Connect with us

DAKSHINA KANNADA

ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ತಗುಲಿ ಬೈಕ್ ಸವಾರ ಸಜೀವ ದಹನ

ಪುತ್ತೂರು : ರಸ್ತೆಯಲ್ಲಿ ತುಂಡಾಗಿ ಬಿದ್ದಿದ್ದ ಹೈ ಟೆನ್ಶನ್ ವಿದ್ಯುತ್ ತಂತಿ ತಗುಲಿದ ಪರಿಣಾಮ ಬೈಕ್ ಸವಾರನೊಬ್ಬ ಸಜೀವ ದಹನಗೊಂಡು ಸಾವನ್ನಪ್ಪಿದ್ದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಪಂಜದಲ್ಲಿ ಸಂಭವಿಸಿದೆ.

ಇಂದು ಮುಂಜಾನೆ ಈ ದುರ್ಘಟನೆ ಸಂಭವಿಸಿದೆ. ಪಂಜದ ನಿಂತಿಕಲ್ಲು ನಕಲ್ಲೆರಿ ಬಳಿ ಈ ದುರ್ಘಟನೆ ನಡದಿದ್ದು, ಬೈಕ್ ಸಮೇತ ಯುವಕ ಸುಟ್ಟು ಕರಕಲಾಗಿದ್ದಾನೆ. ಕಡಬದ ಪೊಲಿಸರು ಘಟನಾ ಸ್ಥಳಕ್ಕೆ ಆಗಮಿಸಿದ್ದು ಯುವಕನ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ.

Facebook Comments

comments