ಬೆಳ್ತಂಗಡಿ ಜನವರಿ 25: ಪಂಪ್ ಸ್ವಿಚ್ ಹಾಕುವ ವೇಳೆ ಕರೆಂಟ್ ಶಾಕ್ ಹೊಡೆದ ಪರಿಣಾಮ ವ್ಯಕ್ತಿಯೊಬ್ವರು ಸಾವನ್ನಪ್ಪಿದ ಘಟನೆ ಗುರಿಪಳ್ಳ ಎಂಬಲ್ಲಿ ನಡೆದಿದೆ.

ಮೃತರನ್ನು ಕನ್ಯಾಡಿ ಗ್ರಾಮದ ಗುರಿಪಳ್ಳ ಸಮೀಪದ ಕಡ್ತ್ಯಾರು ನಿವಾಸಿ ಶಿವಪ್ರಸಾದ್ ಅಡಪ (48) ಎಂದು ಗುರುತಿಸಲಾಗಿದೆ.
ಶಿವಪ್ರಸಾದ್ ಅವರು ಎಂದಿನಂತೆ ಬೆಳಿಗ್ಗೆ ಮನೆ ಸಮೀಪ ಪಂಪ್ ಸ್ವಿಚ್ ಹಾಕುವ ಸಂದರ್ಭ ವಿದ್ಯುತ್ ಅಘಾತಕ್ಕೊಳಗಾಗಿ ದೂರ ಎಸೆಯಲ್ಪಟ್ಟು ಗಂಭೀರ ಗಾಯಗೊಂಡಿದ್ದು, ತಕ್ಷಣ ಮನೆಯವರು ಅವರನ್ನು ಉಜಿರೆ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಅಷ್ಟೊತ್ತಿಗಾಗಲೇ ಮೃತಪಟ್ಟಿದ್ದರು ಎಂದು ತಿಳಿದು ಬಂದಿದೆ.