ಬಿಪಿಎಲ್ ಪಡಿತರ ಅಕ್ಕಿಯಲ್ಲಿ ಸತ್ತ ಇಲಿ

ಪುತ್ತೂರು ಮೇ 16: ಬಿಪಿಲ್ ಪಡಿತರದಾರರಿಗೆ ಸಿಗುವಂತಹ ಅಕ್ಕಿಯಲ್ಲಿ ಕಲ್ಲು, ಮಣ್ಣು, ಕಸ, ಮಾಮೂಲಿ. ಆದರೆ ಇದೀಗ ಸತ್ತ ಇಲಿಯೂ ಕೂಡ ಸಿಗಲಾರಂಭಿಸಿದೆ.

ಬಿಪಿಎಲ್ ಕಾರ್ಡ್ ಮೂಲಕ ಬಡವರಿಗೆ ಕೊಡುವಂತಹ ಆಹಾರ ಧಾನ್ಯಗಳಲ್ಲಿ ಮೊದಲು ಎಲ್ಲಾ ರೀತಿಯ ಗುಣಮಟ್ಟವನ್ನು ನೋಡಿಯೇ ಬರುತ್ತದೆ ಎಂಬುದಾಗಿ ಅಧಿಕಾರಿಗಳ ವಾದ ಆದರೆ ಇದೀಗ ಕಡಬದ ಗ್ರಾಹಕರೋರ್ವರಿಗೆ ಈ ರೀತಿ ಸತ್ತ ಇಲಿಯು ಸಿಕ್ಕಿರೋದು ಆಹಾರ ಇಲಾಖೆಯ ಬೇಜಾವಬ್ದಾರಿಯನ್ನು ಮತ್ತು ಗುಣಮಟ್ಟ ಪರೀಕ್ಷೆ ಮಾಡುತ್ತಿಲ್ಲ ಎಂಬುದನ್ನು ತೋರಿಸುತ್ತದೆ.

ಇಂದು ಕಡಬದ ಬಿಪಿಎಲ್ ಪಡಿತರದಾರರಿಗೆ ಕಡಬದ ನ್ಯಾಯ ಬೆಲೆ ಅಂಗಡಿಯಲ್ಲಿ ಸತ್ತ ಇಲಿ ಬಿದ್ದಿರುವ ಅಕ್ಕಿ ದೊರೆತ್ತಿದ್ದು, ಮನೆಯಲ್ಲಿ ಪರಿಶೀಲನೆ ನಡೆಸುವಾಗ ಈ ವಿಚಾರ ಬೆಳಕಿಗೆ ಬಂದಿದೆ.

8 Shares

Facebook Comments

comments