LATEST NEWS
ರೆಡ್ ಝೋನ್ ನಿಂದ ಆರೆಂಜ್ ಝೋನ್ ಗೆ ದಕ್ಷಿಣಕನ್ನಡ ಜಿಲ್ಲೆ
ರೆಡ್ ಝೋನ್ ನಿಂದ ಆರೆಂಜ್ ಝೋನ್ ಗೆ ದಕ್ಷಿಣಕನ್ನಡ ಜಿಲ್ಲೆ
ಮಂಗಳೂರು ಎಪ್ರಿಲ್ 27: ಎರಡನೇ ಹಂತದ ಲಾಕ್‌ಡೌನ್ ಮುಗಿಯಲು ಇನ್ನೇನು ಕೆಲವೇ ದಿನಗಳು ಇರುವ ಹಿನ್ನಲೆ ರಾಜ್ಯ ಆರೋಗ್ಯ ಇಲಾಖೆ ರಾಜ್ಯವನ್ನು ನಾಲ್ಕು ವಲಯಗಳನ್ನಾಗಿ ವಿಂಗಡಿಸಿದ್ದು, ಇದರ ಆಧಾರದ ಮೇಲೆ ಲಾಕ್‌ಡೌನ್ ಸಡಿಲಿಕೆ ಮುಂದಾಗಿದೆ.
ಇನ್ನು ರೆಡ್ ಝೋನ್ ನಲ್ಲಿದ್ದ ದಕ್ಷಿಣಕನ್ನಡ ಜಿಲ್ಲೆಯ ಈಗ ಆರೆಂಜ್ ಝೋನ್ ಗೆ ಇಳಿಕೆಯಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾ ಆಕ್ಟಿವ್ ಪ್ರಕರಣಗಳ ಸಂಖ್ಯೆ 6 ರಿಂದ 14 ರ ಸಂಖ್ಯೆಯಲ್ಲಿದ್ದು ಈ ಹಿನ್ನಲೆ ರೆಡ್ ಝೋನ್ ನಿಂದ ಆರೆಂಜ್ ಝೋನ್ ಗೆ ಇಳಿಕೆಯಾಗಿದೆ.
ಇನ್ನು ಪಕ್ಕದ ಕೃಷ್ಣ ನಗರಿ ಉಡುಪಿ ಜಿಲ್ಲೆ ಕೊರೊನಾ ಗ್ರಿನ್ ಝೋನ್ ಆಗಿದೆ. ಉಡುಪಿಯಲ್ಲಿ ದಾಖಲಾದ ಎಲ್ಲಾ ಕೊರೊನಾ ಪ್ರಕರಣಗಳು ಗುಣಮುಖರಾಗಿದ್ದು ಕಳೆದ ಒಂದು ತಿಂಗಳಿನಿಂದ ಜಿಲ್ಲೆಯಲ್ಲಿ ಯಾವುದೇ ಕೊರೊನಾ ಪ್ರಕರಣ ದಾಖಲಾಗಿಲ್ಲ.ಈ ಹಿನ್ನೆಲೆಯಲ್ಲಿ ಉಡುಪಿ ಗ್ರೀನ್ ಝೋನಾಗಿ ಮಾರ್ಪಾಡಾಗಿದ್ದು ಇಲ್ಲಿ ನಿಧಾನವಾಗಿ ಸಾರ್ವಜನಿಕ ಜೀವನ ಆರಂಭವಾಗುವ ಸಾದ್ಯತೆಗಳಿವೆ.
ರಾಜ್ಯದಲ್ಲಿ ಯಾವ್ಯಾವ ಜಿಲ್ಲೆಗಳು ಯಾವ ಝೋನ್ನಲ್ಲಿವೆ?
* ರೆಡ್ ಝೋನ್ ಜಿಲ್ಲೆಗಳು- 1.ಮೈಸೂರು, 2. ಬೆಳಗಾವಿ 3. ಬಾಗಲಕೋಟೆ, 4. ವಿಜಯಪುರ, 5. ಕಲಬುರಗಿ, 6.ಬೆಂಗಳೂರು ನಗರ
* ಆರೆಂಜ್ ಝೋನ್ ಜಿಲ್ಲೆಗಳು – 1. ಬೀದರ್, 2. ಧಾರಾವಾಡ, 3.ಬಳ್ಳಾರಿ, 4.ದಕ್ಷಿಣ ಕನ್ನಡ, 5.ಮಂಡ್ಯ
* ಯೆಲ್ಲೋ ಝೋನ್ ಜಿಲ್ಲೆಗಳು – 1. ಉತ್ತರ ಕನ್ನಡ, 2. ಬೆಂಗಳೂರು ಗ್ರಾಮಾಂತರ, 3 ಗದಗ, 4 ತುಮಕೂರು, 5 ಚಿಕ್ಕಬಳ್ಳಾಪುರ
* ಗ್ರೀನ್ ಜೋನ್ ಜಿಲ್ಲೆಗಳು – 1 ಚಿಕ್ಕಮಗಳೂರು, 2 ಶಿವಮೊಗ್ಗ, 3 ರಾಮನಗರ, 4 ಯಾದಗಿರಿ, 5 ಕೊಪ್ಪಳ, 6 ಹಾವೇರಿ, 7
ರಾಯಚೂರು, 8 ಹಾಸನ, 9 ಚಾಮರಾಜನಗರ, 10 ಕೋಲಾರ, 11 ಉಡುಪಿ, 12 ಕೊಡಗು, 13 ದಾವಣಗೆರೆ, 14 ಚಿತ್ರದುರ್ಗ