಾವು ಸತ್ತರೆ ಮಕ್ಕಳು ತಬ್ಬಲಿಗಳಾಗ್ತಾರೆ ಅಂತ ಅವರನ್ನು ಸಾಯಿಸೋಣ ಅಂತ ನಿರ್ಧರಿಸಿದ್ದರು.

ನಾವು ಸತ್ತರೆ ಮಕ್ಕಳು ತಬ್ಬಲಿಗಳಾಗುತ್ತಾರೆ ಅಂತ ಮಕ್ಕಳನ್ನು ಸಾಯಿಸುವ ನಿರ್ಧಾರ ಕೂಡ ಮಾಡಿದ್ದಾಳೆ ಎನ್ನಲಾಗ್ತಿದೆ. ಮೊದಲಿಗೆ ಗಂಡ ಮತ್ತು ಮಕ್ಕಳ ಕುತ್ತಿಗೆಯನ್ನ ವೇಲ್ ನಿಂದ ಬಿಗಿದು ಕೊಲೆ ಮಾಡಿದ್ದ ಪತ್ನಿ. ನಂತರ ಹಗ್ಗದಿಂದ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ ವೇಳೆ ಹಗ್ಗ ತುಂಡಾಗಿದೆ.

Share Information