Connect with us

KARNATAKA

ನೊಂದಿರುವ ಪುರುಷರಿಗೆ ಮಹಿಳಾ ಆಯೋಗದಂತೆ ಪುರುಷ ಆಯೋಗ ರಚನೆಗೆ ಒತ್ತಾಯ

ಶಿವಮೊಗ್ಗ: ಸ್ತ್ರಿಯರ ಮೇಲಿನ ದೌರ್ಜನ್ಯ, ಸಮಸ್ಯೆಗಳಿಗೆ ಧ್ವನಿಯಾಗಿರುವ ಮಹಿಳಾ ಆಯೋಗದಂತೆ ಪುರುಷರ ದನಿ ಕೂಡ ಆಲಿಸಬೇಕಿದೆ. ಈ ನಿಟ್ಟಿನಲ್ಲಿ ಪುರುಷರಿಗೂ ಒಂದು ಆಯೋಗವನ್ನು ರಚನೆ ಮಾಡಬೇಕು ಎಂದು ಕಾರ್ವೆಟೆಕಾ ಹ್ಯೂಮನ್ ರೈಟ್ಸ್ ವೆಲ್ಫೇರ್ ಹಾಗೂ ಕ್ರೈಂ ಕಂಟ್ರೋಲ್ ಫೌಂಡೇಶನ್‌ ಶಿವಮೊಗ್ಗ ಶಾಖೆ ಒತ್ತಾಯಿಸಿದೆ.

ಈ ಬೇಡಿಕೆ ಮುಂದಿರಿಸಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಶಿವಮೊಗ್ಗ ಘಟಕದ ಅಧ್ಯಕ್ಷ ಸಂತೋಷ್ ಹೊನ್ನೆಗುಂಡಿ, ಮಹಿಳೆಯರಿಗೆ ಏನೇ ತೂಂದರೆ ಉಂಟಾದರೆ ಅವರ ರಕ್ಷಣೆಗೆ ಕಾನೂನು ಇದೆ. ಅವರಿಗೆ ಮಹಿಳಾ ಆಯೋಗ ಇದೆ. ಇದರಿಂದ ಅವರಿಗೆ ಸಕಾಲದಲ್ಲಿ ಸ್ಪಂದನೆ ಸಿಗುತ್ತಿದೆ. ಆದರೆ, ಎಷ್ಟೋ ಸಂದರ್ಭಗಳಲ್ಲಿ ಪುರುಷರು ಸಹ ದೌರ್ಜನ್ಯಕ್ಕೆ ಒಳಗಾಗಿದ್ದಾರೆ. ಸುಳ್ಳು ಕೇಸುಗಳಲ್ಲಿ ಅವರ ಬಂಧನವಾಗುತ್ತಿದೆ. ಇದರಿಂದ ಅವರ ಜೀವನ, ಕೀರ್ತಿ, ಯಶಸ್ಸು ಎಲ್ಲಾ ಮಣ್ಣು ಪಾಲಾಗುತ್ತಿದೆ. ಅಂತಹ ಸಂದರ್ಭಗಳಲ್ಲಿ ಅವರ ರಕ್ಷಣೆಗೆ ಯಾವುದೇ ಕಾನೂನು ಇಲ್ಲ. ಇದಕ್ಕೆ ಸಂಬಂಧಪಟ್ಟಂತೆ ಯಾಕೆ ಹೋರಾಟ ಮಾಡಬಾರದು ಎಂದು ನಮ್ಮಲ್ಲಿ ಹಲವರು ಬಂದು ಕೇಳಿದ್ದಾರೆ. ಈ ಹಿನ್ನೆಲೆ ಈ ಬೇಡಿಕೆ ಮುಂದಿಟ್ಟಿದ್ದೇವೆ ಎಂದರು.

ನೊಂದಿರುವ ಪುರುಷರಿಗೂ ಬೇಕಿದೆ ಆಯೋಗ : ನೋವಿ ಇಂದು ಅನೇಕ ಘಟನೆಗಳಲ್ಲಿ ಹಲವು ಬಾರಿ ಅಮಾಯಕ ಪುರುಷರ ಮೇಲೆ ವರದಕ್ಷಿಣೆ, ಅತ್ಯಾಚಾರ, ದೌರ್ಜನ್ಯ, ಲೈಂಗಿಕ ದೌರ್ಜನ್ಯ ಪ್ರಕರಣಗಳನ್ನು ದಾಖಲಿಸಿ ಜೈಲಿಗೆ ಕಳುಹಿಸುವ ಕೆಲಸವನ್ನು ಮಾಡಲಾಗುತ್ತಿದೆ. ಇಲ್ಲಿ ಸಾಕಷ್ಟು ಕೇಸುಗಳು ಸುಳ್ಳು‌ ಕೇಸುಗಳಾಗಿವೆ. ಕೊನೆಯಲ್ಲಿ ಇದು ರಾಜಿಯಲ್ಲಿ ಅಂತ್ಯವಾಗುತ್ತದೆ. ಆದರೆ, ಈ ಅವಧಿಯಲ್ಲಿ ಅಮಾಯಕ ಪುರುಷನೊಬ್ಬ ಸಮಾಜದಲ್ಲಿ ಏನೂ ತಪ್ಪು ಮಾಡದೆ ನಿಂದನೆಗೆ ಒಳಗಾಗುತ್ತಾರೆ. ಇಂತಹ ನೂಂದ ಪುರುಷರಿಗೆ ಆಯೋಗ ಬೇಕು ಎಂದು ನಮ್ಮ ಸಂಸ್ಥೆಯ ಮುಂದೆ ಹಲವರು ಬೇಡಿಕೆಯನ್ನು ಇಟ್ಟಿದ್ದಾರೆ ಎಂದು ಸಂತೋಷ್​ ಹೊನ್ನೆಗುಂಡಿ ತಿಳಿಸಿದರು.‌

ಇದಕ್ಕೆ ಸಂಬಂಧ ಪಟ್ಟಂತೆ ಕೇಂದ್ರ ಸರ್ಕಾರ ಹಾಗೂ ಸಂಬಂಧ ಪಟ್ಟಂತವರಿಗೆ ನಮ್ಮ ಸಂಸ್ಥೆ ಮನವಿ ಮಾಡಲಿದೆ. ಎಲ್ಲಿ ಸುಳ್ಳು ಕೇಸುಗಳಾಗಿರುತ್ತದೆಯೇ, ಅವರ ಪರವಾಗಿ ಇರುವಂತಹ, ನೊಂದವರಿಗೆ ಸ್ಪಂದನೆ ಸಿಗಬೇಕು ಎಂಬುದು ನಮ್ಮ ಒತ್ತಾಯವಾಗಿದೆ. ಮಾನವ ಹಕ್ಕುಗಳ ಸಂರಕ್ಷಣೆ ಹಾಗೂ ಅದನ್ನು ಕಾಪಾಡುವ ಕಾರ್ಯವನ್ನು ನಾವು ಸದಾ ನಿರ್ವಹಿಸುತ್ತಿದ್ದೇವೆ. ನಮ್ಮ ಇತಿಮಿತಿಯಲ್ಲಿ ಸದ್ದಿಲ್ಲದೆ ಉತ್ತಮ ಕೆಲಸ ಮಾಡಿಕೊಂಡು ಬಂದಿದ್ದೇವೆ. ಇದೀಗ ಪುರುಷ ಆಯೋಗಕ್ಕೆ ಬೇಡಿಕೆ ಇರಿಸಿದ್ದೇವೆ ಎಂದರು. ಈ ವೇಳೆ ಸಂಸ್ಥೆಯ ಪಾಧಿಕಾರಿಗಳು ಹಾಜರಿದ್ದರು.
Share Information
Continue Reading
Advertisement
Click to comment

Leave a Reply

Your email address will not be published. Required fields are marked *