Connect with us

    LATEST NEWS

    ಸ್ಕೂಟಿಗೆ SEX ಅಕ್ಷರ ಒಳಗೊಂಡ ನೋಂದಣಿ ಸಂಖ್ಯೆ – ಸಾರಿಗೆ ಇಲಾಖೆಗೆ ದೆಹಲಿ ಮಹಿಳಾ ಆಯೋಗದಿಂದ ನೊಟೀಸ್

    ನವದೆಹಲಿ : ದೆಹಲಿ ಆರ್ ಟಿಓ ದಲ್ಲಿ ವಾಹನ ನೊಂದಣಿ ಸಂದರ್ಭ SEX ಪದ ಬಳಕೆ ವಿರುದ್ದ ಇದೀಗ ದೆಹಲಿ ಮಹಿಳಾ ಆಯೋಗ ಗರಂ ಆಗಿದ್ದು, ಬಾಲಕಿಯೊಬ್ಬಳಿಗೆ ನೀಡಿರುವ ದ್ವಿಚಕ್ರ ವಾಹನದ ನೋಂದಣಿ ಸಂಖ್ಯೆಯನ್ನು ಬದಲಾಯಿಸುವಂತೆ ಕೋರಿ ದೆಹಲಿ ಮಹಿಳಾ ಆಯೋಗ(ಡಿಸಿಡಬ್ಲ್ಯು) ಸಾರಿಗೆ ಇಲಾಖೆಗೆ ಶನಿವಾರ ನೋಟಿಸ್ ಜಾರಿ ಮಾಡಿದೆ.


    ದೆಹಲಿಯಲ್ಲಿ ವಾಹನ ನೊಂದಣಿ ಸಂದರ್ಭ SEX ಪದ ಇರುವ ಸರಣಿ ಪ್ರಾರಂಭವಾಗಿದ್ದು, ಇತ್ತೀಚೆಗೆ ವಿಧ್ಯಾರ್ಥಿನಿಯೊಬ್ಬಳ ಸ್ಕೂಟಿಗೆ SEX ಸೀರಿಸ್ ನ ನಂಬರ್ ದೊರಕಿದ್ದ ಹಿನ್ನಲೆ ಮುಜುಗರಕ್ಕೊಳಗಾದ ಆಕೆ ಸ್ಕೂಟಿಯನ್ನು ಚಲಾಯಿಸುವುದನ್ನೆ ನಿಲ್ಲಿಸಿದ್ದಳು. ಇದೀಗ ಮಾಧ್ಯಮಗಳಲ್ಲಿ ವರದಿಯಾಗಿತ್ತು.


    ಈ ಹಿನ್ನಲೆ ಮಹಿಳಾ ಆಯೋಗ ಆರ್ ಟಿಓ ಅಧಿಕಾರಿಗಳಿಂದ ಮಾಹಿತಿ ಕೇಳಿದೆ. ಜನರು ಕ್ಷುಲ್ಲಕರಾಗಿ ಕಿರುಕುಳ ನೀಡುತ್ತಿರುವುದು ಅತ್ಯಂತ ದುರದೃಷ್ಟಕರ ಸಂಗತಿಯಾಗಿದೆ, ಬಾಲಕಿಗೆ ಇಷ್ಟೊಂದು ಕಿರುಕುಳ ನೀಡುವುದು ಸರಿಯಲ್ಲ. ಇನ್ನು ಮುಂದೆ ಬಾಲಕಿಗೆ ತೊಂದರೆಯಾಗದಂತೆ ಈ ಸಮಸ್ಯೆಯನ್ನು ಬಗೆಹರಿಸಲು ಸಾರಿಗೆ ಇಲಾಖೆಗೆ ನಾಲ್ಕು ದಿನಗಳ ಕಾಲಾವಕಾಶ ನೀಡಿದ್ದೇವೆ” ಎಂದು ಡಿಸಿಡಬ್ಲ್ಯು ಅಧ್ಯಕ್ಷೆ ಸ್ವಾತಿ ಮಲಿವಾಲ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ‘SEX'” ಪದವನ್ನು ಹೊಂದಿರುವ ಈ ಹಂಚಿಕೆ ಸರಣಿಯಲ್ಲಿ ನೋಂದಾಯಿಸಲಾದ ಒಟ್ಟು ವಾಹನಗಳ ಸಂಖ್ಯೆಯನ್ನು ಸಲ್ಲಿಸಲು ನಾನು ಸಾರಿಗೆ ಇಲಾಖೆಯನ್ನು ಸೂಚಿಸಿದ್ದೇನೆ” ಎಂದು ಅವರು ಹೇಳಿದ್ದಾರೆ. ಇನ್ನು ಈಗಾಗಲೇ ಈ ಸರಣಿಯನ್ನು ವಾಹನಗಳ ನೊಂದಣಿಗೆ ಬಳಸುವುದನ್ನು ನಿಲ್ಲಿಸಲಾಗಿದೆ ಎಂದು ಆರ್ ಟಿಓ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply