Connect with us

UDUPI

ಆಳ ಸಮುದ್ರ ಮೀನುಗಾರಿಕೆಗೆ ತೆರಳಿದ್ದ 8 ಮಂದಿ ಮೀನುಗಾರರು ನಾಪತ್ತೆ

ಆಳ ಸಮುದ್ರ ಮೀನುಗಾರಿಕೆಗೆ ತೆರಳಿದ್ದ 8 ಮಂದಿ ಮೀನುಗಾರರು ನಾಪತ್ತೆ

ಉಡುಪಿ ಡಿಸೆಂಬರ್ 23 ಮಲ್ಪೆ ಬಂದರಿನಿಂದ ಆಳ ಸಮುದ್ರ ಮೀನುಗಾರಿಕೆಗೆ ತೆರಳಿದ್ದ ಬೋಟ್ ಒಂದು ವಾರದಿಂದ ನಾಪತ್ತೆಯಾಗಿದೆ.ಬೋಟ್ ನೊಂದಿಗೆ ತೆರಳಿದ್ದ 8 ಮಂದಿ ಮೀನುಗಾರರು ನಾಪತ್ತೆಯಾಗಿದ್ದಾರೆ.

ಮಲ್ಪೆ ಬಂದರಿನಿಂದ ಸುವರ್ಣ ತ್ರಿಭುಜ ಎಂಬ ಮೀನುಗಾರಿಕಾ ಬೋಟಿನಲ್ಲಿ ಡಿಸೆಂಬರ್ 13 ರಂದು ರಾತ್ರಿ 11 ಗಂಟೆಗೆ ಮೀನುಗಾರಿಕೆಗೆ ತೆರಳಿದ್ದರು. ಈ ಮೀನುಗಾರಿಕಾ ಬೋಟ್ ನಲ್ಲಿ 8 ಮಂದಿ ಮೀನುಗಾರರಿದ್ದರು. ಇದ್ದರು ಎಂದು ಹೇಳಲಾಗಿದೆ.

ಆಳಸಮುದ್ರಕ್ಕೆ ಮೀನುಗಾರಿಕಗೆ ತೆರಳಿದ್ದ ಬೋಟ್ ಡಿಸೆಂಬರ್ 15 ರ ರಾತ್ರಿ ಒಂದು ಗಂಟೆಯವರೆಗೆ ಸಂಪರ್ಕದಲ್ಲಿತ್ತು. ನಂತರ ಸಂಪರ್ಕ ಸಿಗದೇ ಬೋಟ್ ನಾಪತ್ತೆ ಯಾಗಿದೆ ಎಂದು ಹೇಳಲಾಗಿದೆ. ನಾಪತ್ತೆಯಾದ ಬೋಟು ಹಾಗೂ ಎಂಟು ಮಂದಿಯನ್ನು ಹುಡುಕಾಡಿದರೂ ಈವರೆಗೆ ಪತ್ತೆಯಾಗಿಲ್ಲ.

ಬೋಟ್ ಮಾಲಕ ಚಂದ್ರ ಶೇಖರ, ಮೀನುಗಾರರಾದ ದಾಮೋದರ, ಲಕ್ಷ್ಮಣ್, ಸತೀಶ್, ರವಿ, ಹರೀಶ್, ರಮೇಶ್, ಜೋಗಯ್ಯ ನಾಪತ್ತೆಯಾದ ಮೀನುಗಾರರು ಎಂದು ಗುರುತಿಸಲಾಗಿದೆ.

ನಾಪತ್ತೆಯಾದ ಬೋಟು ಹಾಗೂ ಎಂಟು ಮಂದಿಯನ್ನು ಹುಡುಕಾಡಿದರೂ ಈವರೆಗೆ ಪತ್ತೆಯಾಗಿಲ್ಲದ ಹಿನ್ನಲೆಯಲ್ಲಿ ಕರಾವಳಿ ಕಾವಲು ಪಡೆಯಿಂದ ಮೀನುಗಾರರ ಸಂಪರ್ಕಕ್ಕೆ ಯತ್ನ ನಡೆಸುತ್ತಿದ್ದಾರೆ. ಘಟನೆ ಕುರಿತಂತೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.