Connect with us

    DAKSHINA KANNADA

    ಪ್ರಕೃತಿ ವಿಸ್ಮಯ ಕರು ಹಾಕದೇ ಹಾಲು ನೀಡುತ್ತಿರುವ ದನ

    ಪ್ರಕೃತಿ ವಿಸ್ಮಯ ಕರು ಹಾಕದೇ ಹಾಲು ನೀಡುತ್ತಿರುವ ದನ

    ಉಪ್ಪಿನಂಗಡಿ ಅಕ್ಟೋಬರ್ 25: ದನವೊಂದ ಕರು ಹಾಕದೇ ಹಾಲು ನೀಡುತ್ತಿರುವ ವಿಸ್ಮಯ ಘಟನೆಯೊಂದು ನಡೆದಿದೆ. ಉರುವಾಲು ಗ್ರಾಮದ ಮುಂಡ್ರೊಟ್ಟು ಎಂಬಲ್ಲಿನ ಕೃಷಿಕ ಜಾರಪ್ಪ ಗೌಡ ಎಂಬುವರ ಮನೆಯಲ್ಲಿರುವ ಈ ದನ ಕರು ಹಾಕದೇ ದಿನಕ್ಕೆ 3 ಲೀಟರ್ ನಷ್ಟು ಹಾಲನ್ನು ನೀಡುತ್ತಿದೆ.

    15 ತಿಂಗಳ ಹಿಂದೆ ಜಾರಪ್ಪ ಗೌಡರು ಮಾರಾಟ ಮಾಡಲು ಉದ್ದೇಶಿಸಿದ್ದ ದನವೊಂದು ಮಾರಾಟಕ್ಕೆ ಒಳಗಾಗುವ ಮುನ್ನವೇ ಕರುವಿಗೆ ಜನ್ಮವಿತ್ತಿತ್ತು. ಆದರೆ ಜನಿಸಿದ ಕರುವಿಗೆ ನಾಲ್ಕು ಕಾಲಿನ ಬದಲಾಗಿ ಐದು ಕಾಲು, ನಾಲ್ಕು ಮೊಲೆ ತೊಟ್ಟಿನ ಬದಲಾಗಿ ಕೇವಲ ಮೂರು ಮೊಲೆ ತೊಟ್ಟು ಕಂಡು ಬಂದಿತ್ತು. ಕಾಲಿನಲ್ಲಿ ಸಾಮಾನ್ಯವಾಗಿ 2 ಗೊರಸುಗಳಿರುವ ಬದಲು ಐದನೇ ಕಾಲಿನಲ್ಲಿ ಮೂರು ಗೊರಸುಗಳಿದ್ದು ವಿಶೇಷವಾಗಿತ್ತು. ಒಂದು ವರ್ಷ ಪ್ರಾಯದ ಈ ದನ ಈಗ ಕರು ಹಾಕದೆಯೇ ದಿನಕ್ಕೆ 3 ಲೀ ಹಾಲು ನೀಡುತ್ತಿದ್ದು, ಜನಾಕರ್ಷಣೆಗೆ ಒಳಗಾಗಿದೆ.

    Share Information
    Advertisement
    Click to comment

    You must be logged in to post a comment Login

    Leave a Reply