Connect with us

    LATEST NEWS

    ಎಂ.ಎಸ್ ದೋನಿ ಹಾದಿ ಹಿಡಿದ ಕ್ರಿಕೆಟರ್ ಸುರೇಶ್ ರೈನಾ..ಇನ್ಸ್ಟಾ ಗ್ರಾಂ ನಲ್ಲಿ ನಿವೃತ್ತಿ ಘೋಷಣೆ

    ನವದೆಹಲಿ : ಕೆಲವೆ ನಿಮಿಷಗಳ ಮೊದಲು ಭಾರತೀಯ ಕ್ರಿಕೆಟ್ ನ ಮಾಜಿ ಕಪ್ತಾನ ಮಹೇಂದ್ರ ಸಿಂಗ್ ಧೋನಿ ಅಂತರಾಷ್ಟ್ರೀಯ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದ್ದರು. ಈಗ ಅದರ ಬೆನ್ನಲೆ ಇನ್ನೊಬ್ಬ ಕ್ರಿಕೆಟರ್ ಸುರೇಶ್ ರೈನಾ ಕೂಡಾ ಅಂತರಾಷ್ಟ್ರೀಯ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದ್ದಾರೆ.


    ಮಹೇಂದ್ರ ಸಿಂಗ್ ದೋನಿ ನಿವೃತ್ತಿ ಘೋಷಿಸಿದ ಬೆನ್ನಲ್ಲೆ ಇನ್ಸ್ಟಾ ಗ್ರಾಂ ನಲ್ಲಿ ಸುರೇಶ್ ರೈನಾ ತಾವು ಅಂತರಾಷ್ಟ್ರೀಯ ಕ್ರಿಕೆಟ್ ಗೆ ಗುಡ್ ಬೈ ಹೇಳುವುದಾಗಿ ತಿಳಿಸಿದ್ದಾರೆ.

    2005ರಲ್ಲಿ ಸುರೇಶ್ ರೈನಾ ಕ್ರಿಕೆಟ್ ಬದುಕಿಗೆ ಪಾದಾರ್ಪಣೆ ಮಾಡಿದ್ದರು.  ಸುರೇಶ್ ರೈನಾ 226 ಏಕದಿನ ಪಂದ್ಯಗಳನ್ನು ಆಡಿದ್ದು 5,615 ರನ್ ಬಾರಿಸಿದ್ದಾರೆ. ಇನ್ನು 78 ಟಿ20 ಪಂದ್ಯಗಳಲ್ಲಿ 1,605 ರನ್ ಬಾರಿಸಿದ್ದಾರೆ. 19 ಟೆಸ್ಟ್ ಪಂದ್ಯಗಳನ್ನು ಆಡಿರುವ ಅವರು 768 ರನ್ ಬಾರಿಸಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply