ಬೆಂಗಳೂರು ಡಿಸೆಂಬರ್ 22: ಕರ್ನಾಟಕದಲ್ಲಿ ಸಿನೆಮಾ ಸ್ಟಾರ್ ಗಳ ಮಾತಿನ ಯುದ್ದ ಜೋರಾಗಿ ನಡೆಯುತ್ತಿದೆ. ಹುಬ್ಬಳ್ಳಿಯಲ್ಲಿ ನಡೆದ ಸಿನೆಮಾ ಕಾರ್ಯಕ್ರಮದಲ್ಲಿ ಕಿಚ್ಚ ಸುದೀಪ್ ಹೇಳಿದ ಯುದ್ದದ ಮಾತಿಗೆ ಇದೀಗ ಪರ ವಿರೋಧ ಚರ್ಚೆಗಳು ಪ್ರಾರಂಭವಾಗಿದ್ದು, ದರ್ಶನ್ ಪತ್ನಿ ಸುದೀಪ್ ಹೇಳಿಕೆಗೆ ಟಾಂಗ್ ನೀಡುವ ಮೂಲಕ ಪ್ಯಾನ್ ವಾರ್ ಗೆ ತುಪ್ಪ ಸುರಿದಿದ್ದಾರೆ.

ಹುಬ್ಬಳ್ಳಿಯಲ್ಲಿ ನಡೆದ ಮಾರ್ಕ್ ಸಿನಿಮಾ ಇವೆಂಟ್ ವೇಳೆ ನಟ ಕಿಚ್ಚ ಸುದೀಪ್ ಯಾರೋ ನಿಮ್ಮನ್ನು ಕೆಣಕಿದ್ರೆ ನೀವು ಅವರ ಭಾಷೆಯಲ್ಲಿ ಉತ್ತರ ಕೊಡಿ. ಇಷ್ಟು ದಿನ ತಾಳ್ಮೆಯಿಂದ ಇದ್ದಿದ್ದು ಸಾಕು’. ಈ ತಿಂಗಳು ಡಿ.25ರಂದು ಮಾರ್ಕ್ ಚಿತ್ರ ಬಿಡುಗಡೆ ಆಗಲಿದೆ. ಆದರೆ ಕೆಲವರು ಈ ಸಮಯಕ್ಕಾಗಿ ಕಾಯುತ್ತಿದ್ದಾರೆ. ಅವರಿಗೆ ಈ ಮೂಲಕ ಹೇಳೋದು ಇಷ್ಟೇ ಯುದ್ಧಕ್ಕೆ ಸಿದ್ಧ ಎಂದು ಸುದೀಪ್ ರಗಡ್ ಆಗಿ ಮಾತಾಡಿದ್ದಾರೆ.
ಇದಕ್ಕೆ ಟಾಂಗ್ ಕೊಟ್ಟ ದರ್ಶನ ಪತ್ನಿ ವಿಜಯಲಕ್ಷ್ಮೀ ಕೆಲವರು ದರ್ಶನ್ ಅವ್ರು ಇಲ್ಲದೇ ಇದ್ದಾಗ ಏನೇನೋ ಮಾತಾಡ್ತಾ ಇದ್ದಾರೆ. ಅವರ ಬಗ್ಗೆ ಅವ್ರ ಫ್ಯಾನ್ಸ್ ಬಗ್ಗೆ ಎಲ್ಲಾ ಮಾತಾಡ್ತಾರೆ. ವೇದಿಕೆ ಮೇಲೆ ನಿತ್ಕೊಂಡು ಮಾತಾಡೋದು… ವೀಡಿಯಾಗಳಲ್ಲಿ ಕುಳಿತು ಮಾತಾಡೋದು… ಹೊರಗೆ ಕುತ್ಕೊಂಡ್ ಮಾತಾಡೋದು ಎಲ್ಲಾ ಮಾಡ್ತಿದ್ದಾರೆ. ಅದೇ ಜನರು ದರ್ಶನ್ ಅವರು ಇದ್ದಾಗ ಬೆಂಗಳೂರಲ್ಲಿ ಇರ್ತಾರಾ ಇಲ್ವಾ ಅಂತಾನೇ ಗೊತ್ತಾಗಲ್ಲ. ಇದಕ್ಕೆಲ್ಲಾ ನಾವು ತಲೆ ಕೆಡಿಸಿಕೊಳ್ಳಬಾರದು. ದರ್ಶನ್ ಅವರು ಹೇಳಿರೋ ಹಾಗೆ ಯಾರ್ ಏನೇ ಮಾತಾಡಿದ್ರೂ ನಾವ್ ನೊಂದುಕೊಳ್ಳಲ್ಲ… ಕೋಪ ಮಾಡ್ಕೊಳ್ಳಲ್ಲ.. ಬೇಜಾರ್ ಮಾಡ್ಕೊಳ್ಳಲ್ಲ. ನಮಗೆ ಬೇಕಾಗಿರುವುದು ಪ್ರೀತಿ ಬೆಂಬಲ ಮಾತ್ರ. ಹೀಗಾಗಿ, ನೀವು ಕೋಪ ಮಾಡ್ಕೊಳ್ಬೇಡಿ, ನೊಂದುಕೊಳ್ಳಬೇಡಿ, ಬೇಜಾರ್ ಮಾಡ್ಕೊಳ್ಳಬೇಡಿ’ ಅಂತ ಫ್ಯಾನ್ಸ್‌ಗೆ ಸಲಹೆ ಕೊಟ್ಟಿದ್ದಾರೆ.

ಈ ಇಬ್ಬರ ಮಾತುಗಳಿಂದ ಇದೀಗ ಸೋಶಿಯಲ್ ಮಿಡಿಯಾದಲ್ಲಿ ಫ್ಯಾನ್ಸ್ ವಾರ್ ಪ್ರಾರಂಭವಾಗಿದೆ. ಇದೀಗ ವಿಜಯಲಕ್ಷ್ಮಿ ಮಾತು ಬೆಂಬಲಿಸಿ ಖುದ್ದು ದರ್ಶನ್ ಫ್ಯಾನ್ಸ್ ಅಖಾಡಕ್ಕೆ ಇಳಿದಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ ಮಾಡ್ತಾ ಮಾತಿನ ಯುದ್ಧ ಸಾರಿದ್ದಾರೆ. ಮಾರ್ಕ್ ಸಿನಿಮಾದ ಪ್ರಚಾರಕ್ಕಾಗಿ ನಡೆದ ಗಿಮಿಕ್ ಅದು ಅಂತ ತಮ್ಮ ಸೋಷಿಯಲ್ ಮೀಡಿಯಾ ಖಾತೆಗಳಲ್ಲಿ ಪೋಸ್ಟ್ ಹಾಕ್ತಿದ್ದಾರೆ. ಇದನ್ನೂ
ಮುಂದುವರಿದು… ನೀವೇ ಯುದ್ಧಕ್ಕೆ ಕರೆದ್ರೆ ನಾವ್ ಬರದೇ ಇರ್ತೀವಾ ಅಂತ ಹೇಳೋದ್ರ ಜೊತೆಗೆ, ಯುದ್ಧ ಏನು ಒಬ್ಬ ಶಕುನಿ ಕೂಡ ಮಾಡ್ತಾನೆ ಜನರ ಪ್ರೀತಿ ಗಳಿಸಿ ಅಂತ ಕುಟುಕಿದ್ದಾರೆ. ಅಲ್ಲದೇ ಡಿಬಾಸ್ ಫ್ಯಾನ್ಸ್. ವಿಜಯಲಕ್ಷ್ಮಿ ದಾವಣಗೆರೆಯಲ್ಲಿನ ಫೋಟೋ ಹಾಕಿ ಟಾಂಗ್ ಕೊಡ್ತಿದ್ದಾರೆ. ಇನ್ನೂ ಕೆಲವರು ಡೆವಿಲ್ ಸಿನಿಮಾದಲ್ಲಿ ದರ್ಶನ್ ಮಾಸ್ ಲುಕ್ ಫೋಟೋವನ್ನ ಹಂಚಿಕೊಂಡು ಸುದೀಪ್ ವಿರುದ್ಧ ಮಾತಿನಲ್ಲೇ ಟಾಂಗ್ ಕೊಡ್ತಿದ್ದಾರೆ.

ವಿಜಯಲಕ್ಷ್ಮಿ ಬೆಂಕಿ ಮಾತಿಗೆ ನಟ ಧನ್ವೀರ್ ಕೂಡ ಶಭಾಷ್ ಎಂದಿದ್ದಾರೆ. ದರ್ಶನ್ ಜೊತೆಗಿನ ಫೋಟೋ ಹಂಚಿಕೊಂಡು, ಕಾಡಲ್ಲಿ ಸಾಕಷ್ಟು ಪ್ರಾಣಿಗಳು ಇರ್ತಾವೆ. ಆದ್ರೆ ಆ ಕಾಡಿಗೆ ಒಂದೇ ಸಿಂಹ ಇರುತ್ತೆ, ಅಂತ ಡೈಲಾಗ್ ಮೂಲಕ ಪರೋಕ್ಷವಾಗಿ ಟಾಂಗ್ ಕೊಟ್ಟಿದ್ದಾರೆ. ಸದ್ಯ ಫ್ಯಾನ್ಸ್ ವಾರ್ ಎಲ್ಲಿಗೆ ನಿಲ್ಲುತ್ತೆ ಅನ್ನೋದನ್ನ ಕಾದುನೋಡಬೇಕಿದೆ.



