LATEST NEWS
ಸತ್ತು 8 ತಿಂಗಳುಗಳ ಬಳಿಕ ಮನೆಯೊಂದರಲ್ಲಿ ಅಸ್ಥಿಪಂಜರ ಪತ್ತೆ
ಉಡುಪಿ ಮಾರ್ಚ್ 4: ಮೃತಪಟ್ಟು ಎಂಟು ತಿಂಗಳುಗಳ ಬಳಿಕ ಅಸ್ಥಪಂಜರವೊಂದು ಅಲೆವೂರು ಗುಡ್ಡೆಯಂಗಡಿಯ ಮನೆಯೊಂದರಲ್ಲಿ ಪತ್ತೆಯಾಗಿದೆ. ಮೃತ ಪಟ್ಟಿರುವ ವ್ಯಕ್ತಿಯನ್ನು ಸುರೇಶ್ ಶೆಟ್ಟಿ(47)ಎಂದು ಗುರುತಿಸಲಾಗಿದೆ. ಇವರ ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ.
ಅಲೆವೂರು ಗುಡ್ಡೆಯಂಗಡಿಯ ಮನೆಯೊಂದರಲ್ಲಿ ಈ ಅಸ್ಥಿಪಂಜರ ಪತ್ತೆಯಾಗಿದ್ದು, ವ್ಯಕ್ತಿ ಸತ್ತು ಸುಮಾರು 8 ತಿಂಗಳು ಕಳೆದಿರಬಹುದು ಎಂದು ಅಂದಾಜಿಸಲಾಗಿದೆ. ಸಮಾಜಸೇವಕ ನಿತ್ಯಾನಂದ ಒಳಕಾಡು ಅವರು ಅಸ್ಥಿಪಂಜರವನ್ನು ಶವಪರೀಕ್ಷೆಗೆ ಮಣಿಪಾಲದ ಶವಗಾರಕ್ಕೆ ಸಾಗಿಸಲು ಉಚಿತ ಅಂಬುಲೆನ್ಸ್ ಸೇವೆ ಒದಗಿಸಿ ಪೊಲೀಸ್ ಇಲಾಖೆಗೆ ಸಹಕರಿಸಿದರು