Connect with us

    DAKSHINA KANNADA

    ಕುಕ್ಕೆ ಸುಬ್ರಹ್ಮಣ್ಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಕ್ರಿಕೆಟಿಗ ಮನಿಷ್ ಪಾಂಡೆ ದಂಪತಿ

    ಕುಕ್ಕೆ ಸುಬ್ರಹ್ಮಣ್ಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಕ್ರಿಕೆಟಿಗ ಮನಿಷ್ ಪಾಂಡೆ ದಂಪತಿ

    ಸುಬ್ರಹ್ಮಣ್ಯ ಮಾರ್ಚ್ 7: ಭಾರತ ಕ್ರಿಕೆಟ್ ತಂಡದ ಆಟಗಾರ ಹಾಗೂ ಕರ್ನಾಟಕ ಏಕದಿನ ತಂಡದ ನಾಯಕ ಮನೀಶ್ ಪಾಂಡೆ, ತನ್ನ ಪತ್ನಿ ಆಶ್ರಿತಾ ಶೆಟ್ಟಿ ಜೊತೆ ತುಳುನಾಡಿನ ಪ್ರಸಿದ್ದ ನಾಗ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯಕ್ಕೆ ದೇವಾಸ್ಥಾನಕ್ಕೆ ಶನಿವಾರ ಭೇಟಿ ನೀಡಿ ಶ್ರೀ ಕುಕ್ಕೆ ಸುಬ್ರಹ್ಮಣ್ಯ ದೇವರ ದರ್ಶನ ಪಡೆದರು.

    ಕಳೆದ ಡಿಸೆಂಬರ್ ತಿಂಗಳಿನಲ್ಲಿ ಮನೀಶ್ ಪಾಂಡೆ ವಿವಾಹ ತುಳುನಾಡಿನ ಬೆಡಗಿ ತಮಿಳು ಹಾಗೂ ತುಳು ನಟಿ ಆಶ್ರಿತಾ ಶೆಟ್ಟಿ ಜೊತೆ ಮುಂಬಯಿಯಲ್ಲಿ ನಡೆದಿತ್ತು. ಕುಕ್ಕೆ ಕ್ಷೇತ್ರಕ್ಕೆ ವಿವಾಹದ ಬಳಿಕ ದಂಪತಿಗಳ ಮೊದಲ ಭೇಟಿಯಾಗಿದೆ.

    ಮಾ 6ರಂದು ಕುಕ್ಕೆ ಸುಬ್ರಹಣ್ಯಕ್ಕೆ ತಮ್ಮ ಗೆಳೆಯರ ಜೊತೆ ಆಗಮಿಸಿದ ದಂಪತಿಗಳು ಇಲ್ಲಿನ ಖಾಸಗಿ ಹೋಟೆಲ್ ಒಂದರಲ್ಲಿ ತಂಗಿದ್ದರು . ಇಂದು ಬೆಳಿಗ್ಗೆ ದಂಪತಿಗಳು ದೇವಸ್ಥಾನಕ್ಕೆ ಭೇಟಿ ನೀಡಿದ್ದು ನಾಗದೇವರಿಗೆ ಸಲ್ಲಿಕೆಯಾಗುವ ವಿಶೇಷ ಪೂಜೆಯಾದ ಆಶ್ಲೇಷ ಪೂಜೆಯನ್ನು ನೆರೆವೇರಿಸಿದರು. ಬಳಿಕ ಆದಿ ಸುಬ್ರಹ್ಮಣ್ಯ ಹಾಗೂ ಕುಕ್ಕೆ ಸುಬ್ರಹ್ಮಣ್ಯ ದೇವಳದಲ್ಲಿ ದೇವರ ದರ್ಶನ ಪಡೆದರು.

    Share Information
    Advertisement
    Click to comment

    You must be logged in to post a comment Login

    Leave a Reply