LATEST NEWS
ಗಂಡನ ಚಿಕ್ಕಪ್ಪನ ಮಗನ ಜೊತೆ ಸಂಬಂಧ – ಗಂಡನಿಗೆ ನಿದ್ರೆ ಮಾತ್ರೆ ಜೊತೆಗೆ ಕರೆಂಟ್ ಶಾಕ್ ಕೊಟ್ಟು ಕೊಲೆ ಮಾಡಿದ ಹೆಂಡತಿ

ನವದೆಹಲಿ ಜುಲೈ 18: ದೆಹಲಿಯ ದ್ವಾರಕಾದಲ್ಲಿ ನಡೆದ ಕರೆಂಟ್ ಶಾಕ್ ಗೆ ವ್ಯಕ್ತಿಯೊಬ್ಬ ಮೃತಪಟ್ಟ ಪ್ರಕರಣ ಇದೀಗ ತಿರುವು ಪಡೆದುಕೊಂಡಿದ್ದು, ಹೆಂಡತಿಯೇ ಗಂಡನಿಗೆ ನಿದ್ರೆ ಮಾತ್ರೆ ಕೊಟ್ಟು ಬಳಿಕ ಕರೆಂಟ್ ಶಾಕ್ ನೀಡಿ ಕೊಲೆ ಮಾಡಿದ್ದಾಳೆ. ಇದು ಸಿನಿಮಾ ಸ್ಕ್ರಿಪ್ಟ್ ಅಲ್ಲ, ಬದಲಾಗಿ ಇನ್‌ಸ್ಟಾಗ್ರಾಮ್ ಚಾಟ್‌ನಲ್ಲಿ ಯೋಜಿಸಲಾದ ‘ಭಯಾನಕ ಕೊಲೆ ಕಥಾವಸ್ತು’, ಇದರಲ್ಲಿ ಹೆಂಡತಿ ತನ್ನ ಸೋದರ ಮಾವನೊಂದಿಗೆ ಸೇರಿ ಗಂಡನನ್ನು ಕೊಲ್ಲಲು ಮಾಡಿದ ಪಕ್ಕಾ ಪ್ಲ್ಯಾನ್ ಇದೆ.
ಜುಲೈ 13ರಂದು ದೆಹಲಿಯ ಮಾತಾ ರೂಪಾನಿ ಮ್ಯಾಗೋ ಆಸ್ಪತ್ರೆಗೆ ಪತ್ನಿ ಸುಶ್ಮಿತಾ, ತನ್ನ ಪತಿ ಕರಣ್ ದೇವ್ನನ್ನು ಕರೆತಂದಿದ್ದಳು. ಪತಿ ಕರಣ್ ದೇವ್‌ಗೆ ಆಕಸ್ಮಿಕವಾಗಿ ಕರೆಂಟ್ ಶಾಕ್ ಹೊಡೆಯಿತು ಎಂದು ಹೇಳಿದ್ದಳು. ಆದರೇ, ಕರಣ್ ದೇವ್ನನ್ನು ಪರೀಕ್ಷಿಸಿದ ವೈದ್ಯರು ಈಗಾಗಲೇ ಕರಣ್ ದೇವ್ ಸಾವನ್ನಪ್ಪಿದ್ದಾರೆ ಎಂದು ಹೇಳಿದ್ದರು. ಬಳಿಕ ಕರಣ್ ದೇವ್ ಪೋಷಕರು ಕೂಡ ಶವದ ಮರಣೋತ್ತರ ಪರೀಕ್ಷೆ ನಡೆಸುವುದು ಬೇಡ ಎಂಬ ತೀರ್ಮಾನಕ್ಕೆ ಬಂದಿದ್ದರು. ಆಕಸ್ಮಿಕವಾಗಿ ಕರೆಂಟ್ ಶಾಕ್ನಿಂದ ಸಾವನ್ನಪ್ಪಿರುವುದರಿಂದ ಮರಣೋತ್ತರ ಪರೀಕ್ಷೆಯ ಅಗತ್ಯವಿಲ್ಲ ಎಂಬ ತೀರ್ಮಾನಕ್ಕೆ ಬಂದಿದ್ದರು. ಆದರೆ, ಕರಣ್ ದೇವ್‌ಗೆ ಇನ್ನೂ 36 ವರ್ಷ ವಯಸ್ಸು, ಸಾವಿನ ಸಂದರ್ಭದ ಬಗ್ಗೆ ಅನುಮಾನಗಳಿವೆ, ಹೀಗಾಗಿ ಮರಣೋತ್ತರ ಪರೀಕ್ಷೆ ನಡೆಸಬೇಕೆಂದು ದೆಹಲಿ ಪೊಲೀಸರು ಒತ್ತಾಯ ಮಾಡಿದ್ದರು. ಹೀಗಾಗಿ ದೆಹಲಿಯ ದೀನದಯಾಳ್ ಉಪಾಧ್ಯಾಯ ಆಸ್ಪತ್ರೆಯಲ್ಲಿ ಶವದ ಮರಣೋತ್ತರ ಪರೀಕ್ಷೆ ನಡೆಸಲಾಗಿತ್ತು. ಇದಕ್ಕೆ ಪತ್ನಿ ಸುಶ್ಮಿತಾ ಹಾಗೂ ಪತಿಯ ಸೋದರ ಸಂಬಂಧಿ ರಾಹುಲ್ ಆಕ್ಷೇಪ ವ್ಯಕ್ತಪಡಿಸಿದ್ದರು.

ಬಳಿಕ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸಿದ ವೇಳೆ ಹೆಂಡತಿ ಮತ್ತು ಆತನ ಪ್ರಿಯಕ ಇನ್ಸ್ಟಾ ಗ್ರಾಂ ನಲ್ಲಿ ನಡೆಸಿದ ಚಾಟ್ ಗಳು ಕೊಲೆಯ ಸಂಪೂರ್ಣ ಮಾಹಿತಿ ನೀಡಿತ್ತು.
ತನ್ನ ಪ್ರಿಯಕರನೊಂದಿಗೆ ಚಾಟಿಂಗ್ ನಲ್ಲಿ ನಿದ್ರೆ ಮಾತ್ರೆ ಬಗ್ಗೆ ಸುಶ್ಮಿತಾ ಚಾಟ್ ಮಾಡಿದ್ದಳು. ಈ ವೇಳೆ ಆತ 15 ಮಾತ್ರೆಗಳನ್ನು ನೀಡವಂತೆ ಸಲಹೆ ಮಾಡಿದ್ದ ಅದರಂತೆ ಊಟದಲ್ಲಿ ನಿದ್ರೆ ಮಾತ್ರೆಗಳನ್ನು ಹಾಕಿ ಗಂಡನಿಗೆ ನೀಡಿದ್ದಳು. ಬಳಿಕ ನಿದ್ರೆ ಮಾತ್ರೆ ತೆಗೆದುಕೊಂಡ ಬಳಿಕ ಎಷ್ಟು ಹೊತ್ತಿಗೆ ಮನುಷ್ಯ ಸಾಯುತ್ತಾನೆ ಎಂದು ಗೂಗಲ್ ನಲ್ಲಿ ಸರ್ಚ್ ಮಾಡಿದ್ದಾಳೆ. ಆದರೆ ಕಥೆ ಇಲ್ಲಿಗೆ ಮುಗಿಯುವುದಿಲ್ಲ. ಮಾತ್ರೆಗಳ ನಂತರವೂ ಕರಣ್ ಸ್ಥಿತಿ ಹೆಚ್ಚು ಬದಲಾಗದಿದ್ದಾಗ, ಆಕೆ ತನ್ನ ಪ್ರಿಯಕರನಿಗೆ ತಿಳಿಸಿದ್ದಾಳೆ. ಈ ವೇಳೆ ಆತ ಕರೆಂಟ್ ಶಾಕ್ ನೀಡಲು ಹೇಳಿದ್ದಾನೆ. ಅದರಂತೆ ಇಬ್ಬರು ಒಟ್ಟಿಗೆ ಕರಣ್ ಗೆ ಕರೆಂಟ್ ಶಾಕ್ ಕೊಟ್ಟು ಸಾಯಿಸಿದ್ದಾರೆ.
ಕರಣ್ ಪತ್ನಿ ಮತ್ತು ಆಕೆಯ ಸಂಗಾತಿ ನಡುವೆ ನಡೆದ ‘ಚಾಟ್’ನಲ್ಲಿ ದೇವ್ ಪತ್ತೆಯಾಗಿದ್ದು, ಅದರಲ್ಲಿ ಅವರು ಕೊಲೆಗೆ ಸಂಚು ರೂಪಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಆ ಚಾಟ್‌ನಲ್ಲಿ ಇಬ್ಬರೂ ಪ್ರೇಮ ಸಂಬಂಧದಲ್ಲಿದ್ದಾರೆ ಎಂದು ತಿಳಿದುಬಂದಿದೆ. ಇದರಿಂದಾಗಿ ಕರಣ್‌ನನ್ನು ಕೊಲ್ಲಲು ನಿರ್ಧರಿಸಿದರು. ಅವರು ಊಟದಲ್ಲಿ 15 ನಿದ್ರೆ ಮಾತ್ರೆಗಳನ್ನು ನೀಡಿ ಅವನು ಮೂರ್ಛೆ ಹೋಗುವವರೆಗೆ ಕಾಯುತ್ತಿದ್ದರು. ಆರೋಪಿಗಳಿಬ್ಬರೂ ಗೂಗಲ್‌ನಲ್ಲಿ ನಿದ್ರೆ ಮಾತ್ರೆಗಳ ಮೂಲಕ ಸಾವಿನ ಬಗ್ಗೆ ಹುಡುಕಿದ್ದಾರೆ ಎಂದು ತಿಳಿದುಬಂದಿದೆ. ಆರೋಪಿ ಪತ್ನಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ವಿಚಾರಣೆಯ ಸಮಯದಲ್ಲಿ, ಆಕೆ ತನ್ನ ಪ್ರಿಯಕರ – ಭಾವನೊಂದಿಗೆ ಸೇರಿ ತನ್ನ ಪತಿಯನ್ನು ಕೊಂದಿದ್ದಾಗಿ ಒಪ್ಪಿಕೊಂಡಿದ್ದಾಳೆ.