ಮಂಗಳೂರು ಜನವರಿ 04: ಬಜಪೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇತ್ತೀಚೆಗೆ ನಡೆದ ಅಕ್ರಮ ದನದ ಮಾಂಸ ಸಾಗಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ ಪ್ರಚೋದನಕಾರಿಯಾಗಿ ಪೋಸ್ಟ್ ಗಳನ್ನು ಹಾಕಲಾಗಿದ್ದು, ಪೋಸ್ಟ್ ಹಾಕಿದವರ ವಿರುದ್ದ ಬಜ್ಪೆ ಪೊಲೀಸರು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿದ್ದಾರೆ.

ಬಜ್ಪೆಯಲ್ಲಿ ನಡೆದ ಅಕ್ರಮ ದನದ ಮಾಂಸ ಮಾರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣವಾದ INSTAGRAM ನಲ್ಲಿ muslim__leader ಎಂಬ ಇನಸ್ಟಾಗ್ರಾಮ ಪೇಜ್ ನಲ್ಲಿ ಇಬ್ಬರು ಯುವಕರ ಪೋಟೋವನ್ನು ಹಾಕಿ “ಮಿತಿಮೀರುತ್ತಿರುವ ಸಂಘಿಗಳ ಅಟ್ಟಹಾಸ ಇದಕ್ಕೆ ಕಡಿವಾಣ ಇಲ್ಲವಾಯಿತೆ?, ಸಂಘಪರಿವಾರದ ಭಯೋತ್ಪಾದಕರ ದಾಳಿ ಈಗೀಗ ಹೆಚ್ಚುತ್ತಲೇ ಇದೆ, ಅವರಿಗೆ ಕಾನೂನಿನ ಭಯವಿಲ್ಲ ಕಾನೂನು ಅವರನ್ನು ಏನು ಮಾಡುವುದಿಲ್ಲ ಅವರನ್ನು ಕೇಳುವವರು ಇಲ್ಲ ಹೇಳುವವರಿಲ್ಲ ಎಂಬ ಧೈರ್ಯ ಅವರಿಗಿದೆ ನಾವು ಆಡಿದ್ದೇ ಆಟ ಎಂಬಾತಾಗಿದೆ.
ಇದನ್ನೂ ಓದಿ-ಕೋಳಿ ಅಂಕ ವಿಚಾರದಲ್ಲಿ ಜಿಲ್ಲೆಯ ಬಿಜೆಪಿ ಶಾಸಕರು ಚಿಲ್ಲರೆ ರಾಜಕೀಯ ಮಾಡಲು ಹೊರಟಿದ್ದಾರೆ – ಹರೀಶ್ ಕುಮಾರ್ ಪ್ರಶ್ನೆ
ಇನ್ನು ಗೋಮಾಂಸ ತಿನ್ನುತ್ತೇವೆ ಸಂಘಿಗಳೇ ಏನು ಮಾಡುತ್ತೀರ ಥೂ ನಿಮ್ಮ ಜನ್ಮಕ್ಕೆ ಹದಿಹರೆಯದ ಮಕ್ಕಳನ್ನು ಕೂಡ ನೀವು ನೋಡುವುದಿಲ್ಲ ನಿಮ್ಮ ಮನೆಯಲ್ಲಿ ಮಕ್ಕಳು ಇಲ್ಲವೇ ಸರ್ಕಾರ ಆದಷ್ಟು ಬೇಗ ಈ ನಾಯಿಗಳ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು. ಗಂಜಿಮಠ ವ್ಯಾಪ್ತಿಯ ನಾರ್ಳಪದವು ಎಂಬಲ್ಲಿ ಒಡ್ಡೂರಿನ ಪ್ರದೀಪ್, ರಜಿತ್, ಸಂತೋಷ್, ಹಾಗೂ ಜನಾರ್ಧನ ಎಂಬ ಸಂಘಿ ಗೂಂಡಾಗಳಿಂದ ಮೂಲ್ಲರಪಟ್ಟಣದ ಅಮಾಯಕ ಮುಸ್ಲಿಂ ತಂದೆ ಮತ್ತು ಮಗಳ ಮೇಲೆ ಮಾರಣಾಂತಿಕ ಹಲ್ಲೆ” Muslim- Leader ಎಂದು ಟೈಪು ಮಾಡಿ ಪೋಸ್ಟ್ ಮಾಡಿರುವುದು ಅಲ್ಲದೆ instg4ama ಎಂಬ ಇನಸ್ಟಾಗ್ರಾಮ ID ಯಿಂದ ಸದ್ರಿ ಪೋಸ್ಟ್ ಗೆ “ ಇವರಿಗೆ ಸುಹಾಸ್ ಶಟ್ಟಿ ಟ್ರೀಟ್ ಮೆಂಟ್ ಕೊಡಬೇಕು ಸದ್ಯದಲ್ಲಿ” ಎಂದು ಕಾಮೆಂಟ್ ಮಾಡಿರುತ್ತಾರೆ.
ಸಮಾಜಿಕ ಜಾಲತಾಣದಲ್ಲಿ ವರ್ಗ ವರ್ಗಗಳನ್ನು ಮತ್ತು ಸಮುದಾಯವನ್ನು ಪ್ರಚೋದಿಸುವಂತೆ ಉದ್ದೇಶ ಪೂರ್ವಕವಾಗಿ ಪೋಸ್ಟ್ ಮಾಡಿರುವ ಹಾಗೂ ಸದ್ರಿ ಪೋಸ್ಟ್ ಗೆ ಸುಹಾಸ್ ಶೆಟ್ಟಿ ರವರನ್ನು ಕೊಂದ ರೀತಿಯಲ್ಲಿ ಸದ್ಯದಲ್ಲಿ ಕೊಲ್ಲುತ್ತೇವೆ ಎಂದು ಬೆದರಿಕೆ ಹಾಕಿ ಕಮೆಂಟ್ ಮಾಡಿರುವರರ ವಿರುದ್ದ ಬಜಪೆ ಪೊಲೀಸರು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದ್ದಾರೆ.



