Connect with us

    LATEST NEWS

    ನಾಗಮಂಗಲದ ವ್ಯಕ್ತಿಗೆ ಕೊರೊನಾ ಸೊಂಕು ತೆಕ್ಕಟ್ಟೆಯ ಪೆಟ್ರೋಲ್‌ ಪಂಪ್ ಸೀಲ್

    ನಾಗಮಂಗಲದ ವ್ಯಕ್ತಿಗೆ ಕೊರೊನಾ ಸೊಂಕು ತೆಕ್ಕಟ್ಟೆಯ ಪೆಟ್ರೋಲ್‌ ಪಂಪ್ ಸೀಲ್

    ಉಡುಪಿ ಎಪ್ರಿಲ್ 28: ಮುಂಬಯಿಯಿಂದ ಸರಕು ಸಾಗಾಟ ವಾಹನದಲ್ಲಿ ಬಂದಿದ್ದ ಮಂಡ್ಯ ಮೂಲದ ವ್ಯಕ್ತಿಗೆ ಈಗ ಕೋವಿಡ್ 19 ಸೋಂಕು ಇರುವುದು ಪತ್ತೆಯಾಗಿದೆ. ಆತನ ಟ್ರಾವೆಲ್ ಹಿಸ್ಟರಿಯಲ್ಲಿ ದಾರಿ ಮಧ್ಯೆ ಈತ ಉಡುಪಿ ಕುಂದಾಪುರ ಸಮೀಪದ ತೆಕ್ಕಟ್ಟೆಯ ಪೆಟ್ರೋಲ್‌ ಬಂಕ್‌ನಲ್ಲಿ ಸ್ನಾನ ಮಾಡಿ ಉಪಹಾರ ಕೂಡ ಸೇವಿಸಿದ್ದು ದೃಢವಾಗಿರುವುದರಿಂದ ತಡರಾತ್ರಿ ಬಂಕ್ ನ್ನು ಸೀಲ್‌ಡೌನ್‌ ಮಾಡಲಾಗಿದೆ.

    ಖರ್ಜೂರ ತುಂಬಿದ ಗೂಡ್ಸ್ ಲಾರಿ ಹತ್ತಿಕೊಂಡು ಮುಂಬೈನಿಂದ ಮಂಡ್ಯಕ್ಕೆ ಪ್ರಯಾಣಿಸಿದ ವ್ಯಕ್ತಿಗೆ ಕೊರೊನಾ ಆವರಿಸಿತ್ತು. ಆತ ದಾರಿ ನಡುವೆ ಉಡುಪಿಯ ತೆಕ್ಕಟ್ಟೆಯ ಶಿವಪ್ರಸಾದ್ ಪೆಟ್ರೋಲ್ ಸ್ಟೇಷನ್ ನಲ್ಲಿ ಸ್ನಾನ ಮಾಡಿ ಊಟ ಮಾಡಿ ಕೊಂಚ ವಿರಮಿಸಿದ್ದ. ಹೀಗಾಗಿ ಉಡುಪಿಯ ಸಂಪರ್ಕಿತರನ್ನು ಕ್ವಾರಂಟೈನ್ ಮಾಡಲಾಗಿದೆ.

    ತೆಕ್ಕಟ್ಟೆ ಶಿವಪ್ರಸಾದ್ ಪೆಟ್ರೋಲ್ ಬಂಕನ್ನು ರಾತ್ರೋರಾತ್ರಿ ಜಿಲ್ಲಾಡಳಿತ ಸೀಲ್ ಮಾಡಿದೆ. ಟಿಫನ್ ಮಾಡಿದ ಸ್ಥಳವನ್ನು ಪತ್ತೆ ಹಚ್ಚಿದ ಕುಂದಾಪುರ ಪೊಲೀಸರು, ಟೋಲ್ ಸಿಬ್ಬಂದಿಯನ್ನು ಕೂಡ ಕ್ವಾರಂಟೈನ್ ಮಾಡಿದ್ದಾರೆ. ರಾಷ್ಟ್ರೀಯ ಹೆದ್ದಾರಿ 66 ರಲ್ಲಿರುವ ಪೆಟ್ರೋಲ್ ಬಂಕ್, ಬಹಳಷ್ಟು ಜನ ಓಡಾಡುವ ಏರಿಯಾ ಇದಾಗಿದೆ. ಹಾಗಾಗಿ ಆತಂಕ ಮನೆಮಾಡಿದೆ.

    ಮಾಧ್ಯಮಗಳಿಗೆ ಮಾಹಿತಿ ನೀಡಿದ ಜಿಲ್ಲಾಧಿಕಾರಿ ಜಿ. ಜಗದೀಶ್ ಗಡಿಯನ್ನು ಸೀಲ್ ಮಾಡಿದ್ದರೂ ಗೂಡ್ಸ್ ಬಿಡಬೇಕಾಗುತ್ತದೆ. ಲಾರಿ, ಟ್ಯಾಂಕರಲ್ಲಿ ಅವಿತುಕುಳಿತು ಪ್ರಯಾಣ ಮಾಡುವವರ ಮೇಲೆ ಕೂಡಾ ನಿಗಾ ವಹಿಸಲು ಸೂಚಿಸಲಾಗಿದೆ ಎಂದರು.

    Share Information
    Advertisement
    Click to comment

    You must be logged in to post a comment Login

    Leave a Reply