DAKSHINA KANNADA
“ಜಿಲ್ಲೆಯಲ್ಲಿಕಾನೂನುಬದ್ದ’ಇ’ ಆಟೋಗಳಿಗೆ ತೊಂದರೆ ಕೊಡದಿರಿ’ ; ದ.ಕ ಜಿಲ್ಲಾಧಿಕಾರಿ ಮುಲ್ಲೈಮುಗಿಲನ್ ಎಚ್ಚರಿಕೆ
ಮಂಗಳೂರು : ಜಿಲ್ಲೆಯಲ್ಲಿ ಸಂಚರಿಸುತ್ತಿರುವ ಇಲೆಕ್ಟ್ರಿಕ್ ಆಟೋ ರಿಕ್ಷಾಗಳಿಗೆ ಯಾವುದೇ ತೊಂದರೆ ಅಥವಾ ನಿರ್ಬಂಧ ಹೇರುವಂತಿಲ್ಲ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಚ್ಚರಿಕೆ ನೀಡಿದ್ದಾರೆ.
‘ಇ’ ಆಟೋಗಳ ಯಾರು ಗೊಂದಲ ಸೃಷ್ಟಿ ಮಾಡಬೇಡಿ. ದೇಶಾದ್ಯಂತ ಇ ಆಟೋ ಗಳಿಗೆ ಇರುವ ನಿಯಮಗಳನ್ನೇ ದಕ್ಷಿಣ ಕನ್ನಡದಲ್ಲಿ ಜಾರಿಗೆ ತರಲಾಗಿದೆ ಹೊರತು ಜಿಲ್ಲೆಯಲ್ಲಿ ಜಿಲ್ಲಾಧಿಕಾರಿ ಯಾವುದೇ ರೀತಿಯ ಹೊಸ ಆದೇಶ ಹೊರಡಿಸಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ದೇಶಾದ್ಯಂತ ಇ ಆಟೋಗಳಿಗೆ ಪರ್ಮಿಟ್ ಯಾವುದೇ ನಿರ್ಬಂಧ ಹೇರುವಂತಿಲ್ಲ. ಈ ಬಗ್ಗೆ ಈ ಹಿಂದೆ ನಿಯಮಾವಳಿ ಜಾರಿ ಮಾಡಿದ್ದಾರೆ. ಇದನ್ನು ಪ್ರಶ್ನಿಸಿ ಇ ಆಟೋ ಚಾಲಕರು ಹೈಕೋರ್ಟ್ ಮೆಟ್ಟಿಲೇರಿದ್ದರು. ಕಾನೂನು ಪ್ರಕಾರ ಇ ಆಟೋ ಗಳಿಗೆ ಯಾವುದೇ ಪರ್ಮಿಟ್ ಬಗ್ಗೆ ನಿರ್ಬಂಧ ಹಾಕುವಂತಿಲ್ಲ. ಹೈಕೋರ್ಟ್ ಕೂಡ ಈ ಬಗ್ಗೆ ಕಾನೂನು ಪಾಲಿಸುವಂತೆ ಸೂಚನೆ ನೀಡಿತ್ತು ಎಂದ ಅವರು ಈ ಬಗ್ಗೆ ಆಟೋ ಚಾಲಕರ ಸಂಘಟನೆಗಳಿಗೆ ತಿಳಿಸಿಕೊಡಲಾಗಿದೆ.
ಜಿಲ್ಲೆಯಲ್ಲಿ ಇ ಆಟೋ ಗಳಿಗೆ ಪ್ರತ್ಯೇಕ ಆದೇಶ ಯಾವುದು ಮಾಡಿಲ್ಲ. ಈ ವಿಚಾರವಾಗಿ ಎರಡು ಆಟೋ ರಿಕ್ಷಾ ಚಾಲಕರು ತಮ್ಮ ಅಭಿಪ್ರಾಯ ಮಂಡಿಸಿದ್ದು ಕಾನೂನು ಪ್ರಕಾರ ಇ ಆಟೋಗಳಿಗೆ ಎಲ್ಲಾ ಕಡೆಯಂತೆ ಅವಕಾಶ ಕೊಡಲಾಗಿದೆ. ಈ ಬಗ್ಗೆ ಯಾವುದೇ ಗೊಂದಲ ಬೇಡ ಎಂದು ಹೇಳಿದ್ದಾರೆ.
ಇದನ್ನೂ ಓದಿ…
You must be logged in to post a comment Login