Connect with us

LATEST NEWS

ಕೊರೊನಾ ಲಾಕ್ ಡೌನ್ ನಡುವೆ ಉಡುಪಿಯಲ್ಲಿ ನಡೆದ 354 ಮದುವೆ

ಉಡುಪಿ ಎಪ್ರಿಲ್ 25: ಕೊರೊನಾದ ಎರಡನೇ ಅಲೆ ಹಿನ್ನಲೆ ಮುನ್ನೆಚ್ಚರಿಕಾ ಕ್ರಮವಾಗಿ ರಾಜ್ಯದಲ್ಲಿ ಎರಡು ದಿನ ವಿಕೇಂಡ್ ಕರ್ಪ್ಯೂ ಜಾರಿಗೊಳಿಸಲಾಗಿತ್ತು. ಈ ನಡುವೆ ಇಂದು ಕರಾವಳಿ ಜಿಲ್ಲೆಗಳಲ್ಲಿ ಅತೀ ಹೆಚ್ಚು ಮದುವೆಗ ಇದ್ದ ಕಾರಣ..ಕರ್ಪ್ಯೂ ನಡುವೆ ನಡೆಯುವ ಮದುವೆಗೆ ಕಠಿಣ ನಿಯಮಗಳನ್ನು ಸರಕಾರದ ಹೇರಿತ್ತು.


ಅದರಂತೆ ಉಡುಪಿಯಲ್ಲೂ ಕೂಡಾ ಸರಳವಾಗಿ ಮದುವೆಗಳು ನಡೆದಿದೆ. ಇಂದು ಜಿಲ್ಲೆಯಲ್ಲಿ ಅನುಮತಿ ನಡೆದ 354 ಮದುವೆಗಳು ನಡೆದಿದ್ದು. ಸಾವಿರ ಆಮಂತ್ರಣ ಅಚ್ಚು ಹಾಕಿಸಿದ ಮನೆಗಳು 50 ಜನಕ್ಕೆ ಸೀಮಿತಗೊಳಿಸಿ ಮದುವೆ ಕಾರ್ಯ ಪೂರೈಸುತ್ತಿವೆ. ಮದುವೆಯನ್ನು ಫೇಸ್​​ಬುಕ್​, ಯುಟ್ಯೂಬ್​ನಲ್ಲಿ ಲೈವ್ ಮಾಡಿ ಕುಟುಂಬಸ್ಥರು ಮನೆಯಲ್ಲೇ ಕುಳಿತು ಮದುವೆ ನೋಡುತ್ತಿದ್ದಾರೆ.