Connect with us

LATEST NEWS

ಮಂಗಳೂರು – ಅಪಾರ್ಟ್ಮೆಂಟ್ ಗಳಲ್ಲಿ ಕೊರೊನಾ ಪ್ರಕರಣ ದಾಖಲಾದರೆ.. ಅಪಾರ್ಟ್ಮೆಂಟ್ ನಲ್ಲಿ ವಾಸಿಸುವ ಎಲ್ಲರ ಕೊರೊನಾ ಪರೀಕ್ಷೆ

ಮಂಗಳೂರು ಜೂನ್ 10: ಇನ್ನು ಮುಂದೆ ಮಂಗಳೂರು ನಗರದಲ್ಲಿರುವ ಅಪಾರ್ಟ್ ಮೆಂಟ್ ಗಳಲ್ಲಿ ಕೊರೊನಾ ಪ್ರಕರಣಗಳು ಪತ್ತೆಯಾದರೇ ಅಪಾರ್ಟ್ಮೆಂಟ್ ನಲ್ಲಿ ವಾಸಿಸುವ ಎಲ್ಲಾ ಜನರ ಕೊರೊನಾ ಪರೀಕ್ಷೆ ನಡೆಸಲಾಗುವುದು ಎಂದು ಮಂಗಳೂರು ಪಾಲಿಕೆ ಆಯುಕ್ತ ಅಕ್ಷಿ ಶ್ರೀಧರ್ ತಿಳಿಸಿದ್ದಾರೆ.

 

ಮಂಗಳೂರು ನಗರದಲ್ಲಿ ಸದ್ಯ ಕೊರೊನಾ ಪಾಸಿಟಿವಿಟಿ ಶೇಕಡ 17 ರಷ್ಟು ಇದ್ದು, ಇದನ್ನು ಕಡಿಮೆ ಮಾಡುವ ಹಿನ್ನಲೆ ಕೊರೊನಾ ಪರೀಕ್ಷೆಗಳನ್ನು ಹೆಚ್ಚಿಸುವುದು ಅಗತ್ಯವಾಗಿದೆ ಎಂದ ಅವರು ನಗರದ ವಸತಿ ಅಪಾರ್ಟ್ಮೆಂಟ್ನಲ್ಲಿ ಯಾವುದೇ ಹೊಸ ಕೊರೊನಾ ಪ್ರಕರಣ ದಾಖಲಾದರೆ , ಆ ಆಪಾರ್ಟ್ಮೆಂಟ್ ನಲ್ಲಿ ವಾಸಿಸುವ ಎಲ್ಲರನ್ನೂ ಪಾರ್ಥಮಿಕ ಸಂಪರ್ಕ ಎಂದು ಗುರುತಿಸಿ ಎಲ್ಲರ ಕೊರೊನಾ ಪರೀಕ್ಷೆ ನಡೆಸಲಾಗುವುದು. ಈ ಮೂಲಕ ಕೊರೊನಾ ಹರಡುವಿಕೆಯನ್ನು ತಡೆಯಲು ಸಾಧ್ಯ ಎಂದು ಆಯುಕ್ತರು ತಿಳಿಸಿದ್ದಾರೆ.