Connect with us

    DAKSHINA KANNADA

    ಲಾವತ್ತಡ್ಕದಲ್ಲಿ ಪಲ್ಟಿಯಾದ ಟೆಂಪೋ ಟ್ರಾವೆಲ್ಲರ್‌ ನಲ್ಲಿ ಜಾನುವಾರು ಮಾಂಸ ಪತ್ತೆ

    ಲಾವತ್ತಡ್ಕದಲ್ಲಿ ಪಲ್ಟಿಯಾದ ಟೆಂಪೋ ಟ್ರಾವೆಲ್ಲರ್‌ ನಲ್ಲಿ ಜಾನುವಾರು ಮಾಂಸ ಪತ್ತೆ

    ನೆಲ್ಯಾಡಿ ಮಾ.17: ರಾಷ್ಟ್ರೀಯ ಹೆದ್ದಾರಿ 17 ನೆಲ್ಯಾಡಿ ಬಳಿ ಅಪಘಾತಕ್ಕೀಡಾಗಿದ್ದ ಟೆಂಪೋ ಟ್ರಾವೆಲ್ಲರ್ ನಲ್ಲಿ ಜಾನುವಾರು ಮಾಂಸ ಪತ್ತೆಯಾದ ಘಟನೆ ನಡೆದಿದೆ.

    ರಾಷ್ಟ್ರೀಯ ಹೆದ್ದಾರಿ 75ರ ನೆಲ್ಯಾಡಿ ಸಮೀಪದ ಲಾವತ್ತಡ್ಕದಲ್ಲಿ ಇಂದು ಟೆಂಪೋ ಟ್ರಾವೆಲ್ಲರ್‌ವೊಂದು ಪಲ್ಟಿಯಾಗಿದೆ. ವಾಹನ ಅಪಘಾತದ ಸುದ್ದಿ ತಿಳಿಯುತ್ತಿದ್ದಂತೆ ನೆಲ್ಯಾಡಿ ಹೊರಠಾಣೆ ಪೊಲೀಸರು ಘಟನಾ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದ ವೇಳೆ ಟರ್ಪಲ್‌ವೊಂದರಲ್ಲಿ ಕಟ್ಟಿದ್ದ ಜಾನುವಾರು ಮಾಂಸ ಪತ್ತೆಯಾಗಿದೆ.

    ವಾಹನ ಹಾಸನ ಕಡೆಯಿಂದ ಉಪ್ಪಿನಂಗಡಿಗೆ ಬರುತ್ತಿದ್ದ ವೇಳೆ ಲಾವತ್ತಡ್ಕದಲ್ಲಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಮಾಂಸ ಹಾಗೂ ವಾಹನವನ್ನು ಪೊಲೀಸರು ವಶಪಡಿಸಿಕೊಂಡಿದ್ದು ಆರೋಪಿಗಳು ಪರಾರಿಯಾಗಿದ್ದಾರೆಂದು ತಿಳಿದು ಬಂದಿದೆ.

    Share Information
    Advertisement
    Click to comment

    You must be logged in to post a comment Login

    Leave a Reply