LATEST NEWS
ಹಾಡುಹಗಲೇ ಪಾರ್ಸೆಲ್ ಗಳ ಸಮೇತ ಡೆಲಿವರಿ ಬಾಯ್ ನ ಸ್ಕೂಟರ್ ಕದ್ದ ಕಳ್ಳ
ಉಡುಪಿ : ಹಾಡುಹಗಲೇ ಡೆಲಿವರಿ ಬಾಯ್ ಒಬ್ಬರ ಸ್ಕೂಟರ್ ನ್ನು ಕಳ್ಳನೊಬ್ಬ ಪಾರ್ಸೆಲ್ ಗಳ ಸಮೇತ ಕದ್ದುಕೊಂಡು ಹೋದ ಘಟನೆ ಉಡುಪಿಯಲ್ಲಿ ನಡೆದಿದೆ.
ಅಂಬಲಪಾಡಿಯಲ್ಲಿರುವ ಇ-ಕಾರ್ಟ್ ಸಂಸ್ಥೆಯಲ್ಲಿ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದ ಕೊಳಲಗಿರಿಯ ಗಣೇಶ (21) ತಮ್ಮ ಹೋಂಡಾ ಡಿಯೋ ಸ್ಕೂಟರ್ ನ್ನು ವಿದ್ಯೋದಯ ಹೈಸ್ಕೂಲ್ ಬಳಿ ಇರುವ ಸಾಯಿರಾಧಾ ಗೋಕುಲಧಾಮ ಅಪಾರ್ಟ್ಮೆಂಟ್ನ ಎದುರುಗಡೆ ನಿಲ್ಲಿಸಿ ಪಾರ್ಸೆಲ್ ಕೊಟ್ಟು ವಾಪಾಸು ಬಂದು ನೋಡಿದಾಗ ಅವರ ಸ್ಕೂಟರ್ ಮಾಯ ಆಗಿದೆ. ನಂತರ ಎಲ್ಲಾ ಕಡೆ ಹುಡುಕಿ ಪತ್ತೆಯಾಗದೆ ಇದ್ದಾಗ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿದ್ದಾರೆ. ಈ ನಡುವೆ ಗಣೇಶ ಅವರ ಸ್ಕೂಟರ್ ನ್ನು ಕಳ್ಳನೋರ್ವ ಎಗರಿಸಿರುವ ದೃಶ್ಯಾವಾಳಿ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಸ್ಕೂಟರ್ ನಲ್ಲಿ Infinix Hot -10 play ಕಂಪೆನಿಯ ರೂ. 8,299/- ಮೌಲ್ಯದ ಮೊಬೈಲ್, Pigeon ಕಂಪೆನಿಯ ರೂ. 2,191/- ಮೌಲ್ಯದ ಮಿಕ್ಸರ್ ಗ್ರೈಂಡರ್ ಹಾಗೂ ಇನ್ನಿತರ ಸಣ್ಣಪುಟ್ಟ ಪಾರ್ಸೆಲ್ ಒಟ್ಟು ಮೌಲ್ಯ 20,000/- ಆಗಬಹುದು. 80,000 ಮೌಲ್ಯದ ಸ್ಕೂಟರ್ ಕಳ್ಳತನವಾಗಿದೆ ಎಂದು ದೂರು ನೀಡಿದ್ದಾರೆ.
You must be logged in to post a comment Login