ಶಬರಿಮಲೆ ವಿವಾದ ಕಮ್ಯುನಿಸ್ಟ್ ಪಾರ್ಟಿ ಬಂಟ್ವಾಳ ಸಮಿತಿಯ ಕಚೇರಿಗೆ ಬೆಂಕಿ

ಬಂಟ್ವಾಳ ಜನವರಿ 3: ಕಮ್ಯುನಿಸ್ಟ್ ಪಾರ್ಟಿ ಬಂಟ್ವಾಳ ಸಮಿತಿಯ ಕಚೇರಿಗೆ ಕಿಡಿಗೇಡಿಗಳು ಬೆಂಕಿ ಹಾಕಿದ ಘಟನೆ ಬುಧವಾರ ರಾತ್ರಿ ನಡೆದಿದ್ದು, ಇಂದು ಬೆಳಿಗ್ಗೆ ಬೆಳಕಿಗೆ ಬಂದಿದೆ‌.

ಬಿ.ಸಿ.ರೋಡಿನ ಬೈಪಾಸ್ ನ ನಾಲ್ಕು ಮಾರ್ಗದ ಬಳಿ ಕಾರ್ಯಾಚರಿಸುತ್ತಿರುವ ಕಮ್ಯುನಿಸ್ಟ್ ಬಂಟ್ವಾಳ ಸಮಿತಿಯ ಕಚೇರಿಗೆ ಕಿಡಿಗೇಡಿಗಳು ಬೆಂಕಿ ಹಾಕಿದ್ದಾರೆ. ಕಚೇರಿಯ ಸಿಬ್ಬಂದಿ ಇಂದು ಬೆಳಿಗ್ಗೆ ಕಚೇರಿಗೆ ತರಳಿದಾಗ ಈ ಕೃತ್ಯ ಬೆಳಕಿಗೆ ಬಂದಿದೆ.

ಶಬರಿಮಲೆ ಸನ್ನಿಧಾನಕ್ಕೆ ನಿನ್ನೆ ಇಬ್ಬರು ಮಹಿಳೆಯರು ಪ್ರವೇಶಿಸದ ನಂತರ ಕೇರಳದಲ್ಲಿ ಹರತಾಳ ನಡೆಯಿತ್ತಿದ್ದು, ಗಲಾಟೆ ಘರ್ಷಣೆ ಭುಗಿಲೆದ್ದಿದೆ. ಈ ನಡುವೆ ಕಿಡಿಗೇಡಿಗಳು ಬಂಟ್ವಾಳದಲ್ಲಿರುವ ಕಮ್ಯುನಿಸ್ಟ್ ಪಾರ್ಟಿಯ ಕಚೇರಿಗೆ ಬೆಂಕಿ ಹಾಕಿದ್ದಾರೆ.

ಘಟನೆಯಿಂದ ಕಚೇರಿಯೊಳಗಿದ್ದ ಸಂಘಕ್ಕೆ ಸಂಬಂಧ ಪಟ್ಟ ಕಡತಗಳು ಹಾಗೂ ಮುಖ್ಯವಾದ ಅರ್ಜಿಗಳು, ವಿದ್ಯಾರ್ಥಿ ವೇತನದ ಸಂಬಂಧಿಸಿದ ದಾಖಲೆಗಳು ಸುಟ್ಟು ಕರಕಲಾಗಿದೆ. ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳ ಹಾಗೂ ಬಂಟ್ವಾಳ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮುಂದಿನ ಕ್ರಮ ಕೈಗೊಂಡಿದ್ದಾರೆ.

ಶಬರಿಮಲೆ ವಿವಾದದ ಹಿನ್ನೆಲೆಯಲ್ಲಿ ಇಂದು ಕೇರಳದಲ್ಲಿ ಹರತಾಳ ನಡೆಯುತ್ತಿರುವ ಹಿನ್ನೆಲೆಯಲ್ಲಿ ಈ ಕೃತ್ಯ ಎಸಯಲಾಗಿದೆ ಎಂದು ಶಂಕಿಸಲಾಗಿದೆ.