Connect with us

    DAKSHINA KANNADA

    ಕೊರಗಜ್ಜ ದೇಗುಲ ಅಪವಿತ್ರಗೊಳಿಸಿದವರಲ್ಲಿ ಒಬ್ಬನ ಸಾವು: ಇನ್ನಿಬ್ಬರಿಂದ ತಪ್ಪೊಪ್ಪಿಗೆ

    ಮಂಗಳೂರು, ಎಪ್ರಿಲ್ 01: ಮಂಗಳೂರಿನಲ್ಲಿ ಕೊರಗಜ್ಜ ದೈವಸ್ಥಾನ ಅಪವಿತ್ರಗೊಳಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೊಬ್ಬ ದೈವದೆದುರು ಬಂದು ಕ್ಷಮೆಯಾಚಿಸಿದ ಘಟನೆ ನಡೆದಿದ್ದು, ಆತನನ್ನು ‌ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.

    ದೈವಾರಾಧನೆಯ ‘ಸ್ವಾಮಿ ಕೊರಗಜ್ಜ’ ದೈವಸ್ಥಾನಗಳು ಕರಾವಳಿಯಲ್ಲಿ ಹಲವು ಇದ್ದು, ಕಾರ್ಣಿಕ ಕ್ಷೇತ್ರಗಳು ಎಂದೇ ಪ್ರಸಿದ್ಧಿ ಪಡೆದಿವೆ. ಈ ಪೈಕಿ ಕೆಲವು ಕ್ಷೇತ್ರಗಳ ಕಾಣಿಕೆ ಹುಂಡಿಗೆ ಅಶ್ಲೀಲ ಬರಹ, ಆಕ್ಷೇಪಾರ್ಹ ವಸ್ತುಗಳನ್ನು ಹಾಕಲಾಗಿತ್ತು. ನಿನ್ನೆ ರಾತ್ರಿ ಎಮ್ಮೆಕೆರೆಯಲ್ಲಿ ಕೋಟೆ ಬಬ್ಬುಸ್ವಾಮಿ ದೈವಸ್ಥಾನದ ಜಾತ್ರೆ ನಡೆದಿದ್ದು, ಅಲ್ಲಿಂದ ಬಂದ ವ್ಯಕ್ತಿಯೋರ್ವ ಘಟನೆಯ ಹಿನ್ನೆಲೆಯಲ್ಲಿ ಕ್ಷಮಾಪಣೆ ಮಾಡಿದ್ದಾನೆ.

    ಅಂದು ತನ್ನನ್ನು ಗೆಳೆಯನೊಬ್ಬ ದೇವಸ್ಥಾನಕ್ಕೆ ಕರೆದುಕೊಂಡು ಹೋಗಿದ್ದ. ನಾನು ಹೊರಗೆಡೆಯೇ ಇದ್ದೆ. ಆದರೆ, ಆತ ಇತ್ತೀಚೆಗೆ ಹುಚ್ಚು ಹಿಡಿದಂತೆ ವರ್ತಿಸಿ ಗೋಡೆಗೆ ತಲೆ ಚಚ್ಚಿಕೊಂಡು ಮೃತಪಟ್ಟ ಸುದ್ದಿ ತಿಳಿದಿದೆ. ಇದೀಗ ನನ್ನ ಆರೋಗ್ಯವೂ ಸಹ ಕೆಡುತ್ತಿದ್ದು, ಕ್ಷಮೆ ನೀಡುವಂತೆ ಪ್ರಾರ್ಥಿಸಿದ್ದೇನೆ ಎಂದು ಸೇರಿದ್ದ ಜನರ ಮುಂದೆ ಅಂದು ನಡೆದ ಘಟನಾವಳಿ ಬಿಚ್ಚಿಟ್ಟಿದ್ದಾನೆ.

    ಈ ಬಗ್ಗೆ ಮಾಹಿತಿ ನೀಡಿರುವ ನಗರ ಪೊಲೀಸ್‌ ಕಮಿಷನರ್ ಶಶಿಕುಮಾರ್ ಎನ್., ‘ಸ್ವಾಮಿ ಕೊರಗಜ್ಜ ದೈವಸ್ಥಾನಗಳನ್ನು ಅಪವಿತ್ರಗೊಳಿಸಿದ ಬಗ್ಗೆ ಕಳೆದ ಮೂರು ತಿಂಗಳಲ್ಲಿ ನಗರದ ಪಾಂಡೇಶ್ವರ, ಉಳ್ಳಾಲ ಮತ್ತು ಕದ್ರಿ ಪೊಲೀಸ್‌ ಠಾಣೆಗಳಲ್ಲಿ ಐದು ಪ್ರಕರಣಗಳು ದಾಖಲಾಗಿದ್ದವು. ರಹೀಂ ಹಾಗೂ ತೌಫಿಕ್ ಕೆಲ ದಿನಗಳ ಹಿಂದೆ ಎಮ್ಮೆಕೆರೆ ದೈವಸ್ಥಾನದ ಪೂಜಾರಿ ಅವರನ್ನು ಸಂಪರ್ಕಿಸಿದ್ದು, ಬುಧವಾರ ತಪ್ಪೊಪ್ಪಿಗೆ ನೀಡಿದ್ದಾರೆ. ಬಳಿಕ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದು, ವಿಚಾರಣೆ ನಡೆಸಲಾಗುತ್ತಿದೆ’ ಎಂದರು.

    ‘ನವಾಜ್ ಕಳೆದ ತಿಂಗಳು ತೀವ್ರ ಅನಾರೋಗ್ಯಕ್ಕೆ ತುತ್ತಾಗಿ ಮೃತಪಟ್ಟಿದ್ದನು. ಈಚೆಗೆ ತೌಫಿಕ್‌ಗೂ ತೀವ್ರವಾದ ಆರೋಗ್ಯ ಸಮಸ್ಯೆ ಕಾಣಿಸಿಕೊಂಡಿತ್ತು. ಇದರಿಂದ ತೌಫಿಕ್ ಹಾಗೂ ರಹೀಂ ಭಯಗೊಂಡಿದ್ದರು’ ಎಂದರು. ‘ನವಾಜ್ ಪ್ರಮುಖ ಆರೋಪಿಯಾಗಿದ್ದು, ಮೂರು ಕ್ಷೇತ್ರಗಳನ್ನು ಅಪವಿತ್ರಗೊಳಿಸಿದ ಸಂದರ್ಭದಲ್ಲಿ ರಹೀಂ ಮತ್ತು ತೌಫಿಕ್ ನೆರವಾಗಿದ್ದರು ಎಂದು ಪ್ರಾಥಮಿಕ ತನಿಖೆ ವೇಳೆ ತಿಳಿದು ಬಂದಿದೆ’ ಎಂದು ವಿವರಿಸಿದರು.

    Share Information
    Advertisement
    Click to comment

    You must be logged in to post a comment Login

    Leave a Reply