ತಮಿಳುನಾಡು ನವೆಂಬರ್ 09: ಸಲಿಂಗಕಾಮಕ್ಕೆ ಮಗು ಅಡ್ಡಿಯಾಗುತ್ತದೆ ಎಂದು ತಾಯಿಯೊಬ್ಬಳುತನ್ನ ಹಸುಗೂಸನ್ನೇ ಕೊಲೆ ಮಾಡಿದ ಘಟನೆ ಕರ್ನಾಟಕ ಗಡಿ ಭಾಗ ಅನೇಕಲ್​ ಸಮೀಪ ತಮಿಳುನಾಡಿನ ಕೆಳಮಂಗಲಂ ಸಮೀಪದ ಚಿನ್ನಟ್ಟಿಯಲ್ಲಿ ನಡೆದಿದೆ. ಇದೀಗ ಪುಟ್ಟ ಕಂದಮ್ಮನನ್ನೇ ಕೊಲೆ ಮಾಡಿದ್ದ ಆರೋಪಿ ತಾಯಿ ಮತ್ತು ಆಕೆಯ ಸ್ನೇಹಿತೆಯನ್ನು ಪೊಲೀಸರು ಬಂಧಿಸಿದ್ದಾರೆ.


ಮಗುವಿನ ತಂದೆ ನೀಡಿದ್ದ ದೂರಿನ ಆಧಾರದ ಮೇಲೆ ಕಾರ್ಯಾಚರಣೆ ನಡೆಸಿದ ಪೊಲೀಸರು ತಮಿಳುನಾಡಿನಲ್ಲಿ ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳಾದ ಭಾರತಿ (26) ಎಂಬ ವಿವಾಹಿತೆ ಹಾಗೂ ಸುಮಿತ್ರಾ (22) ಎಂಬ ಯುವತಿಯನ್ನು ಕೆಳಮಂಗಲಂ ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ. ಸುರೇಶ್ ಮತ್ತು ಭಾರತಿ ದಂಪತಿಗೆ ಇಬ್ಬರು ಹೆಣ್ಣು, ಒಂದು ಗಂಡು ಮಗುವಿತ್ತು. ಈಕೆ ಅದೇ ಏರಿಯಾದ ಯುವತಿ ಸುಮಿತ್ರಾ ಜೊತೆ ಸಂಬಂಧ ಹೊಂದಿದ್ದಳಂತೆ. ಇವರಿಬ್ಬರ ಸ್ನೇಹ ಸಲಿಂಗ ಕಾಮಕ್ಕೆ ತಿರುಗಿದೆ. ಪತಿ ಇಲ್ಲದೆ ಇದ್ದಾಗ ಮನೆಯಲ್ಲಿ ಸೇರುತ್ತಿದ್ದರಂತೆ. ಕಳೆದ ನಾಲ್ಕು ವರ್ಷಗಳಿಂದ ಇಬ್ಬರು ಸಲಿಂಗ ಕಾಮಿಗಳಾಗಿದ್ದರು ಎನ್ನಲಾಗ್ತಿದೆ.

ಇದನ್ನೂ ಓದಿ ಗೋ ಕಾಯ್ದೆ ಹೆಸರಲ್ಲಿ ಮನೆ ಜಪ್ತಿ: ಮುಸ್ಲಿಂ ಒಕ್ಕೂಟದಿಂದ ಖಂಡನೆ

ಐದು ತಿಂಗಳ ಹಿಂದೆಯಷ್ಟೇ ಭಾರತಿ ಗಂಡು ಮಗುವಿಗೆ ಜನ್ಮ‌ ನೀಡಿದ್ದಳು. ಮಗು ಆದಾಗಿನಿಂದ ಭಾರತಿ ತನ್ನನ್ನ ದೂರ ಮಾಡ್ತಿದ್ದಾಳೆಂದು ಸುಮಿತ್ರಾ ಕ್ಯಾತೆ ತೆಗೆದಿದ್ದಳಂತೆ. ಇದೇ ವಿಚಾರಕ್ಕೆ ಇಬ್ಬರು ಪದೇ ಪದೇ ಕಿತ್ತಾಡುತ್ತಿದ್ರಂತೆ. ಇಬ್ಬರ ಜಗಳಕ್ಕೆ ಕಾರಣವಾದ ಮಗುವನ್ನ ಕೊಲೆ ಮಾಡುವಂತೆ ಸುಮಿತ್ರಾ ಸಲಹೆ ನೀಡಿದ್ದಳು ಎನ್ನಲಾಗ್ತಿದೆ. ಅದರಂತೆ ಮಗುವನ್ನ ಉಸಿರುಗಟ್ಟಿಸಿ ಭಾರತಿ ಕೊಲೆ ಮಾಡಿದ್ದಳು. ಬಳಿಕ ಹಾಲು ಕುಡಿಸುವಾಗ ನೆತ್ತಿಗೇರಿ ಸಾವನ್ನಪ್ಪಿದೆ ಅಂತ ಕಥೆ ಕಟ್ಟಿದ್ದಾಳೆ. ಆಕೆಯ ಮಾತು ನಂಬಿ ಮಗುವಿನ ಅಂತ್ಯಸಂಸ್ಕಾರ ಕೂಡ ಮಾಡಿದ್ದರು.

ಇದನ್ನೂ ಓದಿ ಬ್ರಹ್ಮಾವರ – ಹಿಂದುಳಿದ ವರ್ಗದ ಹಾಸ್ಟೆಲ್ ನಿಂದ ನಾಪತ್ತೆಯಾಗಿದ್ದ ವಿಧ್ಯಾರ್ಥಿನಿಯರ ಪತ್ತೆಹಚ್ಚಿದ ಪೊಲೀಸರು

ಕಥೆಗೆ ಟ್ವಿಸ್ಟ್ ನೀಡಿದ್ದು ಭಾರತಿ ಮತ್ತು ಸುಮಿತ್ರಾ ಬಳಸುತ್ತಿದ್ದ ಮೊಬೈಲ್. ಈ ಫೋನ್​ನಲ್ಲಿದ್ದ ಫೋಟೋ ವಿಡಿಯೋ ನೋಡಿ ಭಾರತಿ ಗಂಡ ಸುರೇಶ ಶಾಕ್ ಆಗಿದ್ದಾನೆ. ಪೊಲೀಸರಿಗೆ ದೂರು ಕೊಡೋದಾಗಿ ಹೇಳಿದ ಬಳಿಕ ಗಂಡ ಮುಂದೆ ಭಾರತಿ ಸತ್ಯ ಬಾಯ್ಬಿಟ್ಟಿದ್ದಾಳೆ. ಈ ದೂರಿನ ಅನ್ವಯ ಅಧಿಕಾರಿಗಳು ಈ ವಾರದ ಆರಂಭದಲ್ಲಿ ಮರಣೋತ್ತರ ಪರೀಕ್ಷೆಗಾಗಿ ಶವವನ್ನು ಹೊರತೆಗೆದರು. ಮರಣೋತ್ತರ ಪರೀಕ್ಷೆಯಲ್ಲಿ ಮಗುವನ್ನು ಉಸಿರುಗಟ್ಟಿಸಿ ಕತ್ತು ಹಿಸುಕಿ ಕೊಲ್ಲಲಾಗಿದೆ ಎಂದು ತನಿಖಾಧಿಕಾರಿಗಳು ಬಹಿರಂಗಪಡಿಸಿದರು. ವಿಚಾರಣೆಯ ಸಮಯದಲ್ಲಿ, ಮಹಿಳೆ ಪೊಲೀಸರಿಗೆ ತನ್ನ ಗಂಡನ ಮಗುವನ್ನು ಇಟ್ಟುಕೊಳ್ಳಲು ಬಯಸುವುದಿಲ್ಲ. ತನ್ನ ಪತಿ ತನ್ನನ್ನು ನೋಡಿಕೊಳ್ಳುತ್ತಿರಲಿಲ್ಲ. ಹೀಗಾಗಿ ಮಗುವನ್ನು ಕೊಂದೆ ಎಂದು ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದಾರೆ.

Share Information