ಮಂಗಳೂರು ನಿರುಮಾರ್ಗದ ಮಹಿಳೆಗೆ ಕೊರೊನಾ ಸೊಂಕು

ಮಂಗಳೂರು ಮೇ.20: ಮಂಗಳೂರಿನಲ್ಲಿ ಇಂದು ಒಂದು ಕೊರೊನಾ ಪ್ರಕರಣ ದಾಖಲಾಗಿದೆ. ಮಂಗಳೂರಿನ ನಿರುಮಾರ್ಗದ ಕುಟ್ಟಿಕಾಲ ನಿವಾಸಿ ಗೆ ಕೊರೊನಾ ಸೊಂಕು ದೃಢಪಟ್ಟಿದೆ.

ಇವರು ಮೇ 10 ರಂದು ಕಾರಿನಲ್ಲಿ ಬೆಂಗಳೂರಿನ ರಾಜಾಜಿನಗರದಿಂದ ಮಂಗಳೂರಿನ ನೀರುಮಾರ್ಗಕ್ಕೆ ಆಗಮಿಸಿದ್ದರು. ಅಸ್ತಮಾ ಮತ್ತು ಬಿಪಿಯಿಂದಾಗಿ ವೆನ್ಲಾಕ್ ಆಸ್ಪತ್ರೆಗೆ ಮೇ.17ರಂದು ದಾಖಲಾಗಿದ್ದರು. ಇಂದು ಅವರಿಗೆ ಕೊರೊನಾ ಸೊಂಕು ದೃಢಪಟ್ಟಿದೆ. ಇದು ಸದ್ಯ ಮಂಗಳೂರು ನಗರದಲ್ಲಿ ಆತಂಕಕ್ಕೆ ಕಾರಣವಾಗಿದೆ.

ಅಲ್ಲದೆ ಮಹಿಳೆ ಬೆಂಗಳೂರಿನಲ್ಲಿ ಕೊರಿಯರ್ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು ಎಂದು ಹೇಳಲಾಗಿದ್ದು, ಮಹಿಳೆಗೆ ರಾಜಾಜಿನಗರದಲ್ಲಿ ಹಲವರ ಸಂಪರ್ಕ ಸಾಧ್ಯತೆ ಇದೆ. ಇಂದಿನ ಒಂದು ಪ್ರಕರಣದೊಂದಿಗೆ ಜಿಲ್ಲೆಯಲ್ಲಿ ಕೊರೊನಾ ಸೊಂಕಿತರ ಸಂಖ್ಯೆ 55 ಕ್ಕೆ ಏರಿಕೆಯಾಗಿದೆ.