ಬಸ್ ನಲ್ಲೇ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ದಂಪತಿ ಆಸ್ಪತ್ರೆಗೆ ದಾಖಲು

ಉಡುಪಿ ಜನವರಿ 9: ಖಾಸಗಿ ಬಸ್ಸಿನಲ್ಲಿ ವಿಷ ಕುಡಿದು ದಂಪತಿಗಳಿಬ್ಬರು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಉಡುಪಿ ಜಿಲ್ಲೆ ಕುಂದಾಪುರ ತಾಲೂಕಿನ ಕೊಲ್ಲೂರಿನಲ್ಲಿ ನಡೆದಿದೆ. ತಮಿಳುನಾಡು ಮೂಲದ ರಾಜ್ ಕುಮಾರ್ ಹಾಗೂ ಪತ್ನಿ ಸಂಗೀತಾ ಗಂಭೀರವಾದವರು. ವಿಷಪ್ರಾಶನದಿಂದ ಗಂಭೀರ ಸ್ಥಿತಿಯಲ್ಲಿದ್ದ ದಂಪತಿಗಳನ್ನು ಕುಂದಾಪುರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಉಡುಪಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

ತಮ್ಮ ಒಂದೂವರೆ ವರ್ಷದ ಮಗನ ಜೊತೆ ಕೊಲ್ಲೂರಿಗೆ ಬಂದಿದ್ದ ದಂಪತಿಗಳು ಪೂಜೆ ಮುಗಿಸಿ ವಾಪಸ್ ಬರುವಾಗ ಬಸ್ಸಿನಲ್ಲೇ ವಿಷಸೇವನೆ ಮಾಡಿದ್ದಾರೆ. ಈ ಘಟನೆಯಿಂದ ಬಾಲಕ ಒಂಟಿಯಾಗಿದ್ದು ಬಾಲಕನ ನೆರವಿಗೆ ಸಹ ಪ್ರಯಾಣಿಕರು ಧಾವಿಸಿದ್ದಾರೆ. ಈ ಬಗ್ಗೆ ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.