DAKSHINA KANNADA
ಕಾರಿಗೆ ಡಿಕ್ಕಿ ಹೊಡೆದ ಜಿಂಕೆ ಸಾವು….!!
ಉಪ್ಪಿನಂಗಡಿ ಸೆಪ್ಟೆಂಬರ್ 22: ಕಾರೊಂದು ಜಿಂಕೆಗೆ ಡಿಕ್ಕಿ ಹೊಡೆದ ಪರಿಣಾಮ ಜಿಂಕೆ ಸಾವನಪ್ಪಿರುವ ಘಟನೆ ಮಂಗಳವಾರ ರಾತ್ರಿ ಉಪ್ಪಿನಂಗಡಿ ವಲಯ ಅರಣ್ಯ ವ್ಯಾಪ್ತಿಯ ಬೆಳಾಲು ಗ್ರಾಮದ ಬೈತಾಡಿ ಎಂಬಲ್ಲಿ ಸಂಭವಿಸಿದೆ.
ಕಕ್ಕಿಂಜೆಯ ಸಿದ್ದಿಕ್ ಎಂಬವರು ಉಪ್ಪಿನಂಗಡಿ ಕಡೆಗೆ ಕಾರು ಚಲಾಯಿಸಿಕೊಂಡು ಹೋಗುತ್ತಿದ್ದಾಗ ಏಕಾಏಕಿ ರಸ್ತೆ ದಾಟಲು ಜಿಗಿದ ಜಿಂಕೆ ಕಾರಿಗೆ ಡಿಕ್ಕಿಯಾಗಿ ಸ್ಥಳದಲ್ಲೇ ಸಾವನ್ನಪ್ಪಿತ್ತು. ಈ ವಿಚಾರವನ್ನು ಅವರು ತಕ್ಷಣವೇ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ತಿಳಿಸಿದ್ದು, ಅಪಘಾತ ನಡೆದ ಘಟನಾ ಸ್ಥಳಕ್ಕೆ ಭೇಟಿ ನೀಡಿದ ಇಲಾಖಾ ಅಧಿಕಾರಿಗಳು ಜಿಂಕೆ ಶವವನ್ನು ವಶಕ್ಕೆ ಪಡೆದು ಇಲಾಖಾ ವಿಧಿ ವಿಧಾನ ನಡೆಸಿ ಮಣ್ಣಗುಂಡಿ ಕಾಡಿನಲ್ಲಿ ಅಂತ್ಯವಿಧಿಯನ್ನು ನೆರವೇರಿಸಿದರು. ಸುಮಾರು ಮೂರು ವರ್ಷ ಪ್ರಾಯದ ಗಂಡು ಜಿಂಕೆಯಾಗಿದೆ.
You must be logged in to post a comment Login