ಪ್ರಭಾ ಜ್ಯುವೆಲ್ಲರಿ ಮಾಲಕ ಪ್ರಭಾಕರ್ ಆಚಾರ್ಯ ಶವ ಪತ್ತೆ

ಮಂಗಳೂರು ಅಗಸ್ಟ್ 28: ಬೋಳಿಯಾರ್ ನ ಪ್ರಭಾ ಫೈನಾನ್ಸ್ ಹಾಗೂ ಪ್ರಭಾ ಜ್ಯುವೆಲ್ಲರಿ ಮಾಲಕ ಪ್ರಭಾಕರ್ ಆಚಾರ್ಯ ಅವರ ಮೃತದೇಹವು ಸುರತ್ಕಲ್ ಬೀಚ್ ಸಮೀಪ ಪತ್ತೆಯಾಗಿದೆ.

ಕಳೆದ ಕೆಲವು ದಿನಗಳಿಂದ ಪ್ರಭಾಕರ್ ಆಚಾರ್ಯ ಅವರು ನಾಪತ್ತೆಯಾಗಿದ್ದರು. ಕಳೆದ ಭಾನುವಾರ ಪ್ರಭಾಕರ ಆಚಾರ್ಯ ಅವರು ಮನೆಯಲ್ಲಿ ಔಷಧಿ ತರುತ್ತೇನೆ ಎಂದು ಹೇಳಿ ಹೊರಟ ಅವರ ಬಳಿಕ ಮನೆಗೆ ಬರದೆ ನಾಪತ್ತೆಯಾಗಿದ್ದರು. ಅವರು ಕಾರು ಮುಡಿಪುವಿನಲ್ಲಿ ಪತ್ತೆಯಾಗಿತ್ತು‌ ಅಲ್ಲದೆ ಮೊಬೈಲ್ ಕೂಡ ಸ್ವಿಚ್ ಆಪ್ ಆಗಿತ್ತು.

ಈ ಕುರಿತಂತೆ ನಾಪತ್ತೆಯ ಬಗ್ಗೆ ಮನೆಯವರು ಕೊಣಾಜೆ ಠಾಣೆಗೆ ದೂರು ನೀಡಿದ್ದರು.ಇಂದು ಬೆಳಿಗ್ಗೆ ಸುರತ್ಕಲ್ ಬೀಚ್ ನಲ್ಲಿ‌ ಇವರ ಮೃತದೇಹವು ಪತ್ತೆಯಾಗಿದ್ದು , ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

Facebook Comments

comments