Connect with us

    LATEST NEWS

    ಮಂಗಳೂರಿನಲ್ಲಿ ದುಬೈನಿಂದ ಆಗಮಿಸಿದ ವ್ಯಕ್ತಿಯಲ್ಲಿ ಕರೋನಾ ವೈರಸ್ ಪತ್ತೆ

    ಮಂಗಳೂರಿನಲ್ಲಿ ದುಬೈನಿಂದ ಆಗಮಿಸಿದ ವ್ಯಕ್ತಿಯಲ್ಲಿ ಕರೋನಾ ವೈರಸ್ ಪತ್ತೆ

    ಮಂಗಳೂರು ಮಾರ್ಚ್ 22: ಮಂಗಳೂರು ದುಬೈಯಿಂದ ಮಂಗಳೂರಿಗೆ ಆಗಮಿಸಿದ್ದ ಭಟ್ಕಳ ಮೂಲದ ವ್ಯಕ್ತಿಯಲ್ಲಿ ಕರೋನಾ ವೈರಸ್ ಪತ್ತೆಯಾಗಿದೆ ಎಂದು ದಕ್ಷಿಣಕನ್ನಡ ಜಿಲ್ಲಾಧಿಕಾರಿ ಸಿಂದೂ ಭಿ ರೂಪೇಶ್ ಮಾಹಿತಿ ನೀಡಿದ್ದಾರೆ.

    ಸೊಂಕಿತ ವ್ಯಕ್ತಿ ಮಾರ್ಚ್ 19 ರಂದು ಸ್ಪೈಸ್ ಜೆಟ್ ವಿಮಾನದ ಮೂಲಕ ಮಂಗಳೂರು ವಿಮಾನ ನಿಲ್ದಾಣಕ್ಕೆ ಬೆಳಿಗ್ಗೆ 5.45 ಕ್ಕೆ ದುಬೈಯಿುಂದ ಆಗಮಿಸಿದ್ದರು. ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ತಪಾಸಣೆ ವೇಳೆ ಸೊಂಕಿತ ವ್ಯಕ್ತಿಯಲ್ಲಿ ಕರೋನಾದ ಲಕ್ಷಣಗಳು ಕಂಡು ಬಂದ ಹಿನ್ನಲೆ ನೇರವಾಗಿ ವ್ಯಕ್ತಿಯನ್ನು ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದ್ದು ವ್ಯಕ್ತಿಯನ್ನು ಐಸೋಲೇಷನ್ ವಾರ್ಡ್ ನಲ್ಲಿಡಲಾಗಿದ್ದು, ಇಂದು ಕರೋನಾ ವೈರಸ್ ವಿರುವ ಬಗ್ಗೆ ರಿಪೋರ್ಟ್ ಬಂದಿದೆ.

    ವಿಮಾನ ನಿಲ್ದಾಣದಿಂದ ನೇರವಾಗಿ ಆಸ್ಪತ್ರೆಗೆ ಕರೆದುಕೊಂಡ ಬಂದ ಹಿನ್ನಲೆ ಬೆರೆ ಯಾರ ಸಂಪರ್ಕದಲ್ಲಿರುವ ಸಾಧ್ಯತೆಯಿಲ್ಲ. ಆದರೆ ವಿಮಾನದಲ್ಲಿದ್ದ 165 ಪ್ರಯಾಣಿಕರ ಮೇಲೂ ನಿಗಾ ಇಡಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply